Samsung Enterprise Edition: ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಿಹಿ ಸುದ್ದಿ. ಕಂಪನಿಯು ತನ್ನ 'ಗ್ಯಾಲಕ್ಸಿ ಎಸ್ 24' ಮತ್ತು 'ಗ್ಯಾಲಕ್ಸಿ ಎಸ್ 24 ಅಲ್ಟ್ರಾ' ಮೊಬೈಲ್‌ಗಳ ಎಂಟರ್‌ಪ್ರೈಸ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಎಂಟರ್‌ಪ್ರೈಸ್ ಆವೃತ್ತಿಯ ವಿಶೇಷತೆ ಎಂದರೆ, ಎರಡೂ 3 - ವರ್ಷದ ಸಾಧನದ ವಾರಂಟಿ ಮತ್ತು ಏಳು ವರ್ಷಗಳ ಫರ್ಮ್‌ವೇರ್ ಅಪ್ಡೇಟ್ಗಳೊಂದಿಗೆ ಬರುತ್ತವೆ.
ವಿಶೇಷತೆಗಳು: ಕಂಪನಿಯು ಈ ಎರಡೂ ಮೊಬೈಲ್‌ಗಳಲ್ಲಿ ಮೂರು ವರ್ಷಗಳ ವಾರಂಟಿಯನ್ನು ನೀಡುತ್ತದೆ. ಇದು ಸಾಧನ ಸುರಕ್ಷತೆ ಮತ್ತು ಎಂಟರ್‌ಪ್ರೈಸ್ ಮೊಬಿಲಿಟಿ ಮ್ಯಾನೇಜ್‌ಮೆಂಟ್ (EMM) ಗಾಗಿ 'ಗ್ಯಾಲಕ್ಸಿ ಎಐ' ವೈಶಿಷ್ಟ್ಯಗಳೊಂದಿಗೆ ನಾಕ್ಸ್ ಸೂಟ್‌ಗೆ ಒಂದು ವರ್ಷದ ಚಂದಾದಾರಿಕೆ ಸಹ ನೀಡುತ್ತದೆ. ಎಂಟರ್‌ಪ್ರೈಸ್ ಗ್ರಾಹಕರು ಎರಡನೇ ವರ್ಷದಿಂದ ಶೇಕಡ 50ರಷ್ಟು ರಿಯಾಯಿತಿಯಲ್ಲಿ ನಾಕ್ಸ್ ಸೂಟ್ ಚಂದಾದಾರಿಕೆಯನ್ನು ಪಡೆಯಬಹುದು.
ಕಂಪನಿಯು ಏಳು ವರ್ಷಗಳ ಓಎಸ್ ಅಪ್ಡೇಟ್ ಅನ್ನು ಒದಗಿಸುವುದಾಗಿ ಘೋಷಿಸಿದೆ. ಇದಲ್ಲದೇ, ಈ ಮೊಬೈಲ್‌ಗಳು ಸರ್ಚ್ ಮಾಡಲು ಗೂಗಲ್ ಸರ್ಕಲ್, ಲೈವ್ ಟ್ರಾನ್ಸ್‌ಲೇಟ್, ಇಂಟರ್ಪ್ರಿಟರ್, ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್, ಚಾಟ್ ಅಸಿಸ್ಟ್‌ನಂತಹ 'ಗ್ಯಾಲಕ್ಸಿ ಎಐ' ವೈಶಿಷ್ಟ್ಯಗಳನ್ನು ಸಹ ಹೊಂದಿವೆ.
'ಗ್ಯಾಲಕ್ಸಿ ಎಸ್ 24' ಮಾದರಿಯ ವೈಶಿಷ್ಟ್ಯಗಳು:
- ಡಿಸ್ಪ್ಲೇ: 6.2-ಇಂಚಿನ ಪೂರ್ಣ HD+
- ಬ್ಯಾಟರಿ: 4,000 mAh
ಕ್ಯಾಮೆರಾ ಸೆಟಪ್: ಈ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು 50MP ಪ್ರೈಮರಿ ವೈಡ್ ಸೆನ್ಸಾರ್, 12MP ಅಲ್ಟ್ರಾವೈಡ್ ಸೆನ್ಸಾರ್ ಮತ್ತು 10MP ಟೆಲಿಫೋಟೋ ಸೆನ್ಸಾರ್ ಹೊಂದಿದೆ.
'ಗ್ಯಾಲಕ್ಸಿ ಎಸ್ 24 ಅಲ್ಟ್ರಾ' ಮಾದರಿಯ ವೈಶಿಷ್ಟ್ಯಗಳು:
- ಡಿಸ್ಪ್ಲೇ: 6.8-ಇಂಚಿನ ಎಡ್ಜ್ QHD+ ಡೈನಾಮಿಕ್ AMOLED 2X ಸ್ಕ್ರೀನ್
- ರಿಫ್ರೆಶ್ ರೇಟ್: 1-120 Hz ಅಡಾಪ್ಟಿವ್
- ಪ್ರೊಸೆಸರ್: Qualcomm Snapdragon 8-Gen 3 ಚಿಪ್ಸೆಟ್
- ಬ್ಯಾಟರಿ: 5,000 mAh
ಕ್ಯಾಮೆರಾ ಸೆಟಪ್: S24 ಅಲ್ಟ್ರಾ 200MP ಪ್ರೈಮರಿ ವೈಡ್ ಸೆನ್ಸಾರ್ ಜೊತೆಗೆ ಕ್ವಾಡ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು 12MP ಅಲ್ಟ್ರಾ-ವೈಡ್ ಸೆನ್ಸಾರ್, 10MP ಮತ್ತು 50MP ರೆಸಲ್ಯೂಶನ್‌ಗಳ ಎರಡು ಟೆಲಿಫೋಟೋ ಲೆನ್ಸ್‌ಗಳೊಂದಿಗೆ ಜೋಡಿಯಾಗಿದೆ.
ಬೆಲೆ: ಭಾರತದಲ್ಲಿ ಸ್ಪೇಷಲ್ ಎಡಿಷನ್ 'S24' ಮಾಡೆಲ್ ಬೆಲೆಯನ್ನು 78,999 ರೂ. ನಿಗದಿಪಡಿಸಲು ಕಂಪನಿ ನಿರ್ಧರಿಸಿದೆ. ಇದು 8GB RAM ಮತ್ತು 256GB ಸ್ಟೋರೇಜ್ ಜೊತೆ ಓನಿಕ್ಸ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಬರುತ್ತದೆ.
ಮತ್ತೊಂದೆಡೆ, 'S24 ಅಲ್ಟ್ರಾ' 12GB RAM + 256GB ಸ್ಟೋರೇಜ್ ಮಾಡೆಲ್ ಬೆಲೆ ರೂ.96,749 ಆಗಿದೆ. ಇದು ಟೈಟಾನಿಯಂ ಬ್ಲ್ಯಾಕ್ ಶೇಡ್ ಕಲರ್ನಲ್ಲಿ ಲಭ್ಯವಿದೆ. ಈ ಫೋನ್‌ಗಳನ್ನು ಬ್ರ್ಯಾಂಡ್‌ನ ಕಾರ್ಪೊರೇಟ್+ ಪ್ರೋಗ್ರಾಂ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಬಹುದು.
ಓದಿ: ಕೇವಲ 10 ಸಾವಿರಕ್ಕೆ 5ಜಿ ಸ್ಮಾರ್ಟ್‌ಫೋನ್ ಪರಿಚಯಿಸಿದ ಮೊಟೊರೊಲಾ: ಏನುಂಟು, ಏನಿಲ್ಲ - ಇಲ್ಲಿದೆ ಮಾಹಿತಿ