ETV Bharat / technology

ಮತ್ತೊಂದು ಹೊಸ ಬೈಕ್ ಬಿಡುಗಡೆಗೆ ಸಿದ್ಧತೆ ನಡೆಸಿರುವ ರಾಯಲ್ ಎನ್‌ಫೀಲ್ಡ್‌!

Royal Enfield Bear 650: ರಾಯಲ್ ಎನ್‌ಫೀಲ್ಡ್‌ ಕಂಪನಿ ತನ್ನ ಮತ್ತೊಂದು ಹೊಸ ಬೈಕ್​ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ಕೈಗೊಂಡಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ..

ROYAL ENFIELD BEAR 650 LAUNCH  ROYAL ENFIELD BEAR 650 PRICE  ROYAL ENFIELD BEAR 650 COLOURS  ROYAL ENFIELD BEAR 650
ಮತ್ತೊಂದು ಹೊಸ ಬೈಕ್ ಬಿಡುಗಡೆಗೆ ಸಿದ್ಧತೆ ನಡೆಸಿರುವ ರಾಯಲ್ ಎನ್‌ಫೀಲ್ಡ್‌ (Royal Enfield)
author img

By ETV Bharat Tech Team

Published : 17 hours ago

Royal Enfield Bear 650: ರಾಯಲ್ ಎನ್‌ಫೀಲ್ಡ್ ತನ್ನ ಬೇರ್ 650 ಬೈಕ್ ಬಿಡುಗಡೆಯ ಕುರಿತು ಅಂತಿಮವಾಗಿ ಸ್ಪಷ್ಟನೆ ನೀಡಿದೆ. ಇದು EICMA 2024 ರಲ್ಲಿ ಬಿಡುಗಡೆಯಾಗಲಿದೆ. ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಸೂಪರ್ ಮೀಟಿಯರ್ 650 ಮತ್ತು ಶಾಟ್‌ಗನ್ 650 ನಂತರ ಕಂಪನಿಯು ಅವಳಿ ಪ್ಲಾಟ್‌ಫಾರ್ಮ್ ಆಧರಿಸಿ ತಂದ ಐದನೇ 650 ಸಿಸಿ ಮೋಟಾರ್‌ಸೈಕಲ್ ಇದಾಗಿದೆ.

ಇಂಟರ್‌ಸೆಪ್ಟರ್ 650 ಆಧಾರಿತ, ರಾಯಲ್ ಎನ್‌ಫೀಲ್ಡ್ ಬೇರ್ 650 ಸ್ಕ್ರ್ಯಾಂಬ್ಲರ್ ಆಧಾರಿತ ವಿನ್ಯಾಸದೊಂದಿಗೆ ಬರುತ್ತದೆ. ಕಂಪನಿಯು ಅನೇಕ ಹೊಸ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂ ಮೆಕ್ಯಾನಿಕಲ್ ಭಾಗಗಳೊಂದಿಗೆ ಇದನ್ನು ವಿನ್ಯಾಸಗೊಳಿಸಿದೆ. ನವೆಂಬರ್ 5 ರಂದು ಮುಂಬರುವ EICMA 2024 ನಲ್ಲಿ ರಾಯಲ್ ಎನ್‌ಫೀಲ್ಡ್ ಈ ಬೇರ್ 650 ಬೆಲೆಯ ವಿವರಗಳನ್ನು ಬಹಿರಂಗಪಡಿಸುತ್ತದೆ.

ROYAL ENFIELD BEAR 650 LAUNCH  ROYAL ENFIELD BEAR 650 PRICE  ROYAL ENFIELD BEAR 650 COLOURS  ROYAL ENFIELD BEAR 650
ರಾಯಲ್ ಎನ್‌ಫೀಲ್ಡ್‌ ಬೈಕ್ (Royal Enfield)

ವಿನ್ಯಾಸ: ಪೇಂಟ್ ಸ್ಕೀಮ್‌ನೊಂದಿಗೆ ಇಂಟರ್‌ಸೆಪ್ಟರ್ 650, ಎಕ್ಸಾಸ್ಟ್ ಸಿಸ್ಟಮ್ ಹೊಂದಿರುವ ಟೈರ್‌ಗಳಿಗಿಂತ ಈ ಬೈಕ್ ಹೆಚ್ಚು ಆಕರ್ಷಕ ಕೂಲ್ ಲುಕ್ ಹೊಂದಿದೆ. ಇದರ ಸ್ಕ್ರಾಂಬ್ಲರ್ ಶೈಲಿಯ ಸೀಟ್, ಸೈಡ್ ಪ್ಯಾನೆಲ್‌ಗಳಲ್ಲಿ ನಂಬರ್ ಬೋರ್ಡ್ ಉತ್ತಮ ನೋಟ ನೀಡುತ್ತದೆ. ಈ ಬೈಕಿನ ಎಲ್ಇಡಿ ಲೈಟ್ಸ್​ ಮತ್ತು ವ್ಹೀಲ್​ ಗಾತ್ರವು ತುಂಬಾ ವಿಭಿನ್ನವಾಗಿದೆ.

ಬೈಕು MRF ನೈಲೋರೆಕ್ಸ್ ಆಫ್ -ರೋಡ್ ಟೈರ್‌ಗಳನ್ನು ಸ್ಪೋಕ್ಡ್ ವ್ಹೀಲ್​ಗಳೊಂದಿಗೆ ಅಳವಡಿಸಲಾಗಿದೆ. ಈ ಬೈಕು ಟ್ಯೂಬ್‌ಲೆಸ್ ಸ್ಪೋಕ್ ವ್ಹೀಲ್‌ಗಳನ್ನು ಮಿಸ್​ ಆಗುತ್ತದೆ. ಶಾಟ್‌ಗನ್‌ನಲ್ಲಿ ಕಂಡು ಬರುವಂತೆ ಇದು ಶೋವಾ USD ಫೋರ್ಕ್‌ಗಳೊಂದಿಗೆ ಬರುತ್ತದೆ. ಆದರೆ, ಅದರ ಆಂತರಿಕ ಭಾಗಗಳು ತುಂಬಾ ವಿಭಿನ್ನವಾಗಿವೆ. ಒಟ್ಟಾರೆಯಾಗಿ ಸಸ್ಪೆನ್ಷನ್ ಪ್ರಯಾಣವು ಇಂಟರ್‌ಸೆಪ್ಟರ್‌ಗಿಂತ ಹೆಚ್ಚಾಗಿರುತ್ತದೆ ಮತ್ತು ಸೀಟ್ ಎತ್ತರವನ್ನು ಹೆಚ್ಚಿಸಲಾಗಿದೆ.

ಈ ಬೈಕ್‌ನ ಬ್ರೇಕ್‌ಗಳು ಇಂಟರ್‌ಸೆಪ್ಟರ್‌ನಂತಿದೆ. ಆದರೆ, ಮುಂಭಾಗದ ಬ್ರೇಕ್ ಡಿಸ್ಕ್ ಗಾತ್ರವು ದೊಡ್ಡದಾಗಿದೆ. ಇದು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಪ್ರಮಾಣಿತವಾಗಿ ಹೊಂದಿದೆ. ಈ ಬೈಕಿನ ಹಿಂಭಾಗದ ABS ಅನ್ನು ಆಫ್-ರೋಡ್ ರೈಡಿಂಗ್​ಗಾಗಿ ಸ್ವಿಚ್ ಆಫ್ ಮಾಡಬಹುದು. ಈ ಸ್ಕ್ರ್ಯಾಂಬ್ಲರ್ ಇನ್​ಬಿಲ್ಡ್​ ನ್ಯಾವಿಗೇಷನ್ ಸಿಸ್ಟಮ್‌ನೊಂದಿಗೆ ಫುಲ್​-ಕಲರ್​ TFT ಸ್ಕ್ರೀನ್​ ಹೊಂದಿದೆ.

ಎಂಜಿನ್: ಈ ಹೊಸ ಬೈಕ್ 650cc, ಸಮಾನಾಂತರ-ಟ್ವಿನ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಗರಿಷ್ಠ 47bhp ಪವರ್ ಮತ್ತು 57Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಇಂಟರ್‌ಸೆಪ್ಟರ್ 650 ಗಿಂತ ಸುಮಾರು 5Nm ಹೆಚ್ಚು. ಇದು ಹೊಸ ಟೂ-ಇನ್​-ಟೂ ಎಕ್ಸಾಸ್ಟ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದರಿಂದಾಗಿ ಬೈಕ್‌ನ ತೂಕ ಸ್ವಲ್ಪ ಕಡಿಮೆಯಾಗಿದೆ. ಇದರ ಎಂಜಿನ್ ಮೊದಲಿನಂತೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ.

ಕಂಪನಿಯು ಈ ರಾಯಲ್ ಎನ್‌ಫೀಲ್ಡ್ ಬೇರ್ 650 ಅನ್ನು ಒಟ್ಟು ಐದು ಬಣ್ಣದ ಆಯ್ಕೆಗಳೊಂದಿಗೆ ತರುತ್ತಿದೆ. ಪ್ರತಿ ಬಣ್ಣದಲ್ಲಿ ಅದರ ಬೆಲೆ ವಿಭಿನ್ನವಾಗಿರುತ್ತದೆ. ರಾಯಲ್ ಎನ್‌ಫೀಲ್ಡ್ ಈ ಬೈಕ್ ಅನ್ನು ನವೆಂಬರ್ 5 ರಂದು ಬಿಡುಗಡೆ ಮಾಡಲಿದೆ. ಅದೇ ದಿನ ಇದರ ಬೆಲೆ ಕೂಡ ಬಹಿರಂಗವಾಗಲಿದೆ. ಇದರ ಬುಕಿಂಗ್ ಇನ್ನೂ ಮಾರುಕಟ್ಟೆಯಲ್ಲಿ ಆರಂಭವಾಗಿಲ್ಲ.

ಓದಿ: ಕನ್ನಡ ಸೇರಿದಂತೆ 11 ಭಾಷೆಗಳ ಸರ್ವಂ-1 ಅನಾವರಣ: ಈಗ ಆ ಸಮಸ್ಯೆಗಳು ಬಗೆಹರಿದಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.