Jio New Cloud PC App: ಜಿಯೋ ಫೈಬರ್ ಮೂಲಕ ರಿಲಯನ್ಸ್ ಜಿಯೋ ಇಂಟರ್ನೆಟ್ ಜೊತೆಗೆ ಡಿಜಿಟಲ್ ಚಾನೆಲ್‌ಗಳನ್ನು ನೀಡುವ ಸೌಲಭ್ಯ ನೀಡುತ್ತಿದೆ. ಪ್ರಪಂಚದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಕೆಲ ವರ್ಷಗಳ ಹಿಂದೆ ಈ ಸಾಧನವನ್ನು ಪರಿಚಯಿಸಿದ್ದರು. ರಿಲಯನ್ಸ್ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಹೊಸ ಕ್ರಾಂತಿ ಹುಟ್ಟಿಕೊಂಡಿತು. ಅಷ್ಟೇ ಅಲ್ಲ, ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ ಪರಿಚಯಿಸಲಾಗಿತ್ತು. ಅದರ ನಂತರ ಅವರು ಇನ್ನೂ ಅನೇಕ ಆಶ್ಚರ್ಯಕರ ಘೋಷಣೆಗಳನ್ನು ಮಾಡಿದರು. ಇದೀಗ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ಮತ್ತೊಂದು ಹೊಸ ಆ್ಯಪ್ ತರುತ್ತಿದೆ.
ರಿಲಯನ್ಸ್ ಜಿಯೋ ಮತ್ತೊಂದು ಹೊಸ ಸಂಚಲನಕ್ಕೆ ಸಿದ್ಧವಾಗಿದೆ. ಒಂದೇ ಆ್ಯಪ್ ಸಹಾಯದಿಂದ ಸ್ಮಾರ್ಟ್ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸುವ ಸೌಲಭ್ಯ ಸೃಷ್ಟಿಸಿದೆ. ಈ ತಂತ್ರಜ್ಞಾನವನ್ನು ಇಂಡಿಯನ್ ಮೊಬೈಲ್ ಕಾಂಗ್ರೆಸ್-2024 ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಜಿಯೋ ಕ್ಲೌಡ್ ಪಿಸಿ ಎಂಬ ಈ ತಂತ್ರಜ್ಞಾನದೊಂದಿಗೆ ಕೆಲವೇ ರೂಪಾಯಿಗಳಲ್ಲಿ ನಿಮ್ಮ ಸ್ಮಾರ್ಟ್ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಬಹುದು ಎಂದು ಕಂಪನಿ ಹೇಳಿದೆ.
ನಿಮಗೆ ಬೇಕಾಗಿರುವುದು ಇಂಟರ್ನೆಟ್ ಸಂಪರ್ಕ, ಕೀಬೋರ್ಡ್, ಮೌಸ್ ಮತ್ತು ಸ್ಮಾರ್ಟ್ ಟಿವಿ ಜಿಯೋ ಕ್ಲೌಡ್ ಪಿಸಿ ಅಪ್ಲಿಕೇಶನ್ ಬಳಸಿ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಬಹುದು. ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ನೀವು ಇಮೇಲ್‌ಗಳು, ಸಂದೇಶ ಕಳುಹಿಸುವಿಕೆ, ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ ಬ್ರೌಸಿಂಗ್ ಅನ್ನು ಕಂಪ್ಯೂಟರ್‌ನಂತೆ ಪ್ರವೇಶಿಸಬಹುದು. ಈ ಎಲ್ಲಾ ಡೇಟಾವನ್ನು ಕ್ಲೌಡ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಮಧ್ಯಮ ವರ್ಗದ ಕುಟುಂಬಕ್ಕೆ ಕಂಪ್ಯೂಟರ್ ಖರೀದಿಸಲು ಹೊರೆಯಾಗಬಾರದು ಎಂಬ ಉದ್ದೇಶದಿಂದ ಈ ಹೊಸ ತಂತ್ರಜ್ಞಾನವನ್ನು ತಂದಿರುವುದಾಗಿ ಜಿಯೋ ಹೇಳಿದೆ.
ಜಿಯೋ ಕ್ಲೌಡ್ ಪಿಸಿಯೊಂದಿಗೆ ಸ್ಮಾರ್ಟ್ ಟಿವಿ ಮತ್ತು ಕಂಪ್ಯೂಟರ್ ಎಂಬ ಎರಡು ಪ್ರತ್ಯೇಕ ಸಾಧನಗಳನ್ನು ಖರೀದಿಸುವ ಅಗತ್ಯವಿಲ್ಲ ಎಂದು ತಂಡ ಹೇಳಿದೆ. JioFiber/JioAirFiber ಸೆಟ್ ಟಾಪ್ ಬಾಕ್ಸ್ ಅನ್ನು ಸ್ಥಾಪಿಸುವ ಮೂಲಕ ಸಾಮಾನ್ಯ ಟಿವಿಗಳನ್ನು ಸ್ಮಾರ್ಟ್ ಮಾಡಬಹುದು. ಈ ಹೊಸ ಸೇವೆಯನ್ನು ಮೊಬೈಲ್‌ನಲ್ಲಿಯೂ ಬಳಸಬಹುದು. ಆದರೆ ಈ ಅಪ್ಲಿಕೇಶನ್ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಇದರ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದರ ಇನ್ನಷ್ಟು ಮಾಹಿತಿ ಮತ್ತು ಈ ಆ್ಯಪ್ ಯಾವ ರೀತಿ ಕಾರ್ಯ ನಿಭಾಯಿಸುತ್ತೆ ಎಂಬುದನ್ನು ಕಂಪನಿ ಹೇಳಿಕೊಂಡಿಲ್ಲ.
ಇದನ್ನೂ ಓದಿ: ಗೂಗಲ್ನ ಹೊಸ ನೋಟ್ಬುಕ್ಎಲ್ಎಂ: Text ಡಾಕ್ಯುಮೆಂಟ್ ಜೊತೆಗೆ ಪಾಡ್ಕಾಸ್ಟ್ ರಚಿಸಲು ಉಪಯುಕ್ತ