ETV Bharat / technology

ಡೈಮಂಡ್ ಡಿಸೈನ್​, ಬಿಸಿ ನೀರಿನಲ್ಲಿ ಬಿದ್ರೂ ಚಿಂತೆಯಿಲ್ಲ!: ಕೊನೆಗೂ ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ರಿಯಲ್​ಮಿ 14ಎಕ್ಸ್​ - REALME 14X 5G LAUNCHED

Realme 14x 5G Launched: ಅದ್ಭುತ ಫೀಚರ್​ಗಳು, ಡೈಮಂಡ್​ ಲುಕ್​, ಗಮನ ಸೆಳೆಯುವ ವೈಶಿಷ್ಟ್ಯಗಳೊಂದಿಗೆ ಕೊನೆಗೂ ದೇಶಿಯ ಮಾರುಕಟ್ಟೆಗೆ ರಿಯಲ್​ಮಿ 14 ಎಕ್ಸ್​ 5ಜಿ ಸೀರಿಸ್​ ಕಾಲಿಟ್ಟಿದೆ. ಇದರ ವಿಶೇಷತೆಗಳು ಏನು ಇಲ್ಲಿ ತಿಳಿಯಿರಿ.

BANKS OFFERS ON REALME 14X  REALME 14X FEATURES  REALME 14X SPECIFICATIONS  REALME 14X PRICE
ಕೊನೆಗೂ ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ರಿಯಲ್​ಮಿ 14ಎಕ್ಸ್​ (Realme India)
author img

By ETV Bharat Tech Team

Published : Dec 19, 2024, 11:08 AM IST

Realme 14x 5G Launched In India: ರಿಯಲ್​ಮಿ ಅಂತಿಮವಾಗಿ ಭಾರತದಲ್ಲಿ ತನ್ನ '14x 5G' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನ್ ಅನ್ನು ಪ್ರೀಮಿಯಂ ಡೈಮಂಡ್ ವಿನ್ಯಾಸದಲ್ಲಿ IP69 ರೇಟಿಂಗ್‌ನೊಂದಿಗೆ ತಂದಿದೆ. ಈ ಮೊಬೈಲ್ ಬಿಸಿ ನೀರಿನಲ್ಲಿ ಬಿದ್ದರು ಪರವಾಗಿಲ್ಲ ಎನ್ನುತ್ತದೆ ರಿಯಲ್​ಮಿ. ಹಲವಾರು ಅದ್ಭುತ ವೈಶಿಷ್ಟ್ಯಗಳೊಂದಿಗೆ, ಕಂಪನಿಯು ಇದನ್ನು ಕೇವಲ ರೂ. 14,999 ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಈ ಹೊಸ 'Realme 14x 5G' ಸ್ಮಾರ್ಟ್‌ಫೋನ್‌ನ ಬೆಲೆ, ವೈಶಿಷ್ಟ್ಯಗಳು ಮತ್ತು ಬ್ಯಾಂಕ್ ಕೊಡುಗೆಗಳಂತಹ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ

ವೈಶಿಷ್ಟ್ಯಗಳು:

  • ಡಿಸ್​ಪ್ಲೇ: 6.67-ಇಂಚಿನ HD+
  • ರಿಫ್ರೆಶ್ ರೇಟ್​: 120Hz
  • ರೆಸಲ್ಯೂಶನ್: 1604 x 720 ಪಿಕ್ಸೆಲ್
  • ಬ್ರೈಟ್​ನೆಸ್​: 625 ನಿಟ್ಸ್
  • ಬ್ಯಾಟರಿ: 6,000mAh
  • ಪ್ರೊಸೆಸರ್: ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಶನ್ 6300
  • 8GB RAM ಮತ್ತು 128 GB ವರೆಗೆ ಸ್ಟೋರೇಜ್​
  • 45W ಸ್ಪೀಡ್​ ಚಾರ್ಜಿಂಗ್ ಸಪೋರ್ಟ್​

ಕ್ಯಾಮೆರಾ ಸೆಟಪ್: ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ 50MP ಮುಖ್ಯ ಕ್ಯಾಮೆರಾದೊಂದಿಗೆ f/1.8 ಅಪೆರ್ಚರ್​ 4K ನಲ್ಲಿ ವಿಡಿಯೋಗಳನ್ನು ಶೂಟ್ ಮಾಡುವ ಸಾಮರ್ಥ್ಯ ಹೊಂದಿದೆ. ಫೋನ್ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್​ ಕ್ಯಾಮೆರಾವನ್ನು ಹೊಂದಿದೆ.

ರೂಪಾಂತರಗಳು: ಈ 'Realme 14x' 5G ಮೊಬೈಲ್ ಮಾರುಕಟ್ಟೆಯಲ್ಲಿ 6GB RAM + 128 GB ಮತ್ತು 8GB RAM + 128 GB ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಕಂಪನಿಯು ಈ ಮೊಬೈಲ್ ಅನ್ನು ಜ್ಯುವೆಲ್ ರೆಡ್, ಗೋಲ್ಡನ್ ಗ್ಲೋ ಮತ್ತು ಕ್ರಿಸ್ಟಲ್ ಬ್ಲ್ಯಾಕ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಿದೆ.

ಕಂಪನಿಯು ಈ ಮೊಬೈಲ್‌ನಲ್ಲಿ IP69 ರೇಟಿಂಗ್ ಮತ್ತು ಮಿಲಿಟರಿ ಗ್ರೇಡ್​ ಶಾಕ್​ ರೆಸಿಸ್ಟೆಂಟ್​ ವೈಶಿಷ್ಟ್ಯಗಳನ್ನು ಒದಗಿಸಿದೆ. ಇವುಗಳನ್ನು ಪ್ರೀಮಿಯಂ ಮೊಬೈಲ್‌ಗಳಲ್ಲಿ ಮಾತ್ರ ನೀಡಲಾಗುತ್ತದೆ. ಈ ಹೊಸ Realme 14x ಸ್ಮಾರ್ಟ್‌ಫೋನ್ ಆಂಡ್ರಾಯ್ಡ್​ 14 ಆಧಾರಿತ Realme UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹೈ-ರೆಸ್ ಆಡಿಯೊ ಪ್ರಮಾಣೀಕರಣವನ್ನು ಸಹ ಬೆಂಬಲಿಸುತ್ತದೆ.

ಬೆಲೆಯ ವಿವರ: ಈ ಸ್ಮಾರ್ಟ್​ಫೊನ್​ಗಳ ಬೆಲೆ ಬಗ್ಗೆ ಮಾತನಾಡೋದಾದರೆ, 6GB RAM + 128 GB ಸ್ಟೋರೇಜ್ ರೂಪಾಂತರ ಬೆಲೆ ರೂ. 14,999 ಮತ್ತು 8GB RAM + 128 GB ಸ್ಟೋರೇಜ್ ರೂಪಾಂತರ ಬೆಲೆ ರೂ. 15,999 ಆಗಿದೆ.

ರಿಯಾಯಿತಿಗಳು: ಈ ಹೊಸ 5G ಸ್ಮಾರ್ಟ್‌ಫೋನ್ ಈಗಾಗಲೇ Flipkart, Realme ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯ ಈ ಮಾರಾಟಗಳಲ್ಲಿ, ಎಲ್ಲ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ರೂ. 1,000 ರಿಯಾಯಿತಿ ಮತ್ತು ಆರು ತಿಂಗಳ ನೋಕಾಸ್ಟ್ EMI ಸೌಲಭ್ಯವನ್ನು ಘೋಷಿಸಿದೆ. ಇದಲ್ಲದೇ ರೂ.1049 ಮೌಲ್ಯದ ಒಂದು ವರ್ಷದ ವಾರಂಟಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೂಈ ರಿಯಾಯಿತಿಗಳು ಡಿಸೆಂಬರ್ 18 ರಿಂದ ಡಿಸೆಂಬರ್ 22, 2024 ರವರೆಗೆ ಖರೀದಿಸಿದ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತವೆ.

ಓದಿ: ಕಾರು ಬೇಕೇ ಕಾರು! ಆರು ಏರ್​ ಬ್ಯಾಗ್ಸ್​, ಸೇಫ್ಟಿಗೆ ಹೆಚ್ಚಿನ ಒತ್ತು, ಕೈಗೆಟುಕುವ ದರದಲ್ಲಿ ಇಲ್ಲಿವೆ ಹಲವು ಎಸ್​ಯುವಿಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.