ನವದೆಹಲಿ: ಗುಜರಾತ್ನಲ್ಲಿ ನಿರ್ಮಾಣವಾಗಿರುವ ಕಕ್ರಾಪುರದಲ್ಲಿನ ಪರಮಾಣು ವಿದ್ಯುತ್ ಸ್ಥಾವರದ ಮೂರು ಮತ್ತು ನಾಲ್ಕು ಘಟಕವನ್ನು ನಾಳೆ (ಫೆ. 22) ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಎರಡು ಸ್ಥಾವರಗಳು ತಲಾ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.
ಈ ಕಾರ್ಯಕ್ರಮಕ್ಕೆ ಮುಂಚೆ ಮಾತನಾಡಿದ ಅಧಿಕಾರಿಯೊಬ್ಬರು, ಎನ್ಪಿಸಿಐಎಲ್ ಶೀಘ್ರದಲ್ಲೇ ತನ್ನ ಎರಡನೇ 700 ಮೆಗಾವ್ಯಾಟ್ ಒತ್ತಡದ ಹೆವಿ ವಾಟರ್ ರಿಯಾಕ್ಟರ್ ಅನ್ನು ಗ್ರಿಡ್ಗೆ ಸಂಪರ್ಕಿಸಲಿದೆ. ಇದೀಗ ಕಕ್ರಾಪುರ ಪರಮಾಣು ವಿದ್ಯುತ್ ಕೇಂದ್ರ -3 (ಕೆಎಪಿಎಸ್-3) ಅನ್ನು ಗ್ರಿಡ್ನೊಂದಿಗೆ ಸಿಂಕ್ರೊನೈಸ್ ಮಾಡಲಾಗಿದೆ. ಇದಾದ ಬಳಿಕ ಶೀಘ್ರದಲ್ಲೇ ಕೆಪಿಎಸ್ 4 ಅನ್ನು ಕೂಡ ಗ್ರಿಡ್ಗೆ ಸಂಪರ್ಕಿಸಲಾಗುವುದು ಎಂದು ಹೆಸರನ್ನು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ.
700 ಮೆಗಾವ್ಯಾಟ್ನ ಪಿಎಚ್ಡಬ್ಲ್ಯೂಆರ್ ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ಛತ್ತೀಸಗಢ, ಗೋವಾ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರ ಮತ್ತು ನಗರ್ ಹವೇಲಿ ಮತ್ತು ಡಮನ್ ಮತ್ತು ಡಿಯೋಗೆ ವಿದ್ಯುತ್ ಪೂರೈಕೆ ಮಾಡಲಿದೆ.
ಕಳೆದ ವರ್ಷ ಜುಲೈನಿಂದಲೇ ಇದು ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದೆ. ದೇಶದ ಮೊದಲ 700 ಮೆಗಾವ್ಯಾಟ್ ಪಿಎಚ್ಡಬ್ಲ್ಯೂಆರ್ (ಕೆಎಪಿಎಸ್-3) ಜನವರಿ 2024ರವರೆಗೆ 3,182 ಮಿಲಿಯನ್ ಯುನಿಟ್ ಉತ್ಪಾದನೆ ಮಾಡಿದೆ. ಇದರ ಕಾರ್ಯ ಸಾಮರ್ಥ್ಯ ಶೇ 88ರಷ್ಟಿದೆ ಎಂದು ಎನ್ಪಿಸಿಐಎಲ್ ತಿಳಿಸಿದೆ.
22,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಎನ್ಪಿಸಿಐಎಲ್ನ ಸ್ಥಳೀಯ ವಿನ್ಯಾಸಿತ ಕಕ್ರಾಪುರ ಪರಮಾಣು ವಿದ್ಯುತ್ ಸ್ಥಾವರದ ಎರಡು ಘಟಕಗಳನ್ನು ಪ್ರಧಾನಿ ಗುರುವಾರ ದೇಶಕ್ಕೆ ಸಮರ್ಪಿಸಲಿದ್ದಾರೆ. ರಾಜಸ್ಥಾನದಲ್ಲಿ ಅಣು ಸ್ಥಾವರ ಕೇಂದ್ರ (ಆರ್ಎಪಿಎಸ್)ನಲ್ಲಿ ಮತ್ತೆ ಎರಡು 700 ಮೆಗಾವ್ಯಾಟ್ನ ಪಿಎಚ್ಡಬ್ಲ್ಯೂಆರ್ ಬರಲಿದ್ದು, ಹೆಚ್ಚವರಿಯಾಗಿ 220 ಮೆಗಾವ್ಯಾಟ್ ಘಟಕಗಳು ಇರಲಿವೆ. ಪ್ರಸ್ತುತ 10 ರಿಯಾಕ್ಟರ್ ಜೊತೆಯಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಾರೆ ಸಾಮರ್ಥ್ಯದ 7000 ಮೆಗಾ ವ್ಯಾಟ್ ಯೋಜನಾ ಪೂರ್ವ ಹಂತದಲ್ಲಿದ್ದು, ಇದು 2031-32ರ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕಳೆದ ಜುಲೈನಲ್ಲಿ ಕಕ್ರಾಪುರ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಳೀಯವಾಗಿ ಯಶಸ್ವಿಯಾಗಿ ನಿರ್ಮಾಣ ಮಾಡಿದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿ ಪೋಸ್ಟ್ ಹಂಚಿಕೊಂಡಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಬುಡಕಟ್ಟು ಸಮುದಾಯದ ಮೇಡಾರಂ ಸಮ್ಮಕ್ಕ- ಸರಳಮ್ಮ ಜಾತ್ರೆ: ಭಕ್ತರಿಂದ ಎತ್ತಿನ ಬಂಡಿ ಯಾತ್ರೆ