OPPO FIND X8 SERIES: ಒಪ್ಪೋ ಅಕ್ಟೋಬರ್ 24 ರಂದು ಚೀನಾದಲ್ಲಿ ತನ್ನ ಫೈಂಡ್ ಎಕ್ಸ್8 ಸೀರಿಸ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿತ್ತು. ಈಗ ಕಂಪನಿಯು ಲೈನ್‌ಅಪ್‌ನ ಜಾಗತಿಕ ಮತ್ತು ಭಾರತದಲ್ಲಿನ ಬಿಡುಗಡೆ ದಿನಾಂಕಗಳನ್ನು ಪ್ರಕಟಿಸಿದೆ.
ಈ ಸ್ಮಾರ್ಟ್‌ಫೋನ್‌ಗಳ ಭಾರತೀಯ ರೂಪಾಂತರಗಳು ಚೈನೀಸ್ ಆವೃತ್ತಿಗಳಿಗೆ ಹೋಲುತ್ತವೆ. ಒಪ್ಪೋ ಫೈಂಡ್ ಎಕ್ಸ್8 ಸೀರಿಸ್ ಜೊತೆಗೆ ಒಪ್ಪೋ ಜಾಗತಿಕ ಮಾರುಕಟ್ಟೆಗೆ Android 15 ಆಧಾರಿತ ColorOS 15 ಅನ್ನು ಸಹ ಅನಾವರಣಗೊಳಿಸಲಿದೆ. ಮಾಹಿತಿಯ ಪ್ರಕಾರ, ಒಪ್ಪೋ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿನ ಈ ಸ್ಮಾರ್ಟ್‌ಫೋನ್‌ಗಳ ಜಾಗತಿಕವಾಗಿ ಬಿಡುಗಡೆಯಾಗುವ ದಿನವನ್ನು ಬಹಿರಂಗ ಪಡಿಸಿದೆ. ಅದೇ ದಿನದಂದೇ ಭಾರತದಲ್ಲಿ ಲೈನ್‌ಅಪ್ ಅನ್ನು ಪ್ರಾರಂಭಿಸಲಾಗುವುದು ಎಂದು ಖಚಿತಪಡಿಸಿದೆ.
ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇ-ಕಾಮರ್ಸ್ ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತವೆ ಎಂದು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಬಹಿರಂಗಪಡಿಸಿದೆ. ಒಪ್ಪೋ ಫೈಂಡ್ ಎಕ್ಸ್8 ಮತ್ತು ಒಪ್ಪೋ ಫೈಂಡ್ ಎಕ್ಸ್8 ಪ್ರೋ ಈಗ ಭಾರತದಲ್ಲಿ ಪ್ರಿ-ಬುಕಿಂಗ್‌ಗೆ ಲಭ್ಯವಿದೆ. ಎಐ ವೈಶಿಷ್ಟ್ಯಗಳೊಂದಿಗೆ ಒಪ್ಪೋದ Android 15-ಆಧಾರಿತ ColorOS 15 ಅನ್ನು ನವೆಂಬರ್ 21 ರಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ.
Oppo Find X8 ಸರಣಿಯ ವಿಶೇತೆಗಳು: ಒಪ್ಪೋ ಫೈಂಡ್ ಎಕ್ಸ್8ನ ಜಾಗತಿಕ ರೂಪಾಂತರವು 6.59 ಇಂಚಿನ ಡಿಸ್ಪ್ಲೇ ಹೊಂದಿದೆ. ಅದರ ದಪ್ಪವು 7.85 mm ಮತ್ತು ಅದರ ತೂಕ 193 ಗ್ರಾಂ ಆಗಿದೆ. ಇದು ಸ್ಟಾರ್ ಗ್ರೇ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರ ಪ್ರೊ ರೂಪಾಂತರವು 6.78 ಇಂಚಿನ ಸ್ಕ್ರೀನ್ ಮತ್ತು ಪರ್ಲ್ ವೈಟ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣಗಳಲ್ಲಿ ಮೂಡಿಬಂದಿದೆ.
ಮೂಲ Oppo Find X8 ಜಾಗತಿಕವಾಗಿ 5630mAh ಬ್ಯಾಟರಿ ಹೊಂದಿದೆ. ಆದರೆ ಪ್ರೊ ಆವೃತ್ತಿಯು 5,910mAh ಬ್ಯಾಟರಿಯನ್ನು ಪಡೆಯುತ್ತದೆ. ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್ ಮತ್ತು ಹ್ಯಾಸೆಲ್‌ಬ್ಲಾಡ್-ಬೆಂಬಲಿತ ಕ್ಯಾಮರಾ ಯುನಿಟ್ ಅನ್ನು ಅಳವಡಿಸಲಾಗಿದೆ.
ಪ್ರೊ ರೂಪಾಂತರವು ಅಲ್ಟ್ರಾವೈಡ್ ಶೂಟರ್ ಮತ್ತು ಸೋನಿ LYT-600 ಸೆನ್ಸಾರ್ ಜೊತೆಗೆ 50-ಮೆಗಾಪಿಕ್ಸೆಲ್ LYT-808 ರಿಯರ್ ಸೆನ್ಸಾರ್ ಮತ್ತು 50-ಮೆಗಾಪಿಕ್ಸೆಲ್ Sony IMX858 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾ ಹೊಂದಿದೆ. ಇದು 6x ಆಪ್ಟಿಕಲ್ ಜೂಮ್‌ನೊಂದಿಗೆ ಬರುತ್ತದೆ.
ಓದಿ: ಪ್ರತಿದಿನ 1.35 ಕೋಟಿ ಫ್ರಾಡ್ ಕಾಲ್ಸ್ ಬ್ಲಾಕ್, 2,500 ಕೋಟಿ ಅಮಾಯಕರ ಆಸ್ತಿ ರಕ್ಷಣೆ: ಕೇಂದ್ರ ಸಚಿವರ ಮಾಹಿತಿ