Nissan Magnite Facelift: ಜಾಗತಿಕ ವಾಹನ ತಯಾರಕ ದೈತ್ಯ ನಿಸ್ಸಾನ್ ಕಂಪೆನಿ ಭಾರತೀಯ ಮಾರುಕಟ್ಟೆಯಲ್ಲಿ SUV ವಿಭಾಗದಲ್ಲಿ ಎರಡು ಕಾರುಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ ಒಂದು ಪ್ರವೇಶ ಹಂತದ ಎಸ್‌ಯುವಿ ವಿಭಾಗ ಮತ್ತು ಇನ್ನೊಂದನ್ನು ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆ ಮಾಡುತ್ತಿದೆ. ಅಕ್ಟೋಬರ್‌ನಲ್ಲಿ ಹೊಸ ಕಾರು ಬಿಡುಗಡೆಗೆ ನಿಸ್ಸಾನ್ ಸಜ್ಜಾಗಿದೆ.
ಅಕ್ಟೋಬರ್ 4ರಂದು ಹೊಸ ಕಾರು ಬಿಡುಗಡೆ: ನಿಸ್ಸಾನ್ ಅಕ್ಟೋಬರ್ 4ರಂದು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲಿದೆ. ಆದರೆ ನಿಸ್ಸಾನ್ ಮ್ಯಾಗ್ನೈಟ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡಲಾಗುತ್ತದೆಯೇ ಎಂಬ ಮಾಹಿತಿ ನೀಡಿಲ್ಲ.
ನಿಸ್ಸಾನ್ ಮ್ಯಾಗ್ನೈಟ್‌ನ ಫೇಸ್‌ಲಿಫ್ಟ್: ವರದಿಗಳ ಪ್ರಕಾರ, ಪ್ರಸ್ತುತ ಎಸ್‌ಯುವಿ ನಿಸ್ಸಾನ್ ಮ್ಯಾಗ್ನೈಟ್‌ನ ಫೇಸ್‌ಲಿಫ್ಟ್ ಮಾತ್ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಬಹುದು. ಕಂಪೆನಿಯು ಈ SUV ಅನ್ನು ಭಾರತದಲ್ಲಿ ಡಿಸೆಂಬರ್ 2020ರಲ್ಲಿ ಬಿಡುಗಡೆ ಮಾಡಿತ್ತು.
ಬದಲಾವಣೆಗಳೇನು?: ಕಾರಿನ ಎಂಜಿನ್ನಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಕಮ್ಮಿ. ಆದರೂ ಈ ಎಸ್‌ಯುವಿ ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯಲಿದೆ. ಇದರ ಮುಂಭಾಗದ ಬಂಪರ್, ಹೆಡ್‌ಲೈಟ್‌ಗಳು ಮತ್ತು ಗ್ರಿಲ್ ಬದಲಾಯಿಸಲಾಗುವುದು. ಹಿಂಭಾಗದ ಬಂಪರ್ ಮತ್ತು ಟೈಲ್‌ಲೈಟ್‌ಗಳು ಮತ್ತು ಅಲಾಯ್ ವ್ಹೀಲ್ಗಳನ್ನು ಬದಲಾಯಿಸುವ ಮೂಲಕ ಹೊಸ ಲುಕ್ ನೀಡಲು ಪ್ರಯತ್ನಿಸಬಹುದು. ಒಳಾಂಗಣವನ್ನೂ ಸಹ ಮಾರ್ಪಡಿಸಬಹುದು.
ಬೆಲೆ ಎಷ್ಟು?: ಪ್ರಸ್ತುತ ಮ್ಯಾಗ್ನೈಟ್ ನಿಸ್ಸಾನ್ ಅನ್ನು 5.99 ಲಕ್ಷ ರೂ.ಯಿಂದ 11.27 ಲಕ್ಷ ರೂ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಫೇಸ್‌ಲಿಫ್ಟೆಡ್ ಆವೃತ್ತಿಯ ಎಕ್ಸ್ ಶೋರೂಂ ಬೆಲೆ ಸ್ವಲ್ಪ ಹೆಚ್ಚಾಗಬಹುದು. ಮಾರುಕಟ್ಟೆಯಲ್ಲಿ, ಇದು ಟಾಟಾ ಪಂಚ್, ರೆನಾಲ್ಟ್ ಕಿಗರ್, ಮಾರುತಿ ಫ್ರಾಂಕ್ಸ್, ಸಿಟ್ರೊಯೆನ್ ಬಸಾಲ್ಟ್, ಟೊಯೊಟಾ ಟೈಸರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ನಂತಹ SUVಗಳೊಂದಿಗೆ ನೇರವಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.