ETV Bharat / technology

ಕೈಗೆಟುಕುವ ದರದಲ್ಲಿ ಈ ಟಾಪ್​ 5 ಡಿಎಸ್​ಎಲ್​ಆರ್​ ಕ್ಯಾಮೆರಾಗಳು ಸೂಪರ್​! - Budget DSLR Cameras - BUDGET DSLR CAMERAS

Budget DSLR Cameras: ನೀವು ಉತ್ತಮ DSLR ಕ್ಯಾಮೆರಾವನ್ನು ಖರೀದಿಸಲು ಬಯಸುವಿರಾ?. ಹಾಗಾದ್ರೆ ಮಾರುಕಟ್ಟೆಯಲ್ಲಿರುವ ಟಾಪ್-5 ಬಜೆಟ್ ಫ್ರೆಂಡ್ಲಿ ಕ್ಯಾಮೆರಾಗಳ ಬಗ್ಗೆ ತಿಳಿಯೋಣ ಬನ್ನಿ.

DSLR CAMERA  DSLR CAMERA IN A BUDGET OF LAKH  TOP 5 DSLR CAMERA  DSLR CAMERA FEATURE
ಡಿಎಸ್​ಎಲ್​ಆರ್​ ಕ್ಯಾಮೆರಾ (ETV Bharat)
author img

By ETV Bharat Tech Team

Published : Sep 2, 2024, 2:09 PM IST

Budget DSLR Cameras: ಇಂದು ಸಾಮಾಜಿಕ ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಬೇಕಾಗಿಲ್ಲ. ಅದಕ್ಕಾಗಿಯೇ ಅನೇಕ ಜನರು ಕಂಟೆಂಟ್​ ಕ್ರಿಯೆಟರ್ಸ್​ ಆಗಿ ಬದಲಾಗುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಬಯಸುತ್ತಾರೆ. ನೀವೂ ಸಹ ಕಂಟೆಂಟ್​ ಕ್ರಿಯೆಟರ್ಸ್​ ಆಗಲು ಬಯಸಿದ್ದಲ್ಲಿ ನಿಮಗಾಗಿ ಕೈಗೆಟುಕುವ ದರದಲ್ಲಿ ಉತ್ತಮ DSLR ಕ್ಯಾಮೆರಾಗಳಿವೆ.

ಪ್ರಸ್ತುತ, ರೂ.1 ಲಕ್ಷ ಬಜೆಟ್‌ನಲ್ಲಿ ಮಾರುಕಟ್ಟೆಯಲ್ಲಿ ಹಲವು ಉತ್ತಮ ಕ್ಯಾಮೆರಾಗಳು ಲಭ್ಯ. ಇವುಗಳಲ್ಲಿ ಟಾಪ್-5 DSLR ಕ್ಯಾಮೆರಾಗಳು ದರ ಮತ್ತು ವೈಶಿಷ್ಟ್ಯಗಳು ಹೀಗಿವೆ.

1. Canon EOS 200D Mark II : Canon EOS 200D Mark 2 ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾಗಳಲ್ಲಿ ಒಂದು. ಮೊದಲ ಬಾರಿಗೆ DSLR ಖರೀದಿಸಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಇದರ ಬೆಲೆ ಸರಿಸುಮಾರು ರೂ.55,000 ರಿಂದ ರೂ.60,000. ಇದು ಆನ್‌ಲೈನ್‌ಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಆಫ್‌ಲೈನ್‌ನಲ್ಲಿ ಲಭ್ಯ.

ಸ್ಪೆಸಿಫಿಕೇಷನ್ಸ್​:

  • 24.1 ಮೆಗಾಪಿಕ್ಸೆಲ್
  • CMOS ಸೆನ್ಸಾರ್
  • APS-C ಕ್ರಾಪ್ ಸೆನ್ಸಾರ್​
  • 4K ವಿಡಿಯೋ ಸಪೋರ್ಟ್​ (ಸೆಕೆಂಡಿಗೆ 25 ಫ್ರೇಮ್‌ಗಳು)

ಸಾಧಕ-ಬಾಧಕಗಳು: ಇದರಲ್ಲಿ HDMI ಔಟ್ಪುಟ್ ಕ್ಲಿಯರ್​ ಆಗಿಲ್ಲ. ಹಾಗಾಗಿ, ಲೈವ್ ಸ್ಟ್ರೀಮ್ ಮಾಡಲು ಸ್ವಲ್ಪ ಕಷ್ಟ. ಆದರೆ ಲೈವ್ ವಿಡಿಯೋಗಳನ್ನು ಮಾಡಲು ಬಯಸುವವರಿಗೆ ಇದು ಅದ್ಭುತ. ಇದು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಹೊಂದಿದೆ. ಹಾಗಾಗಿ ನಿಮ್ಮ ಫೋಟೋಗಳು ಮತ್ತು ವಿಡಿಯೋಗಳು ಶೇಕ್​ ಆಗದೆ ತುಂಬಾ ಅಚ್ಚುಕಟ್ಟಾಗಿ ಬರುತ್ತವೆ.

2. Sony Alpha A6000: ಮಧ್ಯಮ ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾ ಖರೀದಿಸಲು ಬಯಸುವವರಿಗೆ 'ಸೋನಿ ಆಲ್ಫಾ ಎ6000' ಉತ್ತಮ ಆಯ್ಕೆ. ಇದರ ಬೆಲೆ 65,000 ರಿಂದ 70,000 ರೂ. ಆಗಿದೆ.

ಸ್ಪೆಸಿಫಿಕೇಷನ್ಸ್​:

  • 24.2 ಮೆಗಾಪಿಕ್ಸೆಲ್
  • CMOS ಸೆನ್ಸಾರ್​
  • APS-C ಕ್ರಾಪ್ ಸೆನ್ಸಾರ್​

ಸಾಧಕ-ಬಾಧಕಗಳು: ಇದು ಕ್ಲೀನ್ HDMI ಔಟ್ಪುಟ್ ಹೊಂದಿದೆ. ಇದರೊಂದಿಗೆ, ಪೂರ್ಣ ಎಚ್‌ಡಿ ವಿಡಿಯೋಗಳನ್ನು ಸೆಕೆಂಡಿಗೆ 60 ಫ್ರೇಮ್‌ಗಳ ರೇಟ್​ನಲ್ಲಿ ರೆಕಾರ್ಡ್ ಮಾಡಬಹುದು. ಆದರೆ ಇದು ಇಮೇಜ್ ಸ್ಟೆಬಿಲೈಸೇಶನ್ ಅನ್ನು ಹೊಂದಿರುವುದಿಲ್ಲ. ಆದ್ದರಿಂದ ನೀವು ಗಿಂಬಲ್ ಅಥವಾ ಟ್ರೈಪಾಡ್ ಬಳಸಿ ವಿಡಿಯೋಗಳು ಮತ್ತು ಫೋಟೋಗಳನ್ನು ಶೂಟ್ ಮಾಡಬೇಕು.

3. Canon M50 Mark II : ಮಾರುಕಟ್ಟೆಯಲ್ಲಿ 'ಕ್ಯಾನನ್ ಎಂ50 ಮಾರ್ಕ್ 2' ಕ್ಯಾಮೆರಾದ ಬೆಲೆ ಅಂದಾಜು ರೂ.58,000ರಿಂದ ರೂ.60,000. ಇದು ಉತ್ತಮ ಮಿರರ್​ ಲೆಸ್​ ಕ್ಯಾಮೆರಾ. ಇದು ಕ್ರಾಪ್ ಸೆನ್ಸಾರ್​ದೊಂದಿಗೆ ಬರುತ್ತದೆ.

ಸ್ಪೆಸಿಫಿಕೇಷನ್ಸ್​:

  • 24 ಮೆಗಾಪಿಕ್ಸೆಲ್
  • CMOS ಸೆನ್ಸಾರ್​
  • APS-C ಕ್ರಾಪ್ ಸೆನ್ಸಾರ್​

ಸಾಧಕ-ಬಾಧಕಗಳು: ಈ ಕ್ಯಾಮೆರಾದೊಂದಿಗೆ ನೀವು ಪ್ರತಿ ಸೆಕೆಂಡಿಗೆ 30 ಫ್ರೇಮ್‌ಗಳ ರೇಟ್​ನಲ್ಲಿ 4K ವಿಡಿಯೋಗಳನ್ನು ಶೂಟ್ ಮಾಡಬಹುದು. ಪೂರ್ಣ HD ವಿಡಿಯೋಗಳನ್ನು 60fps ನಲ್ಲಿ ರೆಕಾರ್ಡ್ ಮಾಡಬಹುದು. ಇದರಲ್ಲಿ ನಾವು ಕ್ಲೀನ್ HDMI ಔಟ್ಪುಟ್ ಹೊಂದಿದ್ದೇವೆ. ಹಾಗಾಗಿ ಲೈವ್ ವಿಡಿಯೋಗಳನ್ನೂ ಮಾಡಬಹುದು. ಇದು ಡಿಜಿಟಲ್ ವಿಡಿಯೋ ಸ್ಟೆಬಿಲೈಸೇಶನ್​ ಸಹ ಹೊಂದಿದೆ. ಆದ್ದರಿಂದ ನೀವು ಯಾವುದೇ ಶೇಕ್ಸ್ ಇಲ್ಲದೆ ನಿಮ್ಮ ವಿಡಿಯೋಗಳು ಮತ್ತು ಫೋಟೋಗಳನ್ನು ತೆಗೆಯಬಹುದು.

4. Sony Alpha ZV-E10 : ಕಡಿಮೆ ಬಜೆಟ್​ನಲ್ಲಿ ಉತ್ತಮ ಸೋನಿ ಕ್ಯಾಮೆರಾ ಖರೀದಿಸಲು ಬಯಸುವವರಿಗೆ 'Sony Alpha ZV-E10' ಅತ್ಯುತ್ತಮ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 52,000 ರಿಂದ 55,000 ರೂ.

ಸ್ಪೆಸಿಫಿಕೇಷನ್ಸ್​:

  • 24.2 ಮೆಗಾಪಿಕ್ಸೆಲ್
  • CMOS ಸೆನ್ಸಾರ್​
  • APS-C ಕ್ರಾಪ್ ಸೆನ್ಸಾರ್​

ಸಾಧಕ-ಬಾಧಕಗಳು: ಈ ಸೋನಿ ಕ್ಯಾಮೆರಾದೊಂದಿಗೆ ನೀವು ಪ್ರತಿ ಸೆಕೆಂಡಿಗೆ 30 ಫ್ರೇಮ್‌ಗಳ ರೇಟ್​ನಲ್ಲಿ 4K ವಿಡಿಯೋಗಳನ್ನು ಶೂಟ್ ಮಾಡಬಹುದು. ಪೂರ್ಣ HD ವಿಡಿಯೋಗಳನ್ನು 60fps ನಲ್ಲಿ ರೆಕಾರ್ಡ್ ಮಾಡಬಹುದು. ಇದರಲ್ಲಿ ನಾವು ಕ್ಲೀನ್ HDMI ಔಟ್ಪುಟ್ ಅನ್ನು ಹೊಂದಿದ್ದೇವೆ. ಹಾಗಾಗಿ ಲೈವ್ ವಿಡಿಯೋಗಳನ್ನೂ ಮಾಡಬಹುದು. ಇದು ಎಲೆಕ್ಟ್ರಾನಿಕ್ ವಿಡಿಯೋ ಸ್ಟೆಬಿಲೈಸೇಶನ್ ಸಹ ಹೊಂದಿದೆ. ಆದ್ದರಿಂದ ನೀವು ಶೇಕ್ಸ್ ಮತ್ತು ಬ್ಲರ್‌ಗಳಿಲ್ಲದೆ ವಿಡಿಯೋಗಳು ಮತ್ತು ಫೋಟೋಗಳನ್ನು ತೆಗೆದುಕೊಳ್ಳಬಹುದು.

5. Panasonic LUMIX G7 : ರೂ.50 ಸಾವಿರದೊಳಗೆ ಉತ್ತಮ ಕ್ಯಾಮೆರಾ ಖರೀದಿಸಲು ಬಯಸುವವರಿಗೆ ಪ್ಯಾನಾಸೋನಿಕ್ ಲುಮಿಕ್ಸ್ ಜಿ7 ಉತ್ತಮ ಆಯ್ಕೆಯಾಗಿದೆ. ಇದರ ಬೆಲೆ ಸರಿಸುಮಾರು ರೂ.42,000 ರಿಂದ ರೂ.45,000. ಏಕೆಂದರೆ ಇದು ಸ್ವಲ್ಪ ಹಳೆಯ ಮಾದರಿ. ಆದರೆ ಅದರ ಪರ್ಫಾಮಸ್​ ಉತ್ತಮವಾಗಿದೆ. ಕಡಿಮೆ ಬಜೆಟ್ ಇರುವವರು ಮಾತ್ರ ಇದನ್ನು ಪ್ರಯತ್ನಿಸಬಹುದು.

ಸ್ಪೆಸಿಫಿಕೇಷನ್ಸ್​:

  • 16 ಮೆಗಾಪಿಕ್ಸೆಲ್
  • CMOS ಸೆನ್ಸಾರ್​
  • APS-C ಕ್ರಾಪ್ ಸೆನ್ಸಾರ್​

ಸಾಧಕ-ಬಾಧಕಗಳು: 4K ಮತ್ತು ಪೂರ್ಣ HD ವಿಡಿಯೋಗಳನ್ನು ಇದರೊಂದಿಗೆ ತೆಗೆದುಕೊಳ್ಳಬಹುದು. ಇದು ಕ್ಲೀನ್ HDMI ಔಟ್ಪುಟ್ ಹೊಂದಿದೆ. ಆದರೆ ವಿಡಿಯೋ ಸ್ಟೆಬಿಲೈಸೇಶನ್ ಇಲ್ಲ. ಆದ್ದರಿಂದ ನೀವು ಗಿಂಬಲ್ ಅಥವಾ ಟ್ರೈಪಾಡ್ ಬಳಸಿ ವಿಡಿಯೋಗಳು ಮತ್ತು ಫೋಟೋಗಳನ್ನು ಶೂಟ್ ಮಾಡಬೇಕು.

ಸೂಚನೆ-1: ಇಲ್ಲಿ ಉಲ್ಲೇಖಿಸಲಾದ ಎಲ್ಲಾ DSLR ಕ್ಯಾಮೆರಾಗಳು ಕ್ರಾಪ್ ಸೆನ್ಸಾರ್​ದೊಂದಿಗೆ ಬರುತ್ತವೆ. ಹಾಗಾಗಿ, ಫುಲ್ ಫ್ರೇಮ್ ಸೆನ್ಸಾರ್ ಕ್ಯಾಮೆರಾಗಳು ಬೇಕೆಂದರೆ 2 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತದೆ. ಇನ್ನೊಂದು ಮುಖ್ಯ ವಿಷಯವೆಂದರೆ ಈ ಕ್ಯಾಮೆರಾಗಳ ಬೆಲೆಗಳು ಎಂದಿಗೂ ಒಂದೇ ಆಗಿರುವುದಿಲ್ಲ. ಮಾರಾಟಗಾರರು ಸೀಸನ್​ ಮತ್ತು ಬೇಡಿಕೆಯನ್ನು ಅವಲಂಬಿಸಿ ಅವುಗಳ ಬೆಲೆಗಳನ್ನು ಬದಲಾಯಿಸುತ್ತಾರೆ. ಆದ್ದರಿಂದ ನೀವು ಡಿಎಸ್ಎಲ್ಆರ್ ಕ್ಯಾಮೆರಾಗಳನ್ನು ಖರೀದಿಸುವಾಗ ವಿವಿಧ ವೆಬ್‌ಸೈಟ್‌ಗಳು ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಪರಿಶೀಲಿಸುವುದು ಉತ್ತಮ.

ಸೂಚನೆ-2: ಈ DSLR ಕ್ಯಾಮೆರಾಗಳೊಂದಿಗೆ ನೀವು ಪಡೆಯುವ ಕಿಟ್ ಲೆನ್ಸ್‌ಗಳನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ. ನೀವು ಇನ್ನೂ ಉತ್ತಮ ಔಟ್‌ಪುಟ್ ಬಯಸಿದರೆ, ಅವುಗಳನ್ನು ಬೆಂಬಲಿಸುವ ಉತ್ತಮ ಲೆನ್ಸ್‌ಗಳನ್ನು ನೀವು ಖರೀದಿಸಬೇಕು.

ಇದನ್ನೂ ಓದಿ: ಸ್ಮಾರ್ಟ್​ ವಾಚ್​ ಮೂಲಕ ಟ್ಯಾಪ್​ ಆ್ಯಂಡ್​ ಪೇ ವೈಶಿಷ್ಟ್ಯ ಪರಿಚಯಿಸಿದ ಬೋಟ್​! - TAP AND PAY IN BOAT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.