ETV Bharat / technology

ಮಂಗಳ ಗ್ರಹದ ಕಲ್ಲು, ಮಣ್ಣು ತರುವ ಅಧ್ಯಯನ: 7 ಕಂಪನಿಗಳಿಗೆ $10 ಮಿಲಿಯನ್ ನಿಧಿ ಮೀಸಲಿಟ್ಟ ನಾಸಾ - Mars Sample Return Mission

author img

By ETV Bharat Karnataka Team

Published : Jun 9, 2024, 2:03 PM IST

ಮಂಗಳ ಗ್ರಹದ ಮೇಲಿನ ಕಲ್ಲು ಮಣ್ಣಿನ ಮಾದರಿಗಳನ್ನು ಭೂಮಿಗೆ ತರುವ ವಿಧಾನಗಳ ಬಗೆಗಿನ ಅಧ್ಯಯನಕ್ಕಾಗಿ ನಾಸಾ 10 ಮಿಲಿಯನ್ ಡಾಲರ್ ನಿಧಿ ಮೀಸಲಿಟ್ಟಿದೆ.

ನಾಸಾ (ಸಂಗ್ರಹ ಚಿತ್ರ)
ನಾಸಾ (ಸಂಗ್ರಹ ಚಿತ್ರ) (IANS)

ನವದೆಹಲಿ: ಅತ್ಯಂತ ತ್ವರಿತವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಮಂಗಳ ಗ್ರಹದ ಮೇಲಿಳಿದು ಅಲ್ಲಿನ ಮಣ್ಣು ಹಾಗೂ ಕಲ್ಲುಗಳ ಮಾದರಿಗಳನ್ನು ಮರಳಿ ಭೂಮಿಗೆ ತರುವ ವಿಧಾನಗಳನ್ನು ಅನ್ವೇಷಿಸುವ ಅಧ್ಯಯನಗಳಿಗಾಗಿ, ಏಳು ಕಂಪನಿಗಳಿಗೆ ನಾಸಾ ಶನಿವಾರ ತಲಾ 1.5 ಮಿಲಿಯನ್ ಡಾಲರ್ ಅನುದಾನ ಘೋಷಿಸಿದೆ. ಅನುದಾನ ಪಡೆದುಕೊಂಡಿರುವ ಲಾಕ್ ಹೀಡ್ ಮಾರ್ಟಿನ್, ಸ್ಪೇಸ್ಎಕ್ಸ್, ಬ್ಲೂ ಒರಿಜಿನ್, ಕ್ವಾಂಟಮ್ ಸ್ಪೇಸ್ ಮತ್ತು ನಾರ್ತ್ ರಾಪ್ ಗ್ರುಮನ್ ಸೇರಿದಂತೆ ಏಳು ಕಂಪನಿಗಳು ಮೂರು ತಿಂಗಳ ಅವಧಿಯ 10 ಸುದೀರ್ಘ ಅಧ್ಯಯನಗಳನ್ನು ನಡೆಸಲಿವೆ.

ಇದಲ್ಲದೆ ನಾಸಾ ಕೇಂದ್ರಗಳು, ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಮತ್ತು ಜಾನ್ಸ್ ಹಾಪ್ ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಲ್ಯಾಬೊರೇಟರಿ ಸಹ ಈ ಬಗ್ಗೆ ಅಧ್ಯಯನ ನಡೆಸುತ್ತಿವೆ. ಈ ಅಧ್ಯಯನಗಳು ಪೂರ್ಣಗೊಂಡ ನಂತರ ಎಲ್ಲಾ ಅಧ್ಯಯನಗಳ ಫಲಿತಾಂಶಗಳನ್ನು ಒಟ್ಟುಗೂಡಿಸಿ ಮಂಗಳನಿಂದ ಭೂಮಿಗೆ ಸ್ಯಾಂಪಲ್​ಗಳನ್ನು ತರುವ ಯೋಜನೆಗಳನ್ನು ಯಾವ ರೀತಿ ಬದಲಾಯಿಸಬಹುದು ಅಥವಾ ಮತ್ತಷ್ಟು ಉತ್ತಮಗೊಳಿಸಬಹುದು ಎಂಬ ಬಗ್ಗೆ ನಾಸಾ ಪರಿಶೀಲಿಸಲಿದೆ.

ಪ್ರತಿ ಕಂಪನಿಯು ತಮ್ಮ 90 ದಿನಗಳ ಅಧ್ಯಯನಕ್ಕಾಗಿ $ 1.5 ಮಿಲಿಯನ್​ ಧನಸಹಾಯ ಪಡೆಯಲಿದೆ. ನಾಸಾ ಆಯ್ಕೆ ಮಾಡಿದ ಐದು ಕಂಪನಿಗಳು ನಾಸಾದ ದೊಡ್ಡ ಗುತ್ತಿಗೆದಾರರ ಪಟ್ಟಿಯಲ್ಲಿವೆ ಮತ್ತು ಅಧ್ಯಯನ ಒಪ್ಪಂದಗಳಲ್ಲಿ ಇವು ಭಾಗಿಯಾಗುತ್ತಿವೆ. ಇನ್ನಿತರ ಎರಡು ಕಂಪನಿಗಳು ಸಣ್ಣ ಉದ್ಯಮ ಸಂಸ್ಥೆಗಳಾಗಿವೆ.

"ಮಂಗಳನಿಂದ ಮಾದರಿಗಳನ್ನು ಭೂಮಿಗೆ ತರುವ ಯೋಜನೆಯು ನಾಸಾ ಕೈಗೊಂಡ ಅತ್ಯಂತ ಸಂಕೀರ್ಣ ಯೋಜನೆಗಳಲ್ಲೊಂದಾಗಿದೆ. ಇದನ್ನು ಆದಷ್ಟು ತ್ವರಿತವಾಗಿ, ಕಡಿಮೆ ಅಪಾಯದೊಂದಿಗೆ ಮತ್ತು ಕಡಿಮೆ ವೆಚ್ಚದಲ್ಲಿ ಅನುಷ್ಠಾನಗೊಳಿಸುವುದು ನಿರ್ಣಾಯಕವಾಗಿದೆ" ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದರು.

ಮಾರ್ಸ್ ಸ್ಯಾಂಪಲ್ ರಿಟರ್ನ್ ಯೋಜನೆಯು ನಾಸಾದ ಗ್ರಹ ವಿಜ್ಞಾನ ವಿಭಾಗದ ಅತ್ಯಂತ ಆದ್ಯತೆಯ ಅಧ್ಯಯನವಾಗಿದೆ. ಪ್ರಸ್ತುತ ಮಂಗಳ ಗ್ರಹದಲ್ಲಿರುವ ಪರ್ಸಿವರೆನ್ಸ್ ರೋವರ್ ಸಿಗರೇಟ್​ ಆಕಾರದ ಟೈಟಾನಿಯಂ ಟ್ಯೂಬ್ ಗಳಲ್ಲಿ ಬಂಡೆಯ ಪುಡಿ, ಮಣ್ಣು ಮತ್ತು ಮಂಗಳನ ಮೇಲಿನ ಗಾಳಿಯ ಹಲವಾರು ಡಜನ್ ಮಾದರಿಗಳನ್ನು ಸಂಗ್ರಹಿಸುತ್ತಿದ್ದು, ಅವುಗಳನ್ನು ಭೂಮಿಗೆ ತರಲಿದೆ.

ಮಂಗಳ ಗ್ರಹದ ಆರಂಭಿಕ ಇತಿಹಾಸವನ್ನು ನಿರ್ಧರಿಸಲು ಮತ್ತು ಭೂಮಿ ಸೇರಿದಂತೆ ವಾಸಯೋಗ್ಯ ಪ್ರಪಂಚಗಳ ರಚನೆ ಮತ್ತು ವಿಕಾಸವನ್ನು ಅರ್ಥಮಾಡಿಕೊಳ್ಳಲು ನಾಸಾ ಕಳೆದ ಶತಮಾನದಿಂದ ಹಲವಾರು ಸಂಶೋಧನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ. ನಾಸಾದ ಮಾರ್ಸ್ ಸ್ಯಾಂಪಲ್ ರಿಟರ್ನ್ ಯೋಜನೆಯು ಇಎಸ್ಎ (ಯುರೋಪಿಯನ್ ಸ್ಪೇಸ್ ಏಜೆನ್ಸಿ) ಯೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ.

ಇದನ್ನೂ ಓದಿ : ಇಂಡೋನೇಷ್ಯಾ ನಂತರ ಶ್ರೀಲಂಕಾದಲ್ಲಿಯೂ ಸ್ಟಾರ್​ಲಿಂಕ್ ಇಂಟರ್​ನೆಟ್​ ಸಂಪರ್ಕ ಆರಂಭ - Starlink In Sri Lanka

ETV Bharat Logo

Copyright © 2024 Ushodaya Enterprises Pvt. Ltd., All Rights Reserved.