ETV Bharat / technology

ಶಾಕಿಂಗ್​ ಹೇಳಿಕೆ ನೀಡಿದ ನಾಸಾ: ಸುನೀತಾ ವಿಲಿಯಮ್ಸ್, ಬುಚ್​ ವಿಲ್ಮೋರ್​ ಭೂಮಿಗೆ ಕರೆತರಲು ಮತ್ತೆ ವಿಳಂಬ! - NASA ANNOUNCES ANOTHER DELAY

NASA Announces Another Delay: ನಾಸಾ ಮತ್ತೊಂದು ಶಾಕಿಂಗ್​ ಹೇಳಿಕೆ ನೀಡಿದೆ. ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಮರಳುವುದು ಮತ್ತೆ ವಿಳಂಬವಾಗುತ್ತದೆ ಎಂದು ನಾಸಾ ತಿಳಿಸಿದೆ.

NASA  DELAY IN SUNITA WILLIAMS RETURN  NASA ASTRONAUTS  NASA ASTRONAUTS RETURN
ಸುನೀತಾ ವಿಲಿಯಮ್ಸ್, ಬುಚ್​ ವಿಲ್ಮೋರ್​ ಭೂಮಿಗೆ ಕರೆತರಲು ಮತ್ತೆ ವಿಳಂಭ (Photo Credit: ANI)
author img

By ETV Bharat Tech Team

Published : 3 hours ago

NASA Announces Another Delay: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ನಾಸಾದ ಇಬ್ಬರು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ತಮ್ಮ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಮತ್ತೆ ವಿಸ್ತರಿಸಲಿದ್ದಾರೆ. ಏಕೆಂದರೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಶಾಕಿಂಗ್​ ಹೇಳಿಕೆ ನೀಡಿದೆ. ಸುನಿತಾ ಮತ್ತು ವಿಲ್ಮೋರ್​ ಭೂಮಿಗೆ ಬರುವುದು ಇನ್ನಷ್ಟು ತಡವಾಗಲಿದೆ ಎಂದು ನಾಸಾ ತಿಳಿಸಿದೆ.

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅನೇಕ ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಇಬ್ಬರೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಅವರಿಬ್ಬರನ್ನು ಕರೆತರಲಾಗದೆ ಭೂಮಿಗೆ ಮರಳಿತ್ತು. ಇದಾದ ಬಳಿಕ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಮೊದಲ ಹೇಳಿಕೆ ಹೊರಬಿದ್ದಿತ್ತು. ನಾವು ಮುಂದಿನ ಅವಕಾಶದ ಕಡೆಗೆ ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದರು.

"ನಾವು ಇದಕ್ಕೆ ಸಿದ್ಧರಿದ್ದೇವೆ": ಈ ಕಾರ್ಯಾಚರಣೆಯು 8 ದಿನಗಳಿಂದ 8 ತಿಂಗಳವರೆಗೆ ಇರುತ್ತದೆ. ಈ ಕಾರಣದಿಂದಾಗಿ, ಅನೇಕ ತಿಂಗಳು ಬಾಹ್ಯಾಕಾಶದಲ್ಲಿ ಕಳೆದ ನಂತರ, ಇಬ್ಬರೂ ಗಗನಯಾತ್ರಿಗಳು ಇನ್ನೂ ಕೆಲ ತಿಂಗಳು ಬಾಹ್ಯಾಕಾಶದಲ್ಲಿ ಇರಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರೂ ಮಾತನಾಡಿ, ನಾವು ಇದಕ್ಕೆ ಸಿದ್ಧರಿದ್ದೇವೆ. 8 ದಿನಗಳಿಂದ 8 ತಿಂಗಳವರೆಗೆ, ನಾವು ಅತ್ಯುತ್ತಮವಾದದ್ದನ್ನು ನೀಡುತ್ತೇವೆ ಎಂದಿದ್ದರು.

ಭೂಮಿಗೆ ಮರಳುವುದು ಹೇಗೆ: ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಇಬ್ಬರು ಗಗನಯಾತ್ರಿಗಳನ್ನು ಹಿಂದಿರುಗಿಸುವ ಕಾರ್ಯಾಚರಣೆಯನ್ನು ಪದೇ ಪದೇ ಮುಂದೂಡಲಾಗುತ್ತಿತ್ತು. ನಂತರ NASA ಆಗಸ್ಟ್ 24 ರಂದು ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಕ್ರ್ಯೂ 9 ಮಿಷನ್‌ನ ಭಾಗವಾಗಲಿದ್ದಾರೆ ಎಂದು ಘೋಷಿಸಿತ್ತು. ಫೆಬ್ರವರಿ 2025 ರಲ್ಲಿ ಸ್ಪೇಸ್‌ಎಕ್ಸ್ ಅವರು ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ 8 ತಿಂಗಳ ನಂತರ ಹಿಂತಿರುಗಲಿದ್ದಾರೆ ಎಂದು ನಾಸಾ ಸ್ಪಷ್ಟಪಡಿಸಿತ್ತು. ಈಗ ಮತ್ತೊಂದು ಹೇಳಿಕೆಯಲ್ಲಿ ಮಾರ್ಚ್​ವರೆಗೆ ಈ ಕಾರ್ಯಾಚರಣೆ ಮುಂದೂಡಲಾಗಿದೆ ಎಂದು ಹೇಳಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ ಕ್ರ್ಯೂ -9 ಅನ್ನು ನಿವಾರಿಸಲು ಸಿದ್ಧವಾಗಿರುವ ಕ್ರ್ಯೂ -10 ಮಾರ್ಚ್ 2025 ಕ್ಕಿಂತ ಮುಂಚಿತವಾಗಿ ಉಡಾವಣೆಯಾಗುವುದಿಲ್ಲ ಎಂದು ನಾಸಾ ಮಂಗಳವಾರ ಘೋಷಿಸಿದೆ.

ತಡವೇಕೆ? ಮಾಧ್ಯಮಗಳ ವರದಿ ಪ್ರಕಾರ, ಬಾಹ್ಯಾಕಾಶದಲ್ಲಿ ಸಿಲುಕಿರುವ ಜೋಡಿ ಗಗನಯಾತ್ರಿಗಳು ಬಿಡುಗಡೆಗೊಳ್ಳುವ ಮೊದಲು ಹೊಸ ಗುಂಪಿನ ಸಿಬ್ಬಂದಿಯನ್ನು ಉಡಾವಣೆ ಮಾಡಬೇಕಾಗಿದೆ ಮತ್ತು ಮುಂದಿನ ಕಾರ್ಯಾಚರಣೆಯ ಉಡಾವಣೆಯನ್ನು ಮುಂದೂಡಲಾಗಿದೆ.

ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ NASA "ಈ ಬದಲಾವಣೆಯು NASA ಮತ್ತು SpaceX ತಂಡಗಳಿಗೆ ಮಿಷನ್‌ಗಾಗಿ ಹೊಸ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯವನ್ನು ನೀಡುತ್ತದೆ" ಎಂದು ಹೇಳಿದೆ.

"ಹೊಸ ಬಾಹ್ಯಾಕಾಶ ನೌಕೆಯ ತಯಾರಿಕೆ, ಜೋಡಣೆ, ಪರೀಕ್ಷೆ ಮತ್ತು ಅಂತಿಮ ಇಂಟಿಗ್ರೆಷನ್​ ಒಂದು ಶ್ರಮದಾಯಕ ಪ್ರಯತ್ನವಾಗಿದೆ. ಇದು ವಿವರಗಳಿಗೆ ಹೆಚ್ಚಿನ ಗಮನವನ್ನು ಬಯಸುತ್ತದೆ" ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದರು.

ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯುವುದರ ಮೇಲೆ ಆರೋಗ್ಯ ಹದಗೆಡುವ ಆತಂಕವಿದೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಚಿತ್ರಗಳು ತೂಕ ನಷ್ಟವನ್ನು ಸೂಚಿಸುತ್ತಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.

ಓದಿ: ಬಾಹ್ಯಾಕಾಶದಲ್ಲಿ ಕ್ರಿಸ್​ಮಸ್​ ಆಚರಿಸಲಿರುವ ಸುನಿತಾ: ಸಾಂಟಾ ಹ್ಯಾಟ್​ ಸೆಲ್ಫಿ ಹಂಚಿಕೊಂಡ ಗಗನಯಾತ್ರಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.