ETV Bharat / technology

ದೊಡ್ಡ ಕವರ್​ ಸ್ಕ್ರೀನ್​, ಡ್ಯುಯೆಲ್​ ಒಎಲ್​ಇಡಿ ಪ್ಯಾನೆಲ್​ನೊಂದಿಗೆ ಬರಲಿದೆ ಮೊಟೊರೊಲಾ ರೇಜರ್​ 50 - Motorola Razr 50 smartphone

ರೇಜರ್​ನ ಹೊಸ ಎಡಿಷನ್​ ಇದಾಗಿದ್ದು, ಕವರ್​ ಸ್ಕ್ರೀನ್​ ಮತ್ತು ಅಡ್ವಾನ್ಸ್​​ ಫೀಚರ್​ನಿಂದಾಗಿ ಮೋಡಿ ಮಾಡಲಿದ್ದು, ಮಾರುಕಟ್ಟೆಯಲ್ಲಿ ಗಮನ ಸೆಳೆಯಲಿದೆ.

author img

By ANI

Published : Jun 3, 2024, 2:29 PM IST

Motorola Razr 50 to feature big cover screen, dual OLED panels, robust specs: Report
ಮೊಟೊರೊಲಾ ರೇಜರ್​ 50 (ಮೊಟೊರೊಲಾ ರೇಜರ್​ 50_ ANI)

ವಾಷಿಂಗ್ಟನ್​: ಸ್ಮಾರ್ಟ್​ಫೋನ್​ ಪ್ರಿಯರಿಗೆ ಹೊಸ ಸುದ್ದಿಯೊಂದನ್ನು ಮೊಟೊರೊಲಾ ನೀಡಿದೆ. ಬಹುನಿರೀಕ್ಷೆಯ ಮೊಟೊರೊಲಾ ರೇಜರ್​​ 50 ವಿನ್ಯಾಸ ಮತ್ತು ಅದರ ವೈಶಿಷ್ಟಗಳ ಕುರಿತ ಅನೇಕ ಊಹಾಪೋಹಗಳ ನಡುವೆ ಇದೀಗ ಟಿಇಎನ್​ಎಎಎ ಸರ್ಟಿಫೀಕೆಟ್​​​ ಸೈಟ್​ನಲ್ಲಿ ಕಾಣಲಿದೆ. ರೇಜರ್​ನ ಹೊಸ ಎಡಿಷನ್​ ಇದಾಗಿದ್ದು, ಕವರ್​ ಸ್ಕ್ರೀನ್​ ಮತ್ತು ಅಡ್ವಾನ್ಸ್​​ ಫೀಚರ್​ನಿಂದಾಗಿ ಇದು ಮೋಡಿ ಮಾಡಲಿದ್ದು, ಮಾರುಕಟ್ಟೆಯಲ್ಲಿ ಗಮನ ಸೆಳೆಯಲಿದೆ ಎಂದು ಜಿಎಸ್​​ಎಂ ಅರೆನಾ ತಿಳಿಸಿದೆ.

ಟಿಇಎನ್​ಎಎಎ ರೇಜರ್​ 50 ಸ್ಮಾರ್ಟ್​ಫೋನ್​ ಅನ್ನು ಲಿಸ್ಟ್​​ ಮಾಡಿರುವುದಾಗಿ ದೃಢೀಕರಿಸಿದೆ. ಫೋನ್​ 3.6 ಇಂಚ್​​ ಕವರ್​ ಸ್ಕ್ರೀನ್​ ಹೊಂದಿದೆ. ಎರಡು ಕ್ಯಾಮೆರಾ ಮತ್ತು ಎಲ್​ಇಡಿ ಫ್ಲಾಶ್​ ಹೊಂದಿರಲಿದೆ. ಇನ್ನು ಒಳಾಂಗಣ ಡಿಸ್​​ಫ್ಲೇ ನಲ್ಲಿ 6.9 ಇಂಚ್​​ನ ಮಡಚಬಹುದಾದ ಒಲೆಡ್​ ಪ್ಯಾನೆಲ್​, ಬೊಸ್ಟಿಂಗ್​ ಫುಲ್​ ಎಚ್​ಡಿ+ ರೆಸಲ್ಯೂಷನ್​ ಮತ್ತು 32 ಎಂಪಿ ಮುಂಭಾಗದ ಕ್ಯಾಮೆರಾವೂ ವಿಶಾಲ ದೃಶ್ಯ ಮತ್ತು ಉತ್ತಮ ಸೆಲ್ಫಿಯನ್ನು ಹೊಂದಿದೆ.

ಅಪರೂಪದ ಸೆಟ್​ಅಪ್​ನೊಂದಿಗೆ ರೇಜರ್​ 50 ಮುಖ್ಯ ಕ್ಯಾಮೆರಾ, 13 ಎಂಪಿ ಅಲ್ಟ್ರಾವೆಡ್​ ಶೂಟರ್​​ 50 ಎಂಪಿ ಕ್ಯಾಮೆರಾ ಹೊಂದಿದೆ. ಡ್ಯುಯೆಲ್​ ಒಎಲ್​ಇಡಿ ಪ್ಯಾನೆಲ್​ ಹೊರತಾಗಿ, ಮೊಟೊರೊಲಾ ಸೈಡ್​- ಮೌಂಟೆಡ್​​ ಫಿಂಗರ್​ಪ್ರಿಂಟ್​ ಸ್ಕ್ಯಾನರ್​, ಸ್ಲೀಮ್​ ಮತ್ತು ಸ್ಲಮ್ಲೇಸ್​​ ವಿನ್ಯಾಸವನ್ನು ಹೊಂದಿದೆ.

ಮಿಡ್​ರೇಜ್​ ಚಿಪ್​ಸೆಟ್​​ ಹೊಂದಿದ್ದು, ರೇಜರ್​ 40 ರೀತಿ ಅಲ್ಲದೇ, ಇದರಲ್ಲಿ ಸ್ನಾಪ್​ಡ್ರಾಗಲ್​ 7 ಜೆನ್​1 ಬಳಕೆ ಮಾಡಲಾಗಿದೆ. ರೇಜರ್​ 50 ಮೀಡಿಯಾ ಟೆಕ್​ ಪ್ರೊಸೆಸರ್​​ಗೆ ಬದಲಾಗಲಿದೆ ಎಂಬ ಗಾಳಿ ಸುದ್ದಿಯೂ ಇದೆ.

ಇನ್ನು ಇದರ ಸಾಮರ್ಥ್ಯ ಮತ್ತು ಪ್ರದರ್ಶನವನ್ನು ಹೆಚ್ಚಿಸಲು 2.5ಗಿಗಾ ಹರ್ಟ್ಸ್​ ಸಿಪಿಯು ಪಟ್ಟಿ ಮಾಡಿದ್ದು, 7300X ಫ್ಲಾಟ್​ಫಾರ್ಮ್​ ಅನ್ನು ಘೋಷಿಸಬೇಕಿದೆ. 171.3 x 73.9 x 7.2 ಎಂಎಂ ಅಗಲದ ಅನ್​ಫೋಲ್ಡ್​​ ಮೊಬೈಲ್​ಗಳನ್ನು ರೇಜರ್​ 50 ದೃಢಪಡಿಸಿದ್ದು, ಇದು 188 ಗ್ರಾಂ ತೂಕ ಹೊಂದಿದೆ. ಈ ಡೈಮನ್ಶನ್​​ಗಳು ನಯವಾದ ಮತ್ತು ನಿರ್ವಹಿಸಬಹುದಾದ ಸಾಧನವಾಗಿದ್ದು,, ಪೋರ್ಟಬಿಲಿಟಿಯೊಂದಿಗೆ ಸಮತೋಲನ ಸಾಧಿಸಲಾಗಿದೆ.

ಅನೇಕ ವೈಶಿಷ್ಟ್ಯ, ಸಾಮರ್ಥ್ಯಗಳನ್ನು ಹೊಂದಿರುವ ಈ ಫೋನ್​ 16 ಜಿಬಿ ರ್‍ಯಾಮ್​ ಹೊಂದಿದ್ದು, 1 ಟಿಬಿ ಇಂಟರ್ನಲ್​ ಸ್ಟೊರೇಜ್​ ಹೊಂದಿದೆ. ಫೋಲ್ಡಬಲ್​ ಸ್ಮಾರ್ಟ್​ಫೋನ್​ನ ಬ್ಯಾಟರಿ ಬಾಳಿಕೆ ಒಂದು ನಿರ್ಣಾಯಕ ಪರಿಗಣನೆಯಾಗಿದೆ. ರೇಜರ್​​ 50 ಗಣನೀಯ ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆಯಿದೆ, ದೀರ್ಘಕಾಲದ ಬಾಳಿಕೆ ನಿರೀಕ್ಷಿಸಲಾಗಿದೆ.

ಮೊಟೊರೊಲಾ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಉದ್ಯಮದ ಅಂದಾಜಿನ ಪ್ರಕಾರ, ಮುಂದಿನ ವಾರ ಈ ಫೋನ್​ ಬಿಡುಗಡೆ ಆಗುವ ಸಾಧ್ಯತೆ ಇದೆ. (ಎಎನ್​ಐ)

ಇದನ್ನೂ ಓದಿ: ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚೀನಾದ ಚಾಂಗ್'ಇ-6 ನೌಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.