ETV Bharat / technology

ಬಿಡುಗಡೆಯಾದ ತಿಂಗಳೊಳಗೆ ಬುಕಿಂಗೋ ಬುಕಿಂಗ್;! ಹೊಸ ಡಿಸೈರ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​! - MARUTI DZIRE IN DEMAND

Maruti Dzire In Demand: ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾರುತಿ ಡಿಸೈರ್​ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರುಕಟ್ಟೆಗೆ ಕಾಲಿಟ್ಟು ಇನ್ನು ತಿಂಗಳು ಕಳೆದಿಲ್ಲ. ಆದ್ರೆ ಮಾರಾಟದಲ್ಲಿ ಮಾತ್ರ ಗಮನ ಸೆಳೆದಿದೆ.

MARUTI DZIRE BOOKINGS  MARUTI DZIRE NEW MODEL  MARUTI DZIRE PRICE  MARUTI DZIRE FEATURES
ಹೊಸ ಡಿಸೈರ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ (Maruti Suzuki)
author img

By ETV Bharat Tech Team

Published : Dec 9, 2024, 8:15 AM IST

Maruti Dzire In Demand: ಈಗ ಹೊಸ ಮಾರುತಿ ಡಿಸೈರ್​ಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಹೊಸ ಮಾರುತಿ ಡಿಸೈರ್ ನವೆಂಬರ್ 11 ರಂದು ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವುದು ಗೊತ್ತಿರುವ ಸಂಗತಿ. ಬಿಡುಗಡೆಗೆ ಮುಂಚೆಯೇ ಈ ಕಾರು ಕ್ರ್ಯಾಶ್ ಟೆಸ್ಟ್​ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿತ್ತು.

ಕಂಪನಿಯು ಹೊಸ ಡಿಸೈರ್‌ನಲ್ಲಿ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಿದೆ. ಇದರಿಂದಾಗಿ ಈ ಕಾರು 5-ಸ್ಟಾರ್ ರೇಟಿಂಗ್ ಪಡೆದ ಮಾರುತಿಯ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇಂದಿನ ದಿನಗಳಲ್ಲಿ ಡಿಸೈರ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಈ ಕಾರು ಬಿಡುಗಡೆಗೊಂಡು ಒಂದು ತಿಂಗಳು ಕೂಡ ಕಳೆದಿಲ್ಲ. ಆದ್ರೆ 30 ಸಾವಿರಕ್ಕೂ ಹೆಚ್ಚು ಯುನಿಟ್ಸ್​ ಬುಕ್ಕಿಂಗ್ ಆಗಿದೆ.

ಮಾರುತಿ ಹೊಸ ಪೀಳಿಗೆಯ ಡಿಸೈರ್ ಮಾಡೆಲ್​ಗಳು ದಿನಕ್ಕೆ ಸುಮಾರು 1000ಕ್ಕೂ ಹೆಚ್ಚು ಬುಕ್ಕಿಂಗ್ ಆಗುತ್ತಿವೆ. ವಾಹನ ತಯಾರಕರು ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ವಿತರಿಸಿದ್ದಾರೆ. ಸದ್ಯ ಈ ಮಾರುತಿ ವಾಹನದ ವೇಟಿಂಗ್​ ಟೈಂ ಸುಮಾರು ಮೂರು ತಿಂಗಳಿಗೆ ತಲುಪಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಪ್ರತಿದಿನ ಸುಮಾರು ಎರಡು ಪಟ್ಟು ಬುಕಿಂಗ್ ನಡೆಯುತ್ತಿದೆ ಎಂದು ಮಾರುತಿ ಹೇಳುತ್ತಿದೆ.

ಸೇಫ್ಟಿ ಫೀಚರ್​: ಡಿಸೈರ್​ ಕಾರಿನಲ್ಲಿ ಜನರ ಸುರಕ್ಷತೆಗೆ ಮಾರುತಿ ಗರಿಷ್ಠ ಗಮನ ನೀಡಿದೆ. ಈ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ABS) ಜೊತೆಗೆ EBD ಅನ್ನು ಸಹ ವಾಹನದಲ್ಲಿ ಅಳವಡಿಸಲಾಗಿದೆ. ಈ ಕಾರು ಡ್ಯುಯಲ್ ಟೋನ್ ಇಂಟೀರಿಯರ್‌ನೊಂದಿಗೆ ಬರುತ್ತದೆ. 360 ಡಿಗ್ರಿ ಕ್ಯಾಮರಾ ಜೊತೆಗೆ ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯವನ್ನು ಈ ಕಾರಿನಲ್ಲಿ ನೋಡಬಹುದು. ಮಾರುತಿ ಹೊಸ ಡಿಸೈರ್‌ನಲ್ಲಿ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಸಹ ನೀಡಿದ್ದಾರೆ. ಕಾರು 15 ಇಂಚಿನ ಅಲಾಯ್​ ವ್ಹೀಲ್​ಗಳನ್ನು ಹೊಂದಿದೆ.

ಕಾರಿನ ಬೆಲೆ: ಹೊಸ ಮಾರುತಿ ಡಿಸೈರ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೂ, ಈ ಕಾರಿನ ಬೆಲೆ 7 ಲಕ್ಷ ರೂ. ರೇಂಜ್​ನಲ್ಲಿದೆ. ಹೊಸ ಡಿಸೈರ್‌ನ ಎಕ್ಸ್ ಶೋ ರೂಂ ಬೆಲೆ 6.79 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಅದರ ಉನ್ನತ ಮಾದರಿಯ ಬೆಲೆ 10.14 ಲಕ್ಷ ರೂ.ರವೆಗೆ ಇದೆ. ಮಾರುತಿಯ ಈ ಕಾರು 24.79 kmpl ನಿಂದ 25.71 kmpl ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

ಓದಿ: ಮಹೀಂದ್ರಾ-ಇಂಡಿಗೋ ಮಧ್ಯೆ ತಿಕ್ಕಾಟ; M&M ವಿರುದ್ಧ ಪ್ರಕರಣ ದಾಖಲಿಸಿದ ಏರ್​ಲೈನ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.