ETV Bharat / technology

ಮಹಾ ಕುಂಭ ಮೇಳಕ್ಕೆ 'ವಿಶೇಷ ನ್ಯಾವಿಗೇಷನ್ ಸಿಸ್ಟಂ​' ಅಭಿವೃದ್ಧಿಪಡಿಸುತ್ತಿದೆ ಗೂಗಲ್: ಭಕ್ತರಿಗೆ ಹಲವು ಪ್ರಯೋಜನ - MAHA KUMBH MELA 2024

ಉತ್ತರ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಮಹಾ ಕುಂಭಮೇಳ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಗೂಗಲ್​ ಮತ್ತು ಉತ್ತರ ಪ್ರದೇಶದ ಸರ್ಕಾರದ ನಡುವೆ ಮಹತ್ವದ ಒಪ್ಪಂದ ನಡೆದಿದೆ.

GOOGLE NAVIGATION  DEVOTEES CAN USE GOOGLE MAP  MAHA KUMBH MELA  GOOGLE UTTARA PRADESH GOVERNMENT
ಮಹಾ ಕುಂಭ ಮೇಳಕ್ಕೆ 'ವಿಶೇಷ ನ್ಯಾವಿಗೇಷನ್ ಸಿಸ್ಟಂ​' ಅಭಿವೃದ್ಧಿಪಡಿಸುತ್ತಿದೆ ಗೂಗಲ್ (ETV Bharat)
author img

By ETV Bharat Tech Team

Published : Nov 5, 2024, 11:26 AM IST

Maha Kumbh Mela 2024: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಭಕ್ತರ ಅನುಕೂಲಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ರಾಜ್ಯ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕ್ರಮದಲ್ಲಿ ಜಾಗತಿಕ ಡಿಜಿಟಲ್ ದೈತ್ಯ ಗೂಗಲ್, ಮಹಾ ಕುಂಭಮೇಳ ಪ್ರದೇಶವನ್ನು ತನ್ನ ನ್ಯಾವಿಗೇಷನ್ ಸಿಸ್ಟಮ್‌ಗೆ ಇದೇ ಮೊದಲ ಬಾರಿಗೆ ಜೋಡಿಸಲು ನಿರ್ಧರಿಸಿದೆ. ಇದಕ್ಕಾಗಿ ಸೋಮವಾರ ಗೂಗಲ್ ಮತ್ತು ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರ ಎಂಒಯುಗೆ ಸಹಿ ಹಾಕಿದೆ.

ಮಹಾ ಕುಂಭ ಮೇಳಕ್ಕಾಗಿ ವಿಶೇಷ ನ್ಯಾವಿಗೇಷನ್ ಸಿಸ್ಟಮ್​ ಅನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ. ಇದು ಭಕ್ತರಿದೆ ವಿವಿಧ ಸ್ಥಳಗಳು, ಅಖಾಡಗಳು ಮತ್ತು ಸ್ವಾಮೀಜಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯ ಈ ತಿಂಗಳ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಶುರುವಾಗುವ ನಿರೀಕ್ಷೆಯಿದೆ.

ಗೂಗಲ್ ತಾತ್ಕಾಲಿಕ ನಗರಕ್ಕಾಗಿ ನ್ಯಾವಿಗೇಷನ್ ಅನ್ನು ರಚಿಸುತ್ತಿರುವುದು ಇದೇ ಮೊದಲು. ಇದು ಪ್ರವಾಸಿಗರಿಗೆ ಪ್ರಮುಖ ರಸ್ತೆಗಳು, ಧಾರ್ಮಿಕ ಸ್ಥಳಗಳು, ಘಾಟ್‌ಗಳು, ಅಖಾಡಗಳು ಮತ್ತು ಸ್ವಾಮೀಜಿಗಳಿರುವ ಸ್ಥಳಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತದೆ.

ಮಹಾ ಕುಂಭಮೇಳ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಅದರ ಭವ್ಯತೆ ಮತ್ತು ಆಧ್ಯಾತ್ಮಿಕತೆಯಿಂದ ಖ್ಯಾತಿ ಗಳಿಸಿದೆ.

ಗೂಗಲ್ ನ್ಯಾವಿಗೇಶನ್ ಎಂದರೇನು?: ಗೂಗಲ್ ನ್ಯಾವಿಗೇಶನ್ ಎನ್ನುವುದು ಗೂಗಲ್ ನಕ್ಷೆಗಳ ಅಪ್ಲಿಕೇಶನ್‌ನಲ್ಲಿರುವ ವೈಶಿಷ್ಟ್ಯ. ಇದು ಗಮ್ಯಸ್ಥಾನಕ್ಕೆ ಇಂಚಿಂಚು ದಿಕ್ಕುಗಳನ್ನು ಒದಗಿಸುತ್ತದೆ. ಈ ಉಪಕರಣವು ಸಮಗ್ರ ನಕ್ಷೆಗಳನ್ನು ಪ್ರಸ್ತುತಪಡಿಸುವುದಲ್ಲದೇ, ಯಾವಾಗ ಮತ್ತು ಎಲ್ಲಿ ಟರ್ನ್​ ತೆಗೆದುಕೊಳ್ಳಬೇಕು ಎಂಬುದರ ಕುರಿತು ವಿವರವಾದ ಸೂಚನೆಗಳನ್ನು ನೀಡುತ್ತದೆ.

ಇದನ್ನೂ ಓದಿ: ನಿಮ್ಮ ನಿರೀಕ್ಷೆಗಿಂತ ಬೇಗ ಬರಲಿದೆ ಆಂಡ್ರಾಯ್ಡ್​ 16: ಗೂಗಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.