Kadaknath Chicken Breed: ಭಾರತದ ಅನೇಕ ಪ್ರದೇಶಗಳಲ್ಲಿ, ನಾವು ಅಪರೂಪದ ಮತ್ತು ಆಕರ್ಷಕವಾದ ಕೋಳಿಗಳ ತಳಿಯನ್ನು ನೋಡುತ್ತೇವೆ. ಈ ಕೋಳಿಯನ್ನು ಕಡಕ್ನಾಥ್ ಎಂದು ಕರೆಯುತ್ತೇವೆ. ಈ ಕೋಳಿ ಸಾಂಸ್ಕೃತಿಕ ಮತ್ತು ಜೈವಿಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
ಕಡಕ್ನಾಥ್ ಕೋಳಿಗಳು ಅನೇಕ ಜನರನ್ನು ಸೆಳೆಯುತ್ತಿದೆ. ಅದರ ಕಪ್ಪು ಗರಿಗಳು, ಕಪ್ಪು ಮಾಂಸ ಮತ್ತು ಕಪ್ಪು ರಕ್ತ, ಕಪ್ಪು ಮೊಟ್ಟೆ, ಅಷ್ಟೇ ಏಕೆ ಅದರ ಮೂಳೆಗಳು ಸಹ ಕಪ್ಪಾಗಿದ್ದು, ಈ ಕೋಳಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕಡಕ್ನಾಥ್ ಕೋಳಿಯ ರಕ್ತ, ಮಾಂಸದ ಬಣ್ಣ ಏಕೆ ಕಪ್ಪಾಗಿದೆ ಗೊತ್ತಾ? ಇದರ ಹಿಂದೆ ವೈಜ್ಞಾನಿಕ ರಹಸ್ಯವಿದೆ. ಅದರ ಕುರಿತಾದ ಮಾಹಿತಿ ಇಲ್ಲಿದೆ..
ಕಡಕ್ನಾಥ್ ಕೋಳಿಯ ವಿಶೇಷತೆಗಳು: ಕಡಕ್ನಾಥ್ ಕೋಳಿಯನ್ನು ಮುಖ್ಯವಾಗಿ ಬುಡಕಟ್ಟು ಜನಾಂಗದವರು ಸಾಕುತ್ತಾರೆ. ಕೋಳಿಯ ಇತರ ತಳಿಗಳಿಗಿಂತ ಕಡಕ್ನಾಥ್ ಭಿನ್ನವಾಗಿದ್ದು, ಅದರ ಮಾಂಸ, ಮೂಳೆಗಳು, ಅದರ ಆಂತರಿಕ ಅಂಗಗಳು ಸಹ ಕಪ್ಪು ಬಣ್ಣದಿಂದ ಕೂಡಿವೆ. ಅಷ್ಟೇ ಅಲ್ಲ, ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಕೋಳಿಯ ರಕ್ತವೂ ಸಹ ಕಪ್ಪಾಗಿದೆ.
ಕಪ್ಪು ರಕ್ತಕ್ಕೆ ಕಾರಣವೇನು?: ಕೋಳಿ ಉದ್ಯಮದಲ್ಲಿ ಕಪ್ಪು ರಕ್ತದ ಕೋಳಿಗಳು ಅಪರೂಪ. ಕೋಳಿಯ ಕಪ್ಪು ರಕ್ತವು ಫೈಬ್ರೊಮಾಟೋಸಿಸ್ ಎಂಬ ಆನುವಂಶಿಕ ಸ್ಥಿತಿಯಿಂದ ಉಂಟಾಗುತ್ತದೆ. ಕೋಳಿಗಳು ಮೆಲನಿನ್ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ, ಅದರ ಬಣ್ಣವೂ ಕಪ್ಪು ಆಗುತ್ತದೆ. ಈ ಮೆಲನಿನ್ ವರ್ಣದ್ರವ್ಯವು ಪ್ರಾಣಿಗಳ ಚರ್ಮ ಮತ್ತು ಕೂದಲಿನ ಬಣ್ಣಕ್ಕೆ ಕಾರಣವಾಗಿದೆ. ಫೈಬ್ರೊಮೆಲನೋಸಿಸ್ ಕಡಕ್ನಾಥ್ಗೆ ಸೀಮಿತವಾಗಿಲ್ಲ. ಚೈನೀಸ್ ಸಿಲ್ಕಿ ಚಿಕನ್‌ನಂತಹ ಇತರ ಕೆಲವು ತಳಿಗಳಲ್ಲಿಯೂ ಇದನ್ನು ಕಾಣಬಹುದು. ಆದ್ರೆ ಕಡಕ್ನಾಥ ಕೋಳಿಯ ಕಪ್ಪು ಮಾಂಸ, ಕಡು ಕಪ್ಪು ರಕ್ತ ಬಹಳ ವಿಶಿಷ್ಟವಾಗಿರುವುದು ಗಮನಾರ್ಹ.
ಕಡ್ಕನಾಥ್ ಕೋಳಿ ತಳಿಯು ಭಾರತೀಯ ತಳಿಯಾಗಿದೆ. ಅವುಗಳ ವಿಶಿಷ್ಟ ಆನುವಂಶಿಕ ಗುಣಲಕ್ಷಣಗಳಿಂದಾಗಿ ಈ ಕೋಳಿಗಳ ರಕ್ತವು ಕಪ್ಪು ಮತ್ತು ಗಾಢ ಕೆಂಪು ಅಥವಾ ಆಳವಾದ ಕಡುಗೆಂಪು ಬಣ್ಣದ್ದಾಗಿದೆ. ಆನುವಂಶಿಕ ಗುಣಲಕ್ಷಣಗಳಿಂದಾಗಿ ಈ ಕೋಳಿಗಳ ರಕ್ತನಾಳಗಳಲ್ಲಿ ಹೆಚ್ಚು ಪೋರ್ಫಿರಿನ್‌ಗಳಿವೆ. ಸಂಶೋಧನೆಯಲ್ಲಿ ಕಡಕ್ನಾಥ್ ಕೋಳಿಗಳು ವಿಭಿನ್ನ ರಕ್ತ ರಾಸಾಯನಶಾಸ್ತ್ರವನ್ನು ಹೊಂದಿವೆ ಎಂದು ತೋರಿಸಿದೆ ಎಂದು ಪ್ರೋ. ಸಚಿನ್ ದೇಬಾಜೆ (Research Scholar Department of Zoology Dr.Babasaheb Ambedkar Marathwada University Chatrapati Sambhajinagar) ಮಾಹಿತಿ ನೀಡಿದ್ದಾರೆ.
ಕಡಕ್ನಾಥ್ ಕೋಳಿಯ ಪ್ರಾಮುಖ್ಯತೆ: ಶತಮಾನಗಳಿಂದ ಆದಿವಾಸಿಗಳ ಜೀವನದಲ್ಲಿ ಕಡಕ್ನಾಥ್ ಕೋಳಿಗೆ ವಿಶೇಷ ಸ್ಥಾನವಿದೆ. ಸಾಂಪ್ರದಾಯಿಕವಾಗಿ, ಈ ಪಕ್ಷಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ಕೋಳಿಗಳನ್ನು ಆಚರಣೆಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಕೆಲ ಆದಿವಾಸಿಗಳು ಕಡಕ್ನಾಥ್ ಕೋಳಿಯನ್ನು ಶಕ್ತಿ ಮತ್ತು ಚೈತನ್ಯದ ಸಂಕೇತವೆಂದು ಪರಿಗಣಿಸುತ್ತದೆ. ಈ ಕೋಳಿಯ ಮಾಂಸವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಇಂತಹ ಕೋಳಿಯನ್ನು ಸೇವಿಸುವುದರಿಂದ ಮನುಷ್ಯನ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ ಎಂದೂ ಹೇಳಲಾಗುತ್ತದೆ.
ಕಡಕ್ನಾಥ್ ತಳಿಗೆ ಬೇಡಿಕೆಯೋ ಬೇಡಿಕೆ: ಕಡಕ್ನಾಥ್ ಕೋಳಿಗಳಿಗಿರುವ ಸಾಂಸ್ಕೃತಿಕ ಗೌರವವು ಎಷ್ಟು ದೊಡ್ಡದಾಗಿದೆ ಎಂದರೆ ಈ ಪಕ್ಷಿಯನ್ನು ಪ್ರತಿಷ್ಠಿತ ಕೊಡುಗೆ ಎಂದು ಪರಿಗಣಿಸಲಾಗಿದೆ. ಈ ಕೋಳಿಗಳನ್ನು ಬುಡಕಟ್ಟು ಜನಾಂಗದವರ ನಡುವೆ ಮದುವೆಯ ಸಮಯದಲ್ಲಿ, ಹೆಚ್ಚಾಗಿ ಹಬ್ಬದ ಸಂದರ್ಭಗಳಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಅನೇಕರಿಗೆ, ಕೋಳಿಯನ್ನು ಹೊಂದುವುದು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂದಿಗೂ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಕಡಕ್ನಾಥ ಕೋಳಿಗಳಿಗೆ ಬೇಡಿಕೆ ಹೆಚ್ಚುತ್ತದೆ. ಹಾಗಾಗಿ ರೈತರೂ ಕಡಕ್ನಾಥ್ ಕೋಳಿಯತ್ತ ಮುಖ ಮಾಡುತ್ತಿದ್ದಾರೆ.
ಮಾಂಸ, ಮೂಳೆಗಳು ಕಪ್ಪು ಏಕೆ?: ಕಡಕ್ನಾಥ ಕಪ್ಪು ರಕ್ತವು ಅನೇಕರಿಗೆ ಆಘಾತಕಾರಿಯಂತೆ ಕಂಡರೂ, ಅದು ಸಂಪೂರ್ಣವಾಗಿ ಕಪ್ಪು ಅಲ್ಲ. ಅದರ ರಕ್ತವನ್ನು ಗಾಢ ಕೆಂಪು ಎಂದು ಪರಿಗಣಿಸಲಾಗುತ್ತದೆ. ಮಾಂಸ ಮತ್ತು ಆಂತರಿಕ ಅಂಗಗಳ ಕಪ್ಪು ಬಣ್ಣಕ್ಕೆ ಕೋಳಿಯಲ್ಲಿರುವ ಮೆಲನಿನ್ ಕಾರಣ. ಮೆಲನಿನ್ ನೇರಳಾತೀತ ವಿಕಿರಣದಿಂದ ರಕ್ಷಿಸುವುದರಿಂದ ಈ ಆನುವಂಶಿಕ ಲಕ್ಷಣವು ರಕ್ಷಣೆಯ ಒಂದು ರೂಪವಾಗಿ ವಿಕಸನಗೊಂಡಿದೆ ಎಂದು ನಂಬಲಾಗಿದೆ. ಇದು ಕಠಿಣ ಪರಿಸರದಲ್ಲಿ ಪಕ್ಷಿಗಳು ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ. ಅಂತಹ ಪಕ್ಷಿಗಳು ತಮ್ಮ ಸ್ಥಿತಿಸ್ಥಾಪಕತ್ವ ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳನ್ನು ಬದುಕುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.
ಕೋಳಿಯಲ್ಲಿದೆ ಅಧಿಕ ಪ್ರೊಟೀನ್: ಕಡಕ್ನಾಥ್ ಚಿಕನ್ ಕೂಡ ಅಧಿಕ ಪ್ರೊಟೀನ್ಗೆ ಹೆಸರುವಾಸಿಯಾಗಿದೆ. ಕಪ್ಪು ಮಾಂಸವು ಕೆಲವು ಅಮೈನೋ ಆಮ್ಲಗಳು, ಕಬ್ಬಿಣ, ಸತು ಮುಂತಾದ ಖನಿಜಗಳನ್ನು ಹೊಂದಿರುತ್ತದೆ. ಇದು B12 ನಂತಹ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಸಾಮಾನ್ಯ ಕೋಳಿಗೆ ಹೋಲಿಸಿದರೆ, ಇದು ಕಡಿಮೆ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಆದ್ದರಿಂದ, ಈ ಕೋಳಿಯ ಮಾಂಸ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆರ್ಥಿಕ ಅವಕಾಶಗಳು ಮತ್ತು ಸವಾಲುಗಳು: ಇತ್ತೀಚಿನ ವರ್ಷಗಳಲ್ಲಿ, ಕಡಕ್ನಾಥ್ ಕೋಳಿಯ ಮಾಂಸ ನಗರವಾಸಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಕೋಳಿ, ಕಪ್ಪು ಮಾಂಸದ ವಿಶಿಷ್ಟ ರುಚಿ ಮತ್ತು ಅಪರೂಪದ ಕಾರಣ, ಮುಂಬೈ, ದೆಹಲಿ, ಬೆಂಗಳೂರಿನಂತಹ ನಗರಗಳಲ್ಲಿ ಕಡಕ್ನಾಥ ತಳಿಗೆ ಹೆಚ್ಚಿನ ಬೇಡಿಕೆಯಿದೆ.
ಕಡಕನಾಥ ಕೋಳಿಗೆ ಸಬ್ಸಿಡಿ: ಕಡಕ್ನಾಥ್ ಕೋಳಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ರೈತರಿಗೆ ಸೇರಿದಂತೆ ಅನೇಕ ಜನರಿಗೆ ಆರ್ಥಿಕ ಅವಕಾಶಗಳನ್ನು ತೆರೆದಿದೆ. ಇದರ ಸಾಮರ್ಥ್ಯವನ್ನು ಗುರುತಿಸಿ, ಕೆಲ ಸರ್ಕಾರಗಳು ಸಬ್ಸಿಡಿಗಳು, ತರಬೇತಿ ಕಾರ್ಯಕ್ರಮಗಳು, ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಪ್ರೋತ್ಸಾಹಿಸಲು ಕ್ರಮಗಳನ್ನು ಕೈಗೊಂಡಿದೆ. ಕಡಕ್ನಾಥ್ ಕೋಳಿಗಳು 2018 ರಲ್ಲಿ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಸಹ ಪಡೆದಿದ್ದಾವೆ.
ಹೆಚ್ಚು ಹೂಡಿಕೆ: ಹೆಚ್ಚುತ್ತಿರುವ ಬೇಡಿಕೆಯ ಹೊರತಾಗಿಯೂ ದೊಡ್ಡ ಪ್ರಮಾಣದ ವಾಣಿಜ್ಯೀಕರಣವು ಸವಾಲುಗಳನ್ನು ಎದುರಿಸುತ್ತಿದೆ. ಕಡಕ್ನಾಥ್ ಕೋಳಿಗಳು ಸಾಮಾನ್ಯ ಬಾಯ್ಲರ್ ಕೋಳಿಗಳಿಗಿಂತ ಕಡಿಮೆ ಬೆಳವಣಿಗೆಯ ದರವನ್ನು ಹೊಂದಿವೆ. ಬಾಯ್ಲರ್ ಚಿಕನ್‌ಗೆ ಹೋಲಿಸಿದರೆ ಕಡಕ್ನಾಥ್ ಕೋಳಿಗಳು ಬೆಳೆಯಲು ಆರು ತಿಂಗಳು ತೆಗೆದುಕೊಳ್ಳುತ್ತದೆ. ಈ ದೀರ್ಘಾವಧಿಗೆ ರೈತರಿಂದ ಹೆಚ್ಚಿನ ಹೂಡಿಕೆ ಮತ್ತು ತಾಳ್ಮೆ ಅಗತ್ಯವಿರುತ್ತದೆ. ಹೆಚ್ಚುವರಿಯಾಗಿ, ಕಡಕ್ನಾಥ್ ಕೋಳಿಗಳನ್ನು ಸೀಮಿತಗೊಳಿಸಲಾಗುವುದಿಲ್ಲ. ಇದು ಸುತ್ತಲು ಸ್ಥಳಾವಕಾಶದ ಅಗತ್ಯವಿರುತ್ತದೆ. ಇದು ಅದರ ಉತ್ಪಾದನಾ ವೆಚ್ಚವನ್ನು ಸೇರಿಸುತ್ತದೆ. ಇದಲ್ಲದೆ ಕಡಕ್ನಾಥ ಕೋಳಿಯ ಆನುವಂಶಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಸಮಸ್ಯೆಯಾಗಿದೆ. ಹೆಚ್ಚಿದ ಬೇಡಿಕೆಯಿಂದಾಗಿ ಕೆಲವು ಮಾರಾಟಗಾರರು ಕಪ್ಪು ಗರಿಗಳ ಕೋಳಿಯನ್ನು ಕಡಕ್ನಾಥ್ ಎಂದು ನೀಡಲು ಪ್ರಾರಂಭಿಸಿದ್ದಾರೆ. ಗ್ರಾಹಕರು ಮತ್ತು ರೈತರನ್ನು ರಕ್ಷಿಸಲು, ಡಿಎನ್‌ಎ ಪರೀಕ್ಷೆ ಮತ್ತು ಕೃಷಿ ಪ್ರಮಾಣಪತ್ರಗಳು ಸೇರಿದಂತೆ ಕಡಕ್ನಾಥ್ ಕೋಳಿಯ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಆಧುನಿಕ ಪಾಕಪದ್ಧತಿಯಲ್ಲಿ ಕಡಕ್ನಾಥನ ಸ್ಥಾನ: ಕಡಕ್ನಾಥ್ ತನ್ನ ವಿಶಿಷ್ಟ ರುಚಿ ಮತ್ತು ಪೌಷ್ಟಿಕಾಂಶದ ಗುಣಗಳಿಂದ ಭಾರತದ ಗೌರ್ಮಂಡ್‌ಗಳಲ್ಲಿ ಸ್ಥಾನ ಗಳಿಸಿದೆ. ಕಪ್ಪು ಮಾಂಸವು ಅದರ ಉತ್ತಮ ರುಚಿಗೆ ಹೆಸರುವಾಸಿಯಾಗಿದೆ. ಕಡಕ್ನಾಥ್ನ ಆರೋಗ್ಯ ಪ್ರಯೋಜನಗಳು ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಉತ್ಸಾಹಿಗಳ ಗಮನವನ್ನು ಸೆಳೆಯುತ್ತಿದೆ. ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನಂಶ, ಡಾರ್ಕ್ ಮಾಂಸ ಹೊಂದಿರುವುದರಿಂದ ಇದನ್ನು ಸೂಪರ್‌ಫುಡ್‌ನಂತೆ ನೋಡಲಾಗುತ್ತಿದೆ.
ಕಡಕ್ನಾಥ್ ಭವಿಷ್ಯ : ಅರಿವು ಹೆಚ್ಚಾದಂತೆ ಕೋಳಿ ಮಾಂಸ ಮಾರುಕಟ್ಟೆಯಲ್ಲಿ ಕಡಕ್ನಾಥ್ ಪ್ರಮುಖ ಅಂಶವಾಗಲು ಸಿದ್ಧವಾಗಿದೆ. ಮುಂದುವರಿದ ಸರ್ಕಾರದ ಬೆಂಬಲ ಮತ್ತು ಸುಸ್ಥಿರ ಕೃಷಿ ಪದ್ಧತಿಗಳೊಂದಿಗೆ ಕಡಕ್ನಾಥ್ ಕೋಳಿಯ ಭವಿಷ್ಯವು ಉಜ್ವಲವಾಗಿ ಕಾಣುತ್ತಿದೆ.
ಓದಿ: ರಾಮನಗರ ಜಿಲ್ಲೆಯಲ್ಲಿ ಫೇಮಸ್ ಆಗುತ್ತಿದೆ ಖಡಕ್ನಾಥ್ ಕೋಳಿ.. ಕರಿ ಕೋಳಿ ಮಾಂಸ ಬಲು ರುಚಿ!