ನವದೆಹಲಿ: Virgin Galactic's new space research flight - ಭಾರತೀಯ ಮೂಲದ ಸಂಶೋಧಕಿ ಶಾವ್ನಾ ಪಾಂಡ್ಯ ಅವರು ಡೆಲ್ಟಾ ಕ್ಲಾಸ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಲು ಸಿದ್ಧರಾಗಿದ್ದಾರೆ. ಶಾವ್ನಾ ಪಾಂಡ್ಯ ಅವರು, ರಿಚರ್ಡ್ ಬ್ರಾನ್ಸನ್ ಅವರ ವರ್ಜಿನ್ ಗ್ಯಾಲಕ್ಟಿಕ್ ಮತ್ತು ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಆಸ್ಟ್ರೋನಾಟಿಕಲ್ ಸೈನ್ಸಸ್ (ಐಐಎಎಸ್) ಎರಡನೇ ಸಂಶೋಧನಾ ಮಿಷನ್‌ನ ಭಾಗವಾಗಲಿದ್ದಾರೆ.
ನವೆಂಬರ್ 2023ರಲ್ಲಿ 'ಗ್ಯಾಲಕ್ಟಿಕ್ 05' ಮಿಷನ್‌ನ ನಂತರ ವರ್ಜಿನ್ ಗ್ಯಾಲಕ್ಟಿಕ್‌ನೊಂದಿಗೆ IIAS ನಡೆಸುತ್ತಿರುವ ಎರಡನೇ ಸಂಶೋಧನಾ ಮಿಷನ್ ಇದಾಗಿದೆ. ಇದು ನವೀನ ಆರೋಗ್ಯ ತಂತ್ರಜ್ಞಾನಗಳನ್ನು ಪರೀಕ್ಷಿಸಿದೆ ಮತ್ತು ಭವಿಷ್ಯದ ವೈದ್ಯಕೀಯ ತಂತ್ರಜ್ಞಾನಗಳು ಮತ್ತು ಜೀವನಕ್ಕಾಗಿ ವಿನ್ಯಾಸಗಳನ್ನು ತಿಳಿಸಲು ಸಹಾಯ ಮಾಡಲು ಕಡಿಮೆ-ಗುರುತ್ವಾಕರ್ಷಣೆಯಲ್ಲಿ ದ್ರವಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು.
ಸಂಶೋಧನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಗಗನಯಾತ್ರಿಗಳು: ಸಂಶೋಧನಾ ಕಾರ್ಯಾಚರಣೆಯಲ್ಲಿ ನಿರೀಕ್ಷಿತ IIAS ಗಗನಯಾತ್ರಿ ಸಿಬ್ಬಂದಿ ಆಗಿರುವ ಕೆಲ್ಲಿ ಗೆರಾರ್ಡಿ- ಬಯೋ ಆಸ್ಟ್ರೊನಾಟಿಕ್ಸ್ ಸಂಶೋಧಕ ಮತ್ತು IIAS ಮಾನವ ಬಾಹ್ಯಾಕಾಶ ಯಾನ ಕಾರ್ಯಾಚರಣೆಗಳ ನಿರ್ದೇಶಕರಾಗಿದ್ದಾರೆ. ಶಾವ್ನಾ ಪಾಂಡ್ಯ- ವೈದ್ಯೆ, ಜಲಚರ, ಜೈವಿಕ ಗಗನಯಾತ್ರಿ ಸಂಶೋಧಕಿ ಮತ್ತು ಕೆನಡಾದಿಂದ IIAS' ಸ್ಪೇಸ್ ಮೆಡಿಸಿನ್ ಗ್ರೂಪ್‌ನ ನಿರ್ದೇಶಕಿ ಆಗಿದ್ದಾರೆ. ಮತ್ತು ನೋರಾ ಪ್ಯಾಟನ್- ಏರೋನಾಟಿಕಲ್ ಇಂಜಿನಿಯರ್ ಮತ್ತು ಐರ್ಲೆಂಡ್‌ನ ಜೈವಿಕ ಆಸ್ಟ್ರೋನಾಟಿಕ್ಸ್ ಸಂಶೋಧಕರು ಆಗಿದ್ದಾರೆ.
ಹಲವು ಹಾರಾಟಗಳಲ್ಲಿ ಭಾಗಿಯಾದ ಅನುಭವ: ಪಾಂಡ್ಯ 2015 ರಲ್ಲಿ ಶೂನ್ಯ ಗುರುತ್ವಾಕರ್ಷಣೆಯಲ್ಲಿ ವಾಣಿಜ್ಯ ಬಾಹ್ಯಾಕಾಶ ಸೂಟ್ ಅನ್ನು ಪರೀಕ್ಷಿಸಿದ ಮೊದಲ ಸಿಬ್ಬಂದಿಯಲ್ಲಿ ಇವರು ಒಬ್ಬರಾಗಿದ್ದರು. ಇಲ್ಲಿಯವರೆಗೆ, ಅವರು 10 ಪ್ಯಾರಾಬೋಲಿಕ್ ಫ್ಲೈಟ್ ಕ್ಯಾಂಪೇನ್‌ಗಳನ್ನು ಹಾರಿಸಿದ ಅನುಭವ ಪಡೆದುಕೊಂಡಿದ್ದಾರೆ. "ಗ್ಯಾಲಕ್ಟಿಕ್ 05ನಲ್ಲಿನ ನಮ್ಮ ದ್ರವ ಕೋಶದ ಪ್ರಯೋಗದ ಫಲಿತಾಂಶಗಳಿಂದ ನಾವು ರೋಮಾಂಚನಗೊಂಡಿದ್ದೇವೆ" ಎಂದು ಗಗನಯಾತ್ರಿ ಕೆಲ್ಲಿ ಗೆರಾರ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
ವರ್ಜಿನ್ ಗ್ಯಾಲಕ್ಟಿಕ್‌ನ ಸರ್ಕಾರಿ ವ್ಯವಹಾರಗಳು ಮತ್ತು ಸಂಶೋಧನೆಯ ವಿಪಿ, ಸಿರಿಶಾ ಬಂಡ್ಲಾ ಅವರು ವರ್ಜಿನ್ ಗ್ಯಾಲಕ್ಟಿಕ್‌ನ 'ಯೂನಿಟಿ 22' ಬಾಹ್ಯಾಕಾಶ ಯಾನದಲ್ಲಿ ಹಾರಿದ್ದರು. ಇವರು ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. "ಐಐಎಎಸ್ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ವಿಸ್ತೃತ ಸಾಮರ್ಥ್ಯದಲ್ಲಿ ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ಸಿರಿಶಾ ಬಂಡ್ಲಾ ತಿಳಿಸಿದರು.
ಇದನ್ನೂ ಓದಿ: ಆಗಸಕ್ಕೆ ಏಣಿ ಇಡುವ ಕಾಲ ಬಂತು ಹತ್ತಿರ, ಬಾಹ್ಯಾಕಾಶ ಪ್ರವಾಸ ಇನ್ನು ಸುಲಭ! - Space Elevator