ನವದೆಹಲಿ: ಭಾರತದ ಬಹುತೇಕ ಉದ್ಯೋಗಿಗಳು ಕೃತಕ ಬುದ್ದಿಮತ್ತೆಯು (ಎಐ) ತಮ್ಮ ಕೆಲಸದಲ್ಲಿ ಹೊಸ ಅವಕಾಶ ನೀಡುವ ಜೊತೆಗೆ ಉದ್ಯೋಗವನ್ನು ಸುಲಭಗೊಳಿಸಿ, ಹೆಚ್ಚು ಆಸಕ್ತಿದಾಯಕಗೊಳಿಸುತ್ತದೆ ಎಂದು ನಂಬಿದ್ದಾರೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಎಚ್ಪಿ ವರ್ಕ್ ರಿಲೇಶನ್‌ಶಿಪ್ ಇಂಡೆಕ್ಸ್ ವರದಿ 'ಗ್ರೋಯಿಂಗ್ ಅಂಡ್ ಮೆಚ್ಯೂರ್ ಎಕಾನಮಿಸ್ (ಜಿಎಂಇ)' ಪ್ರಕಾರ, ಎಐ ತಮ್ಮ ಕೆಲಸವನ್ನು ಪುನರಾವರ್ತಿತ ಕೆಲಸವನ್ನು ನಿಯೋಜಿಸಲು ಎಐ ಅನುವು ಮಾಡಿಕೊಡುತ್ತದೆ. ಜೊತೆಗೆ ಹೆಚ್ಚು ಉತ್ಪಾದಕ ಕೆಲಸದ ಮೇಲೆ ಕೇಂದ್ರೀಕರಿಸಿ ಉತ್ಪಾದನೆ ಅಭಿವೃದ್ಧಿ ಮಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅಧ್ಯಯನದಲ್ಲಿ ಶೇ 77ರಷ್ಟು ಮಂದಿ ನಂಬಿರುವಂತೆ ಎಐ ಹೊಸ ಅವಕಾಶವನ್ನು ತೆರೆಯುವ ಮೂಲಕ ಕೆಲಸದಿಂದ ಸಂತೋಷ ತರುತ್ತದೆ ಎಂಬುದೇ ಗಮನಾರ್ಹ ವಿಷಯವಾಗಿದೆ. ಅಮೆರಿಕ, ಯುಕೆ, ಜಪಾನ್, ಫ್ರಾನ್ಸ್, ಜರ್ಮನಿ ಮತ್ತು ಕೆನಾಡಾದಂತ 12 ದೇಶಗಳಲ್ಲಿ 15 ಸಾವಿರ ಭಾಗಿರದಾರರು ಈ ವರದಿಯಲ್ಲಿ ಪ್ರತಿಕ್ರಿಯಿಸಿದ್ದು, ಭಾರತದ 1,300 ಭಾಗಿದಾರರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ವರದಿ ಪ್ರಕಾರ, ಭಾರತದ ಜ್ಞಾನ ಕಾರ್ಯಕರ್ತರು (knowledge Workers) ಜಾಗತಿಕವಾಗಿ ಅತ್ಯಂತ ಸಂತೋಷದಾಯಕವಾಗಿ ಹೊರಹೊಮ್ಮಿದ್ದಾರೆ. ಇವರು ಶೇ 50ರಷ್ಟು ಕೆಲಸದ ಜೊತೆಗೆ ಆರೋಗ್ಯಕರ ಸಂಬಂಧವನ್ನು ಹೊಂದುವ ವಿಶ್ವಾಸವನ್ನು ಅಧ್ಯಯನದಲ್ಲಿ ವರದಿ ಮಾಡಿದ್ದಾರೆ. ಎಐ ತಮ್ಮ ಆರ್ಥಿಕತೆಯನ್ನು ಅನುಭವಿಸುವ ಹಾಗೂ ಅವರ ತೃಪ್ತಿಯ ಮಟ್ಟವನ್ನು ದುಪ್ಪಟ್ಟು ಮಾಡಿದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಇದರ ಪ್ರಮಾಣ ಒಟ್ಟಾರೆಯಾಗಿ ಶೇ 21 ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅಧ್ಯಯನದಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಭಾರತ ಸೇರಿದಂತೆ ಇನ್ನಿತರ ದೇಶದ ಅಧ್ಯಯನದಲ್ಲಿ ಉದ್ಯೋಗಿಗಳ ಆರ್ಥಿಕತೆಗಳಲ್ಲಿ ಗೆಳೆಯರೊಂದಿಗೆ ಹೋಲಿಸಿದಾಗ ಕೆಲಸದ ಜೊತೆಗೆ ಆರೋಗ್ಯಕರ ಸಂಬಂಧವನ್ನು ಅನುಭವಿಸುವ ಸಾಧ್ಯತೆಯಲ್ಲಿ ಹೆಚ್ಚಿರುವುದು ಕಂಡು ಬಂದಿದೆ. ಇದಕ್ಕಿಂತ ಹೆಚ್ಚಾಗಿ, ವರದಿ ತಿಳಿಸುವಂತೆ ಶೇ 68ರಷ್ಟು ಕೆಲಸಗಾರರು ಆರ್ಥಿಕತೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದಾರೆ. ಮುಂದಿನ 12 ತಿಂಗಳುಗಳಲ್ಲಿ ಇನ್ನಷ್ಟು ಸುಧಾರಣೆ ಕಾಣಲಿದೆ ಎಂದು ನಂಬಿದ್ದು, ಇದು ಪ್ರಬುದ್ಧ ಆರ್ಥಿಕತೆಗೆ ಶೇ 36ರಷ್ಟು ವ್ಯತಿರಿಕ್ತವಾಗಿದೆ ಎಂದು ಕೂಡ ತಿಳಿಸಿದ್ದಾರೆ
ಹೊಸ ಅವಕಾಶಗಳ ಸೃಷ್ಟಿಯಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದು ಉದ್ಯೋಗವನ್ನು ಸುಲಭಗೊಳಿಸುತ್ತದೆ. ಬೆಳೆಯುತ್ತಿರುವ ಆರ್ಥಿಕತೆಯ ಕೆಲಸದಲ್ಲಿ ಎಐ ಮತ್ತಷ್ಟು ಆಸಕ್ತಿಯನ್ನು ಮೂಡಿಸುತ್ತದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: 100 ಮಿಲಿಯನ್ ದಾಟಿದ ಯೂಟ್ಯೂಬ್ Music & Premium ಚಂದಾದಾರರ ಸಂಖ್ಯೆ