ನವದೆಹಲಿ: ಜಾಗತಿಕ ಮಟ್ಟದಲ್ಲಿ ಥ್ರೆಡ್ಸ್ ಅನ್ನು ಹೆಚ್ಚು ಬಳಸುತ್ತಿರುವ ದೇಶ ಭಾರತ ಎಂದು ಮೆಟಾ ತಿಳಿಸಿದೆ. ಥ್ರೆಡ್ನಲ್ಲಿರುವ ಜನಪ್ರಿಯ ಟ್ಯಾಗ್ ಮತ್ತು ವಿಷಯಗಳು ಹೆಚ್ಚಾಗಿ ಭಾರತದ ಸಿನಿಮಾ, ಟಿವಿ, ಒಟಿಟಿ ಮತ್ತು ಸೆಲೆಬ್ರಿಟಿ ಸಂಬಂಧಿತ ವಿವಾದಗಳು ಮತ್ತು ಕ್ರೀಡಾ ವಿಷಯಗಳಾಗಿವೆ.
ಜಗತ್ತಿನಲ್ಲಿ ಥ್ರೆಡ್ಸ್ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 175 ಮಿಲಿಯನ್. ಭಾರತದಲ್ಲಿ ಥ್ರೆಡ್ಸ್ ಬಳಕೆದಾರರು ಮತ್ತೊಬ್ಬ ಬಳಕೆದಾರರು ಮತ್ತು ಅವರ ವಿಡಿಯೋಗಳನ್ನು ಉಲ್ಲೇಖಿಸುತ್ತಾರೆ ಎಂದು ಸಿಇಒ ಮಾರ್ಕ್ ಜುಕರ್ಬರ್ಗ್ ತಿಳಿಸಿದ್ದಾರೆ.
ಥ್ರೆಡ್ಸ್ ಪ್ರಾಥಮಿಕ ಬಳಕೆದಾರರು ಅಕ್ಷರ ಆಧಾರಿತ ರಚನೆ ಮಾಡುತ್ತಾರೆ. ಆದರೆ, ಅನೇಕರು ಈ ಪೋಸ್ಟ್ಗೆ ಪೂರಕವಾದ ಮಾಧ್ಯಮಗಳ ಜೊತೆ ಪೋಸ್ಟ್ ಮಾಡುತ್ತಾರೆ. ಥ್ರೆಡ್ಸ್ನಲ್ಲಿ ಅಕ್ಷರದ ರಚನೆಗಿಂತ ಹೆಚ್ಚಾಗಿ ಫೋಟೋಗಳನ್ನು ಹೆಚ್ಚು ಬಳಸುತ್ತಾರೆ. ಇದು ಯಾವ ಮಟ್ಟಿಗೆ ಎಂದರೆ ಪ್ರತಿ ನಾಲ್ಕರಲ್ಲಿ ಒಬ್ಬ ಬಳಕೆದಾರ ಫೋಟೋ ಉಲ್ಲೇಖಿಸುತ್ತಾರೆ. ಆ್ಯಪ್ನಲ್ಲೂ ಕ್ಯಾಮೆರಾ ಪರಿಚಯಿಸಿದ ಬಳಿಕ ಫೋಟೋಗ್ರಫಿ ಥ್ರೆಡ್ಸ್ ಸಮುದಾಯ ಬೆಳವಣಿಗೆ ಕಂಡಿದೆ ಎಂದಿದ್ದಾರೆ.
ಮುಂದಿನ ವರ್ಷದಲ್ಲಿ ಥ್ರೆಡ್ಸ್ ಅನ್ನು ಮತ್ತಷ್ಟು ಆಕರ್ಷಕ ಆ್ಯಪ್ ಆಗಿ ರೂಪಿಸಲಾಗುವುದು. ನೈಜ ಸಮಯದ ಆಸಕ್ತಿ ಮತ್ತು ಜನರಿಗೆ ತಮ್ಮ ಆಲೋಚನೆ, ಚಿಂತನೆಗಳನ್ನು ಮತ್ತಷ್ಟು ಆರಾಮದಾಯಕವಾಗಿ ಹಂಚುವ ವೈಶಿಷ್ಟ್ಯಗಳನ್ನು ಅಳವಡಿಸಲು ಚಿಂತಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಥ್ರೆಡ್ಸ್ನಲ್ಲಿ 50 ಮಿಲಿಯನ್ ವಿಷಯಗಳ ಟ್ಯಾಗ್ಗಳನ್ನು ಸೃಷ್ಟಿಸಲಾಗುತ್ತಿದೆ. ಬಳಕೆದಾರರು ತಮ್ಮ ವಿವಿಧ ಆಸಕ್ತಿಗೆ ಅನುಗುಣವಾಗಿ ಹಂಚಿಕೊಳ್ಳುತ್ತಿದ್ದಾರೆ. ವಿಷಯ ಹಂಚಿಕೊಳ್ಳುವಿಕೆಗೆ ಥ್ರೆಡ್ಸ್ ಅನ್ನು ಸಾರ್ವಜನಿಕರ ಉತ್ತಮ ಸ್ಥಳವಾಗಿ ರೂಪಿಸುವಲ್ಲಿ ನಾವು ಸಹಾಯ ಮಾಡುತ್ತಿದ್ದೇವೆ. ಪ್ರತಿಯೊಬ್ಬರ ಆಸಕ್ತಿಗಳು ಮೌಲ್ಯಯುತವಾಗಿದ್ದು, ಅದರನುಸಾರ ಕ್ರಿಯೆಟರ್ಗೆ ಮುಕ್ತ ಜಾಗ ನೀಡಲಾಗುತ್ತಿದೆ. ಅನೇಕರು ಇನ್ಫುಯೆನ್ಸರ್‌ಗಳಾಗಿ ಬೆಳವಣಿಗೆ ಕಾಣುತ್ತಿದ್ದಾರೆ ಎಂದರು.
ಥ್ರೆಡ್ಸ್ನಲ್ಲಿ ಹಿಂದಿನ ಟ್ವಿಟರ್ (ಈಗಿನ ಎಕ್ಸ್) ರೀತಿ ಇದ್ದು ಲೈಕ್, ಪೋಸ್ಟ್, ರಿಪೋಸ್ಟ್, ಎಡಿಟ್, ರಿಸೀವ್ಡ್ ಲೈಕ್ಸ್ ಆ್ಯಂಡ್ ಕಾಮೆಂಟ್ ಸೆಕ್ಷನ್ ನೀಡಲಾಗಿದೆ. ಬಳಕೆದಾರರು ಫೋಟೋ, ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಅದಕ್ಕೆ ಬರುವ ಕಾಮೆಂಟ್, ಲೈಕ್ಸ್ ಕೆಳಭಾಗದಲ್ಲಿ ಕಾಣಸಿಗುತ್ತವೆ. ಇಲ್ಲಿ ಇಂದಿನ ವಿಷಯಗಳ ಚರ್ಚೆಯ ಜೊತೆಗೆ ನಾಳೆಗೆ ಟ್ರೆಂಡ್ ಆಗುವ ಸಬ್ಜೆಕ್ಸ್ ಬಗ್ಗೆಯೂ ಚರ್ಚಿಸಬಹುದು.(ಐಎಎನ್ಎಸ್)
ಇದನ್ನೂ ಓದಿ: ಕಾರ್ಯಾಚರಣೆ ಬಂದ್ ಮಾಡಿದ ಬೆಂಗಳೂರು ಮೂಲದ ಸ್ವದೇಶಿ ಆ್ಯಪ್ 'ಕೂ'