Best Smartwatch Under 1000: ಇಂದಿನ ದಿನಗಳಲ್ಲಿ ಸ್ಮಾರ್ಟ್‌ವಾಚ್‌ಗಳ ಕ್ರೇಜ್ ಹೆಚ್ಚಾಗುತ್ತಿದೆ. ಇವುಗಳು ಸಮಯ ನೋಡುವ ಸಾಧನ ಮಾತ್ರವಲ್ಲ, ಫಿಟ್‌ನೆಸ್ ಟ್ರ್ಯಾಕಿಂಗ್, ಕರೆ ನೋಟಿಫಿಕೇಶನ್ ಮತ್ತು ಇತರ ಹಲವು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತಿವೆ. ಕಡಿಮೆ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್‌ವಾಚ್ ಖರೀದಿಸಲು ನೀವು ಯೋಚಿಸುತ್ತಿದ್ದರೆ ಮಾರುಕಟ್ಟೆಯಲ್ಲಿ 1000 ರೂ.ಗಿಂತ ಕಡಿಮೆ ಇರುವ ಹಲವು ಆಯ್ಕೆಗಳಿವೆ. ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಕೆಲವು ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳ ಲಿಸ್ಟ್ ಇಲ್ಲಿದೆ..
PTron Pulsefit P261 ವೈಶಿಷ್ಟ್ಯಗಳು:
- 1.44 -ಇಂಚಿನ LCD ಡಿಸ್ಪ್ಲೇ
- ಹಾರ್ಟ್ ರೇಟ್ ಮತ್ತು ಬ್ಲಡ್ ಪ್ರೆಶರ್ ಮಾನಿಟರಿಂಗ್'
- ಸ್ಟೆಪ್ ಕೌಂಟರ್ ಮತ್ತು ಕ್ಯಾಲೋರಿ ಟ್ರ್ಯಾಕರ್
- ಬೆಲೆ: ಈ ವಾಚ್ 999 ರೂಗಳಲ್ಲಿ ಲಭ್ಯವಿದೆ.
- ಇತರ ವೈಶಿಷ್ಟ್ಯಗಳು: ಸ್ಟೈಲಿಶ್ ಡಿಸೈನ್, ಬೆಸಿಕ್ ಫಿಟ್ನೆಸ್ ಟ್ರ್ಯಾಕಿಂಗ್..
Techberry T90 ವೈಶಿಷ್ಟ್ಯಗಳು:
- ಬ್ಲೂಟೂತ್ ಕನೆಕ್ಟಿವಿಟಿ ಜೊತೆ ಕಾಲ್ ಮತ್ತು ಮೆಸೇಜ್ ನೋಟಿಫಿಕೇಶನ್
- ಮ್ಯೂಸಿಕ್ ಕಂಟ್ರೋಲ್ ಮತ್ತು ರಿಮೋಟ್ ಕ್ಯಾಮೆರಾ ಆಪ್ಷನ್
- ಟಚ್‌ಸ್ಕ್ರೀನ್ ಇಂಟರ್ಫೇಸ್
- ಬೆಲೆ: ಸುಮಾರು 900 ರೂ.
- ಇತರ ವೈಶಿಷ್ಟ್ಯಗಳು: ಬಹು ವೈಶಿಷ್ಟ್ಯಗಳ ಜೊತೆ ಸಿಂಪಲ್ ಮತ್ತು ಎಫಿಶಿಯಂಟ್
Zebronics ZEB-FIT101 ವೈಶಿಷ್ಟ್ಯಗಳು:
- ವಾಟರ್ ರೆಸಿಸ್ಟೆಂಟ್ ಡಿಸೈನ್
- ಸ್ಟೆಪ್ ಕೌಂಟರ್ ಮತ್ತು ಸ್ಲೀಪ್ ಮಾನಿಟರ್‌ನಂತಹ ಫಿಟ್‌ನೆಸ್ ಟ್ರ್ಯಾಕಿಂಗ್ ಫೀಚರ್ಗಳು
- ಸ್ಮಾರ್ಟ್ ನೋಟಿಫಿಕೇಶನ್ ಅಲರ್ಟ್
- ಬೆಲೆ: 999 ರೂ.
- ಇತರ ವೈಶಿಷ್ಟ್ಯಗಳು: ಒಳ್ಳೆ ಗುಣಮಟ್ಟ ಹೊಂದಿದೆ. ಬ್ಯಾಟರಿ ಬಾಳಿಕೆ ಉತ್ತಮವಾಗಿದೆ.
Callmate Smart Band ಫೀಚರ್ಸ್:
- ಹಾರ್ಟ್ ರೇಟ್ ಮತ್ತು ಬ್ಲಡ್ ಆಕ್ಸಿಜನ್ ಲೇವೆಲ್ ಮಾನಿಟರ್
- ಆ್ಯಕ್ಟಿವಿಟಿ ಟ್ರ್ಯಾಕಿಂಗ್ ಮತ್ತು ಫಿಟ್ನೆಸ್ ಅಲರ್ಟ್ಗಳು
- ಸ್ಟೈಲೀಶ್ ಬ್ಯಾಂಡ್ ಜೊತೆ ಹಗುರವಾದ ವಿನ್ಯಾಸ.
- ಬೆಲೆ: ಸುಮಾರು 950 ರೂ.
- ಇತರ ವೈಶಿಷ್ಟ್ಯಗಳು: ಫಿಟ್ನೆಸ್ ಉತ್ಸಾಹಿಗಳಿಗೆ ಉತ್ತಮ ಆಯ್ಕೆಯಾಗಿದೆ.
ಗಮನಿಸಬೇಕಾದ ಅಂಶಗಳು: ರೂ 1000 ದೊಳಗೆ ಲಭ್ಯವಿರುವ ಸ್ಮಾರ್ಟ್ ವಾಚ್‌ಗಳು ಬೇಸಿಕ್ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಇವು ಫಿಟ್‌ನೆಸ್ ಟ್ರ್ಯಾಕಿಂಗ್, ನೋಟಿಫಿಕೇಶನ್ ಅಲರ್ಟ್ ಮತ್ತು ಬ್ಯಾಟರಿ ಬ್ಯಾಕಪ್‌ನಂತಹ ಸೌಲಭ್ಯಗಳನ್ನು ಒದಗಿಸುತ್ತವೆ. ಇವುಗಳು ಪ್ರೀಮಿಯಂ ಸ್ಮಾರ್ಟ್ ವಾಚ್‌ಗಳಷ್ಟು ಸುಧಾರಿತವಾಗಿಲ್ಲದಿದ್ದರೂ, ಅವುಗಳನ್ನು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾಗಿದೆ. ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅನೇಕ ಬಾರಿ ಆಲೋಚಿಸುವುದು ಒಳ್ಳೆಯದು.
ಓದಿ: ಮಕ್ಕಳ ಮೇಲೆ ನಿಗಾವಹಿಸಲು ಮತ್ತೊಂದು ಹೊಸ ಫೀಚರ್ ಪರಿಚಯಿಸಿದ ಇನ್ಸ್ಟಾ!