ETV Bharat / technology

ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್​! - Google Launched Gemini Live - GOOGLE LAUNCHED GEMINI LIVE

Google Launched Gemini Live: ಆಂಡ್ರಾಯ್ಡ್ ಬಳಕೆದಾರರಿಗೆ ಶುಭ ಸುದ್ದಿ. ಅವರಿಗಾಗಿ ಗೂಗಲ್ ಹೊಸ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಗೂಗಲ್ ಜೆಮಿನಿ ಲೈವ್ ವೈಶಿಷ್ಟ್ಯ ಬಗ್ಗೆ ಇಲ್ಲಿದೆ ಫುಲ್​ ಡೀಟೇಲ್ಸ್​.

GOOGLE GEMINI LIVE FEATURE  GEMINI LIVE APP  GEMINI LIVE FEATURE  GOOGLE GEMINI LIVE
ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್​! (Getty Images)
author img

By ETV Bharat Tech Team

Published : Oct 4, 2024, 10:56 AM IST

Google Launched Gemini Live: ಆಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ ಹೊಸ ವೈಶಿಷ್ಟ್ಯ ಬಿಡುಗಡೆ ಮಾಡಿದೆ. AI ಚಾಟ್‌ಬಾಟ್ ಆಧಾರಿತ ದ್ವಿಮುಖ ಧ್ವನಿ ಚಾಟ್ ವೈಶಿಷ್ಟ್ಯ 'ಗೂಗಲ್ ಜೆಮಿನಿ ಲೈವ್' ಅನ್ನು ಪ್ರಾರಂಭಿಸಿದೆ. ಈ ವೈಶಿಷ್ಟ್ಯ ಬಳಸಿಕೊಂಡು ನೀವು ಟೈಪ್ ಮಾಡದೆಯೇ ಏನು ಬೇಕಾದರೂ ಮಾತನಾಡಬಹುದು. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಈ ವೈಶಿಷ್ಟ್ಯವೇನು? ಇದು ಹೇಗೆ ಉಪಯುಕ್ತವಾಗಿದೆ? ಅದನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬ ಇತ್ಯಾದಿ ವಿವರಗಳು ಇಲ್ಲಿವೆ.

ಜೆಮಿನಿ ಲೈವ್ ಫೀಚರ್ ಎಂದರೇನು?:

  • ಜೆಮಿನಿ ಲೈವ್ ಎಂಬುದು Google AI ಚಾಟ್‌ಬಾಟ್ ಆಧಾರಿತ ದ್ವಿಮುಖ ಧ್ವನಿ ಚಾಟ್ ವೈಶಿಷ್ಟ್ಯವಾಗಿದೆ.
  • ಈ ಹೊಸ ವೈಶಿಷ್ಟ್ಯವು ಈಗ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ.
  • ಈ ವೈಶಿಷ್ಟ್ಯವನ್ನು Google One AI ಪ್ರೀಮಿಯಂ ಪ್ಲಾನ್ ಮೂಲಕ ಜೆಮಿನಿ ತನ್ನ ಬಳಕೆದಾರರಿಗೆ ಆರಂಭದಲ್ಲಿ ಜಾರಿಗೆ ತಂದಿತ್ತು
  • ಆದರೆ ಈಗ ಕಂಪನಿಯು ಎಲ್ಲಾ ಬಳಕೆದಾರರಿಗೆ ಈ ಸೌಲಭ್ಯ ಲಭ್ಯವಾಗುವಂತೆ ಮಾಡಿದೆ.
  • ಈ ವೈಶಿಷ್ಟ್ಯವು ಮೂಲ ಆವೃತ್ತಿಯಲ್ಲಿ ಮಾತ್ರ ಬಳಕೆದಾರರಿಗೆ ಲಭ್ಯವಿದೆ.

ಐಫೋನ್ ಬಳಕೆದಾರರಿಗೆ ಜೆಮಿನಿ ಸೌಲಭ್ಯ ಇಲ್ಲ:

  • ಈ ಹೊಸ ಜೆಮಿನಿ ಲೈವ್ ವೈಶಿಷ್ಟ್ಯವು ಐಫೋನ್ ಬಳಕೆದಾರರಿಗೆ ಇಲ್ಲ.
  • ಐಒಎಸ್‌ನಲ್ಲಿ ಜೆಮಿನಿ ಅಪ್ಲಿಕೇಶನ್ ಇನ್ನೂ ಲಭ್ಯವಿಲ್ಲ ಎಂದು ಐಫೋನ್ ಬಳಕೆದಾರರು ಗಮನಿಸಬೇಕು.
  • ಹಾಗಾಗಿ ಜೆಮಿನಿ ಲೈವ್ ಫೀಚರ್ ಕೂಡ ಐಫೋನ್ ಬಳಕೆದಾರರಿಗೆ ಲಭ್ಯವಿಲ್ಲ.

ಜೆಮಿನಿ ಲೈವ್ ವೈಶಿಷ್ಟ್ಯ ಪ್ರಯೋಜನಗಳು:

  • ಈ ಹೊಸ ವೈಶಿಷ್ಟ್ಯದೊಂದಿಗೆ ನೀವು ಟೈಪ್ ಮಾಡದೆಯೇ ಏನು ಬೇಕಾದರೂ ಮಾತನಾಡಬಹುದು.
  • ಜೆಮಿನಿ ಮೌಖಿಕ ರೂಪದಲ್ಲಿ ನಮಗೆ ಉತ್ತರಿಸುತ್ತದೆ.
  • ಆಲೋಚನೆಗಳನ್ನು ಸಹ ನೀಡುತ್ತದೆ: ಈವೆಂಟ್‌ಗಳ ಯೋಜನೆ, ವ್ಯವಹಾರ ಯೋಜನೆ, ನಿಮ್ಮ ಪ್ರೀತಿಪಾತ್ರರಿಗೆ ಯಾವ ರೀತಿಯ ಉಡುಗೊರೆಗಳು ಒಳ್ಳೆಯದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಜೆಮಿನಿಯೊಂದಿಗೆ ಚರ್ಚಿಸುವುದರಿಂದ ನಿಮಗೆ ಒಳ್ಳೆಯ ವಿಚಾರಗಳನ್ನು ನೀಡುತ್ತದೆ.
  • ಎಕ್ಸ್‌ಪ್ಲೋರ್: ನಿಮಗೆ ಆಸಕ್ತಿಯಿರುವ ವಿಷಯಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ನೀವು ಜೆಮಿನಿಯನ್ನು ಕೇಳಬಹುದು.
  • ಪೂರ್ವಾಭ್ಯಾಸ ಮಾಡಬಹುದು: ಹೆಚ್ಚು ನೈಸರ್ಗಿಕ, ಸಂವಾದಾತ್ಮಕ ರೀತಿಯಲ್ಲಿ ಪ್ರಮುಖ ಸಂದರ್ಭಗಳಲ್ಲಿ ಪೂರ್ವಾಭ್ಯಾಸ ಮಾಡಬಹುದಾಗಿದೆ
  • ಈ ಜೆಮಿನಿ ಲೈವ್ ವೈಶಿಷ್ಟ್ಯವನ್ನು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಆಂಡ್ರಾಯ್ಡ್ ಮೊಬೈಲ್ ಸಾಧನಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿ ಇದು ಇನ್ನೂ ನಿಮಗೆ ಲಭ್ಯವಾಗದೇ ಇರಬಹುದು.

ಜೆಮಿನಿ ಲೈವ್ ವೈಶಿಷ್ಟ್ಯವನ್ನು ಬಳಕೆ ಮಾಡಿಕೊಳ್ಳುವುದು ಹೇಗೆ?:

  • ಜೆಮಿನಿ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಮೊಬೈಲ್ ಸಾಧನಗಳಲ್ಲಿ ಡೌನ್‌ಲೋಡ್ ಮಾಡಬೇಕು ಮತ್ತು ಇನ್​ಸ್ಟಾಲ್​ ಮಾಡಬೇಕು.
  • ನಂತರ ಜೆಮಿನಿ ಅಪ್ಲಿಕೇಶನ್ ಓಪನ್​ ಮಾಡಿ. ನೀವು ಸ್ಕ್ರೀನ್​ ಕೆಳಗಿನ ಬಲಭಾಗದಲ್ಲಿ ವೇವ್​ಫಾರ್ಮ್​ ರೂಪದ ಐಕಾನ್ ನೋಡುತ್ತೀರಿ.
  • ಅದರ ಮೇಲೆ ಕ್ಲಿಕ್ ಮಾಡುವುದರಿಂದ ಮೊದಲ ಬಾರಿಗೆ ಬಳಕೆದಾರರಿಗೆ ನಿಯಮಗಳು ಮತ್ತು ಷರತ್ತುಗಳ ಮೆನು ಬರುತ್ತದೆ. ಅದನ್ನು ಸ್ವೀಕರಿಸಿ.
  • ಈಗ ನೀವು ಜೆಮಿನಿ ಲೈವ್ ಇಂಟರ್ಫೇಸ್ ನೋಡಬಹುದು.
  • ಮತ್ತು ನೀವು ಈ ವೈಶಿಷ್ಟ್ಯದೊಂದಿಗೆ ನಿಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು.

ಓದಿ: ಡಿಜಿಟಲ್​ ಪೇಮೆಂಟ್ಸ್​ನಲ್ಲಿ ಕಾಂತ್ರಿಕಾರಿ ಬೆಳವಣಿಗೆ: ಈ ಬಾರಿ ಎಷ್ಟು ಲಕ್ಷ ಕೋಟಿ ವಹಿವಾಟಾಗಿದೆ ಗೊತ್ತಾ!? - Huge increase in UPA payments

ETV Bharat Logo

Copyright © 2024 Ushodaya Enterprises Pvt. Ltd., All Rights Reserved.