ETV Bharat / technology

ಸ್ಪ್ಯಾಮ್​ ಇಮೇಲ್​ಗಳ ಉಪಟಳಕ್ಕೆ ಕಡಿವಾಣ ಹಾಕಲು ಗೂಗಲ್ ಸಿದ್ಧತೆ - SHIELD EMAIL FEATURE

Gmail New Shield Email Feature: ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಕಾರ್ಯ ನಿರ್ವಹಿಸುತ್ತಿದೆ. ಇದು​ ಬಳಕೆದಾರರಿಗೆ ಬರುವ ಸ್ಪ್ಯಾಮ್ ಮೇಲ್‌ಗಳನ್ನು ತಡೆಯಲು ಉಪಯುಕ್ತ.

GMAIL NEW SHIELD EMAIL FEATURE  GMAIL NEW FEATURES 2024  GMAIL SECURITY  GMAIL NEW SECURITY FEATURE
ಸ್ಪ್ಯಾಮ್​ ಇಮೇಲ್​ಗಳ ಕಾಟವೇ? (ETV Bharat)
author img

By ETV Bharat Tech Team

Published : Nov 20, 2024, 8:27 AM IST

Gmail New Shield Email Feature: ನಮ್ಮಲ್ಲಿ ಹೆಚ್ಚಿನವರು ವೈಯಕ್ತಿಕ ಅಗತ್ಯಗಳಿಗಾಗಿ ಒಂದು ಇಮೇಲ್ ಐಡಿ ಮತ್ತು ಕಚೇರಿ ಅಗತ್ಯಗಳಿಗಾಗಿ ಮತ್ತೊಂದು ಇಮೇಲ್ ಐಡಿ ಬಳಸುವುದು ಸಹಜ. ನಾವು ಎಲ್ಲೆಂದರಲ್ಲೇ ಲಾಗಿನ್ ಆಗಬೇಕಾದಾಗ ಮೇಲ್ ಐಡಿ ಮತ್ತು ಪಾಸ್​ವರ್ಡ್​ ನಮೂದಿಸುವುದು ಸಹಜ. ಆಗ ನಮ್ಮ ಮೇಲ್​ ಐಡಿ ಸ್ಪ್ಯಾಮ್​ಗೆ ಒಳಪಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ನಾವು ಅನೇಕ ಬಾರಿ ನಮ್ಮ ಇನ್‌ಬಾಕ್ಸ್‌ನಲ್ಲಿ ಅಗತ್ಯ ಮೇಲ್‌ಗಳಿಗಿಂತ ಹೆಚ್ಚಾಗಿ ಈ ಅನಗತ್ಯ ಮೇಲ್‌ಗಳೇ ತುಂಬಿರುತ್ತವೆ. ಇದರೊಂದಿಗೆ ಸಮಸ್ಯೆಯನ್ನು ಪರಿಹರಿಸಲು ಗೂಗಲ್ 'ಶೀಲ್ಡ್ ಇಮೇಲ್' ಎಂಬ ಹೊಸ ವೈಶಿಷ್ಟ್ಯವನ್ನು ತರಲು ಸಿದ್ಧತೆ ನಡೆಸಿದೆ.

ಈ ಫೀಚರ್​ ಸಹಾಯದಿಂದ ನೀವು ತಾತ್ಕಾಲಿಕ ಮೇಲ್ ಐಡಿಯನ್ನು ರಚಿಸಬಹುದು. ಇದರರ್ಥ ನೀವು ಎಲ್ಲಿಯಾದರೂ ಲಾಗಿನ್ ಮಾಡಲು ಬಯಸಿದರೆ, ಈ ಸುರಕ್ಷಿತ ಮೇಲ್ ಐಡಿಯನ್ನು ಬಳಸಬಹುದು. ಹೀಗೆ ಕ್ರಿಯೇಟ್ ಮಾಡಿದ ಐಡಿ ಕೇವಲ 10 ನಿಮಿಷ ಮಾತ್ರ ಕೆಲಸ ಮಾಡುತ್ತದೆ ಎಂದು ತಿಳಿಸಲಾಗಿದೆ. ಅದರ ನಂತರ ನೀವು ಅವಶ್ಯಕತೆಗೆ ಅನುಗುಣವಾಗಿ ಇನ್ನೊಂದು ಮೇಲ್ ಐಡಿಯನ್ನು ರಚಿಸಬಹುದು. ಆದರೆ ಈ ಫೀಚರ್ ಬಗ್ಗೆ ಗೂಗಲ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯದಲ್ಲೇ ಸ್ಪಷ್ಟನೆ ಸಿಗಲಿದೆ.

ಈಗಾಗಲೇ ಈ ಫೀಚರ್ ಲಭ್ಯಗೊಳಿಸಿರುವ ಆ್ಯಪಲ್: ಗೂಗಲ್​ಗೂ ಮುನ್ನವೇ ಆ್ಯಪಲ್ ತನ್ನ ಬಳಕೆದಾರರಿಗೆ ಈ ರೀತಿಯ ಫೀಚರ್ ಲಭ್ಯವಾಗುವಂತೆ ಮಾಡಿದೆ. ಆ್ಯಪಲ್ ಇದನ್ನು 'ಹೈಡ್ ಮೈ ಇಮೇಲ್' ಎಂಬ ಹೆಸರಿನಲ್ಲಿ ಹೊರ ತಂದಿದೆ. ಆ್ಯಪಲ್ ಬಳಕೆದಾರರು ಈ ವೈಶಿಷ್ಟ್ಯದ ಸಹಾಯದಿಂದ ತಾತ್ಕಾಲಿಕ ಮೇಲ್ ಐಡಿಯನ್ನು ರಚಿಸಬಹುದು. ಅಪ್ಲಿಕೇಶನ್‌ಗೆ ಲಾಗಿನ್ ಆಗಬೇಕಾದರೆ ಈ ತಾತ್ಕಾಲಿಕ ಮೇಲ್ ಐಡಿ ಮೂಲಕ ಎಂಟ್ರಿ ಕೊಡ್ತಾರೆ. ಈ ರೀತಿಯಾಗಿ, ನೀವು ಸ್ಪ್ಯಾಮ್ ಮೇಲ್‌ಗಳ ತೊಂದರೆಯನ್ನು ತಪ್ಪಿಸಬಹುದು.

ಇದನ್ನೂ ಓದಿ: ಎಐ ಬಗ್ಗೆ ನೋಡುತ್ತಿರುವುದೆಲ್ಲವೂ ಸತ್ಯವಲ್ಲ; ಎಐ ಫೌಂಡೇಷನ್‌ ಮಾಡೆಲ್‌ ಸೃಷ್ಟಿಸಲು ಭಾರತ ಸಶಕ್ತ: ಮನೀಶ್ ಗುಪ್ತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.