ETV Bharat / technology

ಹೆಚ್ಚುತ್ತಿರುವ ಡಿಜಿಟಲ್​ ವಂಚನೆ; ಸೈಬರ್​ ಹಾವಳಿಗಳ ಕುರಿತು ಬೇಕಿದೆ ಎಚ್ಚರಿಕೆ - Cyber Menance are increased

ಡಿಜಿಟಲ್​ ಯುಗದಲ್ಲಿ ಅಪರಾಧದ ಸ್ವರೂಪ ಬದಲಾಗಿದ್ದು, ಜಗತ್ತಿನ ಯಾವುದೋ ಮೂಲೆಯಿಂದ ನಮ್ಮ ಬ್ಯಾಂಕ್​ ಖಾತೆಗೆ ಕನ್ನ ಹಾಕಬಹುದು. ಈ ಸೈಬರ್​ ಅಪರಾಧಗಳ ಪ್ರಕರಣ ಕುರಿತು ಎಚ್ಚರಿಕೆಯಿಂದ ಇರುವುದು ಅವಶ್ಯವಾಗಿದೆ.

digital-deception-a-cyber-menace
digital-deception-a-cyber-menace
author img

By ETV Bharat Karnataka Team

Published : Mar 16, 2024, 1:17 PM IST

ಹೈದರಾಬಾದ್​: ಸೈಬರ್​ ಅಪರಾಧವು ಜಾಗತಿಕವಾಗಿ ಹೆಚ್ಚುತ್ತಿದ್ದು, ಭಾರತದಲ್ಲೂ ಗಮನಾರ್ಹ ಸಂಖ್ಯೆಯಲ್ಲಿ ಪ್ರಕರಣಗಳು ಕಂಡು ಬಂದಿವೆ. ಸೈಬರ್ ​ಅಪರಾಧಿಗಳು ತಂತ್ರಜ್ಞಾನವನ್ನು ಬಳಕೆ ಮಾಡಿ ಸರ್ಕಾರದ ಸಂಸ್ಥೆ, ಕಾರ್ಪೊರೇಷನ್​ ಮತ್ತು ವ್ಯಕ್ತಿಗಳ ದತ್ತಾಂಶವನ್ನು ಕದಿಯುವ ಮೂಲಕ ಗಂಭೀರ ಪ್ರಮಾಣದ ಹಾನಿ ಮಾಡುತ್ತಿದ್ದಾರೆ.

2021ರಲ್ಲಿ ಭಾರತ 14.02 ಲಕ್ಷ ಸೈಬರ್​ ದಾಳಿ ಮತ್ತು 2022ರಲ್ಲಿ 13.9 ಲಕ್ಷ ಸೈಬರ್ ದಾಳಿ ಎದುರಿಸಿದೆ. ಜಾಗತಿಕ ಮಟ್ಟದಲ್ಲಿ 2021ಕ್ಕೆ ಹೋಲಿಕೆ ಮಾಡಿದಾಗ 2022ರಲ್ಲಿ ಸೈಬರ್​ ದಾಳಿಯು ಶೇ 38ರಷ್ಟು ಹೆಚ್ಚಾಗಿದೆ. ಸೈಬರ್ ಭದ್ರತಾ ಸವಾಲುಗಳನ್ನು ಪರಿಹರಿಸುವುದು ಕ್ಲಿಷ್ಟಕರ ಮತ್ತು ಹೆಚ್ಚಿನ ಸಮಯವನ್ನು ಹಿಡಿಯುವುದರ ಜೊತೆಗೆ ಗಣನೀಯ ನಷ್ಟವನ್ನು ಉಂಟುಮಾಡುತ್ತದೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಮತ್ತು ವಾಣಿಜ್ಯದಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಪ್ರಯೋಜನಗಳ ಹೊರತಾಗಿಯೂ, ಸೈಬರ್ ಅಪರಾಧಿಗಳಿಂದ ಅದಕ್ಕೆ ಬೆದರಿಕೆಯನ್ನು ಒಡ್ಡುತ್ತಿರುವುದು ಕಂಡು ಬರುತ್ತದೆ. ಈ ಡಿಜಿಟಲ್ ಮೂಲಸೌಕರ್ಯ ಮತ್ತು ವೈಯಕ್ತಿಕ ಡೇಟಾವನ್ನು ರಕ್ಷಿಸಲು ಬಹುಮುಖದ ಕಾರ್ಯತಂತ್ರಗಳ ಅಗತ್ಯವಿದೆ.

ಹಣವೇ ಪ್ರಚೋದನೆಗೆ ಕಾರಣ: ಸೈಬರ್ ಸುರಕ್ಷತೆಯ ಬಗ್ಗೆ ಸಿಇಆರ್​ಟಿ-ಇನ್​ ಕಾರ್ಯನಿರ್ವಹಿಸುತ್ತಿದೆ. ಸೈಬರ್​ಸುರಕ್ಷತೆ ಪ್ರಕರಣಗಳ ನಿರ್ವಹಣೆ ಮಾಡುವ ನೋಡಲ್​ ಏಜೆನ್ಸಿ ಇದಾಗಿದೆ. ಸೈಬರ್​ ಭದ್ರತೆಯ ನಿರ್ವಹಣೆಗೆ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಸಮರ್ಪಣೆಯ ತಂಡ ಇದರಲ್ಲಿದೆ.

2020ರಲ್ಲೇ ಸಿಇಆರ್​ಟಿ-ಇನ್​ ಸೈಬರ್​ ಸೂಚನೆ ಸಂಬಂಧ 11.58 ಲಕ್ಷ ದೂರನ್ನು ಪರಿಹರಿಸಿದೆ. ಸೈಬರ್​​ ಅಪರಾಧಿಗಳು ತಂತ್ರಗಳು ಡೇಟಾ ಕಳ್ಳತನ, ವಿವಿಧ ಸೇವೆಗಳಾದ್ಯಂತ ಸಾಫ್ಟ್‌ವೇರ್ ಅನ್ನು ಗುರಿಯಾಗಿಸುವುದು. ದುರ್ಬಲಗೊಳಿಸುವುದನ್ನು ಮೀರಿ ಹೆಚ್ಚಿಸಿದೆ. ಈ ಸವಾಲನ್ನು ತುರ್ತು ಪ್ರಕ್ರಿಯೆ ಪಡೆ ಸೂಕ್ತವಾಗಿ ನಿರ್ವಹಿಸುತ್ತದೆ. ಗಮನಾರ್ಹ ಅಂಶ ಎಂದರೆ, 2022ರಲ್ಲಿ ದೆಹಲಿಯ ಏಮ್ಸ್​​ಗಳು ರಾನ್ಸಮ್​ವರ್ಮ್​​ ದಾಳಿ ನಡೆಸಿ, ನಾಲ್ಕು ಕೋಟಿ ಸೂಕ್ಷ್ಮ ಮಾಹಿತಿ ಮೇಲೆ ದಾಳಿ ಮಾಡಿದೆ. ಈ ದತ್ತಾಂಶದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಮಾಹಿತಿ ಕೂಡ ಇತ್ತು.

ಏಮ್ಸ್​​ನ ಐಟಿ ಮೂಲ ಸೌಕರ್ಯವನ್ನು ದತ್ತಾಂಶ ಹಾನಿ ಮಾಡಿದ ರಾನ್ಸಮ್​ವರ್ಮ್​​ ಸರಿಪಡಿಸಲು ಭಾರೀ ಬೇಡಿಕೆಯನ್ನು ಇಡಲಾಯಿತು. 2023ರ ಜೂನ್​​ ದಾಳಿ ಬಳಿಕ ಏಮ್ಸ್​​​ ಕಂಪ್ಯೂಟರ್​​ಗಳಿಗೆ ಮಾಲ್​ವೇರ್​ ಅನ್ನು ನಿಯೋಜಿಸುವುದು ಕಂಡು ಬಂದಿದೆ. ಸಂಸ್ಥೆ ರಕ್ಷಣಾ ಕಾರ್ಯವಿಧಾನವೂ ಇದೀಗ ಸೈಬರ್​ ದಾಳಿಯ ಪ್ರಯತ್ನವನ್ನು ವಿಫಲಗೊಳಿಸಿದೆ.

ಉದ್ಯಮದಿಂದ ವ್ಯಕ್ತಿಯ ಕಂಪ್ಯೂಟರ್​ ವ್ಯವಸ್ಥೆ ಮೇಲೆ ದಾಳಿ ಮಾಡಲು ಹ್ಯಾಕರ್​​ ಹೊಸ ಹೊಸ ದಾರಿ ಹುಡುಕಿಕೊಳ್ಳುತ್ತಾರೆ. ಇಮೇಲ್​ ತಂತ್ರಗಾರಿಕೆ ರೂಪಿಸಿದೆ. ದುರುದ್ದೇಶಪೂರಿತ ಮಾಲ್‌ವೇರ್ ಅನ್ನು ಹೊಂದಿರುವ ಲಿಂಕ್‌ಗಳೊಂದಿಗೆ ಸ್ವೀಕರಿಸುವವರನ್ನು ಆಕರ್ಷಿಸುತ್ತವೆ.

ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಎಲೆಕ್ಟ್ರಾನಿಕ್ ಸಾಧನಗಳು, ಕಂಪ್ಯೂಟರ್ ವ್ಯವಸ್ಥೆಗಳು ಮತ್ತು ಗೌಪ್ಯವಾದ ವೈಯಕ್ತಿಕ ಡೇಟಾಗೆ ಹ್ಯಾಕರ್‌ಗಳು ವಶಕ್ಕೆ ಪಡೆಯುತ್ತಾರೆ. ಇಂತಹ ವಂಚನೆಗೆ ದೇಶಾದ್ಯಂತ ಸಾವಿರಾರು ಜನರು ಬಲಿಯಾಗಿದ್ದಾರೆ. ಈ ಅಪಾಯವನ್ನು ಕಡಿಮೆ ಮಾಡಲು ಇಮೇಲ್​​ಗಳ ದೃಢೀಕರಣವನ್ನು ಎಚ್ಚರಿಕೆಯಿಂದ ನಿರ್ಣಯಿಸುವುದು ಅಗತ್ಯ.

ಸೈಬರ್​ ಅಪರಾಧಿಗಳು ರಾನ್ಸಮ್​ವರ್ಮ್​​ ವಿನಾಶಕಾರಿ ರೀತಿಯ ಸಾಫ್ಟ್‌ವೇರ್ ಬಳಕೆ ಮಾಡಿ ವ್ಯಕ್ತಿಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ನಡೆಸಿ, ಡಿಜಿಟಲ್ ಸುಲಿಗೆ ನಡೆಸುತ್ತದೆ. ಆರಂಭದಲ್ಲಿ ಇದು ಕಂಪ್ಯೂಟರ್​ನಲ್ಲಿರುವ ಅಗತ್ಯ ದತ್ತಾಂಶವನ್ನು ತೆಗೆದುಕೊಳ್ಳುತ್ತದೆ. ಬಳಿಕ ಆರ್ಥಿಕ ಮತ್ತು ವೈಯಕ್ತಿಕ ಮಾಹಿತಿ ಪಡೆಯುತ್ತದೆ. ಇವುಗಳನ್ನು ಪರಿಹರಿಸಲು ಹಣದ ಬೇಡಿಕೆ ಬರುತ್ತದೆ. ಈ ಹಿನ್ನೆಲೆ ನಿಮ್ಮ ಡೇಟಾವನ್ನು ರಕ್ಷಿಸುವುದು ಪ್ರಮುಖವಾಗಿದೆ. ಇದಕ್ಕಾಗಿ ಆಕ್ರಮಣಕಾರಿ ಮಾಲ್​ವೇರ್​​ ಬಳಕೆ, ಕಂಪ್ಯೂಟರ್‌ನ ಮಾಹಿತಿ ವ್ಯವಸ್ಥೆಯನ್ನು ಕಮಾಂಡರಿಂಗ್ ಮತ್ತು ಕುಶಲತೆಯಿಂದ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವುದು ಅವಶ್ಯವಾಗಿದೆ.

ಎಚ್ಚರಿಕೆ ಅಗತ್ಯತೆ ಅವಶ್ಯ: ಇಂದಿನ ಡಿಜಿಟಲ್​ ಕಾಲಮಾನದಲ್ಲಿ ಇಂಟರ್​ನೆಟ್​​ ಅನಿವಾರ್ಯ ಮತ್ತು ಸರ್ವವ್ಯಾಪಿಯಾಗಿದೆ. ವೆಬ್‌ಸೈಟ್‌ಗಳು ವೈಯಕ್ತಿಕ ಮತ್ತು ವೃತ್ತಿಪರ ತೊಡಗಿಸಿಕೊಳ್ಳುವಿಕೆಗಳಿಗೆ ಪ್ರಮುಖವಾಗಿವೆ. ಇದರ ಜೊತೆಗೆ ಸೈಬರ್​ ಕ್ರಿಮಿನಲ್​ಗಳ ದುರ್ಬಳಕೆ ಮಾಡುವುದು ಹೆಚ್ಚಿದೆ. ಇಂತಹ ಅಪಾಯದಿಂದ ರಕ್ಷಣೆ ಮಾಡಲು ವ್ಯಕ್ತಿಗಳು ದೃಢವಾದ ಪಾಸ್‌ವರ್ಡ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮತ್ತು ಇಮೇಲ್‌ಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿದ್ದರು.

ಇದಕ್ಕಿಂತ ಹೆಚ್ಚಾಗಿ, ಪ್ರೀಮಿಯಂ ಆಂಟಿವೈರಸ್ ಸಾಫ್ಟ್‌ವೇರ್‌ನೊಂದಿಗೆ ಕಂಪ್ಯೂಟರ್‌ಗಳು ಮತ್ತು ಸಾಧನಗಳನ್ನು ಬಲಪಡಿಸುವುದು ಅಗತ್ಯವಾಗಿದೆ. ಸೈಬರ್​ ದಾಳಿಗಳ ಕುರಿತು ಜಾಗೃತಿ ಮೂಡಿಸುವುದು. ಅದನ್ನು ತಡೆಗಟ್ಟುವ ಕ್ರಮ ಅನುಸರಿಸುವುದು ಅವಶ್ಯವಾಗಿದೆ. ಈ ಸಂಬಂಧ ಶಾಲೆ, ಆಸ್ಪತ್ರೆ, ಮತ್ತು ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಜಾಗೃತಿ ಅಭಿಯಾನ ಮಾಡಬೇಕಿರುವುದು ಪ್ರಮುಖವಾಗಿದೆ. ಸೈಬರ್​ ದಾಳಿಗೆ ಎದುರಾಗಿ ಜಾಗತಿಕ ಮಟ್ಟದಲ್ಲಿ ನುರಿತ, ಅಭಿವೃದ್ಧಿ ತಂತ್ರಜ್ಞಾನದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಬೋಗಸ್​​ ವೆಬ್​ಸೈಟ್​ ಹಾವಳಿ; ಸೈಬರ್ ದಾಳಿಗೆ ಹ್ಯಾಕರ್‌ಗಳು ಅನೇಕ ನಕಲಿ ವೆಬ್‌ಸೈಟ್‌ಗಳು ಮತ್ತು ರಾನ್ಸಮ್​ವೇರ್​​ ಸೇರಿದಂತೆ ಮಾಲ್‌ವೇರ್‌ಗಳನ್ನು ಹೆಚ್ಚಾಗಿ ನಿಯೋಜಿಸುತ್ತಾರೆ. ಕಾನೂನುಬದ್ಧ ಬ್ಯಾಂಕ್‌ಗಳು ಮತ್ತು ನಿಗಮಗಳನ್ನು ಅನುಕರಿಸುವ ನಕಲಿ ಸೈಟ್‌ಗಳನ್ನು ಕಾಣಬಹುದಾಗಿದೆ. ಇವುಗಳ ಮೂಲಕ ಬಳಕೆದಾರರನ್ನು ಸೆಳೆದು ಅವರ ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯ ಕ್ರೆಡಿಷಿಯನ್​ ಅನ್ನು ನಮೂದಿಸುವಂತೆ ಹೇಳಿ ದಾಳಿ ಮಾಡುತ್ತಾರೆ.

ಇದನ್ನೂ ಓದಿ: 'ಅಶ್ಲೀಲ ಕಂಟೆಂಟ್'​​: 18 ಒಟಿಟಿ ಫ್ಲಾಟ್​ಫಾರ್ಮ್​, 19 ವೆಬ್​ಸೈಟ್​ ಬ್ಯಾನ್​ ಮಾಡಿದ ಕೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.