ನವದೆಹಲಿ: ಮುಂದಿನ ಮೂರು ವರ್ಷದ ಅವಧಿಯಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ ವಾಹನ ಘಟಕ ಸ್ಥಾಪನೆಗೆ 12 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಸಜ್ಜಾಗಿರುವುದಾಗಿ ಆಟೋ ನಿರ್ಮಾಣ ಸಂಸ್ಥೆ ಮಹೀಂದ್ರಾ ಅಂಡ್ ಮಹೀಂದ್ರಾ ಘೋಷಿಸಿದೆ.
ಮಹೀಂದ್ರಾ ಎಲೆಕ್ಟ್ರಿಕ್ ಆಟೋಮೊಬೈಲ್ ಲಿಮಿಟೆಡ್ (ಎಂಇಎಎಲ್) ಮುಂದಿನ ವರ್ಷದ ತನ್ನ ಇವಿ ಪ್ರಯಾಣಕ್ಕೆ ₹ 12 ಸಾವಿರ ಹೂಡಿಕೆ ಮಾಡಲು ಒಪ್ಪಿಗೆ ನೀಡಿದೆ ಎಂದು ಕಂಪನಿ ತಮ್ಮ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ಎಂ ಅಂಡ್ ಮತ್ತು ಅದರ ಆಟೋ ಡಿವಿಷನ್ ತಜ್ಞರು ಇದಕ್ಕೆ ಕಾರ್ಯಾಚರಣೆಗೆ ಬೇಕಾದ ಅಗತ್ಯ ಬಂಡವಾಳದ ಹಣವನ್ನು ಎಲ್ಲಾ ನಮ್ಮ ಹೂಡಿಕೆಗಳ ಅವಶ್ಯಕತೆಯಿಂದ ನೀಡುತ್ತದೆ. ಇದಕ್ಕಾಗಿ ಹೆಚ್ಚುವರಿ ಬಂಡವಾಳವನ್ನು ಸಂಗ್ರಹಿಸುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಎಂ ಅಂಡ್ ಎಂ ಮತ್ತು ಬ್ರಿಟಿಷ್ ಇಂಟರ್ನ್ಯಾಷನಲ್ ಇನ್ವೆಸ್ಟಮೆಂಟ್ (ಬಿಐಐ) 725 ಕೋಟಿ ರೂ.ಗಳ ಯೋಜಿತ ಹೂಡಿಕೆಯ ಅಂತಿಮ ಕಂತಿನ ಅವಧಿಯನ್ನು ವಿಸ್ತರಿಸಲು ಒಪ್ಪಿಗೆ ನೀಡಿದೆ.
ಬಿಐಐ ಇಲ್ಲಿಯವರೆಗೆ ರೂ. 1,200 ಕೋಟಿ ಹೂಡಿಕೆ ಮಾಡಿದ್ದರೆ ಸಿಂಗಾಪುರ ಮೂಲದ ಹೂಡಿಕೆ ಸಂಸ್ಥೆ ಟೆಮಾಸೆಕ್ ಮೀಲ್‌ನಲ್ಲಿ ರೂ. 300 ಕೋಟಿ ಹೂಡಿಕೆ ಮಾಡಿದೆ.
ಟೆಮಾಸೆಕ್ 900 ಕೋಟಿ ರೂ.ಗಳನ್ನು ಒಪ್ಪಿದ ಸಮಯದ ಪ್ರಕಾರ ಹೂಡಿಕೆ ಮಾಡಲಿದೆ ಎಂದು ಎಂ ಅಂಡ್ ಎಂ ತಮ್ಮ ಸ್ಟಾಕ್ ಫೈಲಿಂಗ್ನಲ್ಲಿ ತಿಳಿಸಿದೆ.
ಮಹೀಂದ್ರಾ ಎಲೆಕ್ಟ್ರಿಕ್ ಆಟೋಮೊಬೈಲ್ ಲಿಮಿಟೆಡ್ 2022ರ ಅಕ್ಟೋಬರ್ 25ರಂದು ಸ್ಥಾಪಿತವಾಗಿದೆ. ಎಂಇಎಎಲ್ನ ಒಟ್ಟಾರೆ ಆದಾಯ 2024ರ ಮಾರ್ಚ್ 31, 2024ರಲ್ಲಿ 56.96 ಕೋಟಿ ಆಗಿದೆ. ಇದರ ಒಟ್ಟಾರೆ ಮೌಲ್ಯ 3,207.14 ಕೋಟಿ ರೂಪಾಯಿ.
2024 ಆರ್ಥಿಕ ವರ್ಷದ ಎಂಇಎಂಎಲ್ನ ಕಾರ್ಯಾಚರಣೆಯ ಆದಾಯ ಶೂನ್ಯವಾಗಿದೆ. ಮಹೀಂದ್ರಾ ಅವರ ಎಲೆಕ್ಟ್ರಾನಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹಸಿರು ವಲಯದ ಉತ್ತೇಜನ ಜೊತೆಗೆ ಲಭ್ಯತೆ ಹೆಚ್ಚಳದಲ್ಲಿ ಈ ಯೋಜನೆ ಪ್ರಯೋಜನಕಾರಿಯಾಗಲಿದೆ. (ಐಎಎನ್ಎಸ್)
ಇದನ್ನೂ ಓದಿ: ಉತ್ತಮ ಮೈಲೇಜ್ ನೀಡುವ ಕಾರು ಖರೀದಿಸಬೇಕೆಂದು ಯೋಚಿಸಿದ್ದೀರಾ?: ಹಾಗಾದರೆ ಇಲ್ಲಿವೆ ಟಾಪ್ 10 ಆಯ್ಕೆಗಳು