ಜೆರುಸಲೆಮ್, ಇಸ್ರೇಲ್: ಖಗೋಳಶಾಸ್ತ್ರಜ್ಞರು BH3 ಎಂಬ ಕಂಪು ರಂದ್ರವನ್ನು ಕಂಡುಹಿಡಿದಿದ್ದಾರೆ, ಇದು ಕ್ಷೀರಪಥದ ನಕ್ಷತ್ರಪುಂಜದಲ್ಲಿ ಇದುವರೆಗೆ ತಿಳಿದಿರುವ ಅತ್ಯಂತ ಭಾರವಾದ ನಕ್ಷತ್ರದ ಕಪ್ಪು ಕುಳಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಸೂರ್ಯನ ದ್ರವ್ಯರಾಶಿಯ 33 ಪಟ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ.
ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಗಯಾ ಬಾಹ್ಯಾಕಾಶ ದೂರದರ್ಶಕದಲ್ಲಿ ದಾಖಲಾದ ಇತ್ತೀಚಿನ ಡೇಟಾ ಗುಂಪನ್ನು ನೋಡಿದಾಗ ಅಂತಾರಾಷ್ಟ್ರೀಯ ಸಂಶೋಧನಾ ತಂಡವು ಈ ಕಪ್ಪುಯನ್ನು ಪತ್ತೆ ಹಚ್ಚಿದೆ ಎಂದು ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾಲಯ (ಟಿಎಯು) ಮಂಗಳವಾರ ನೀಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಪ್ಪು ಕುಳಿಯು ಭೂಮಿಯಿಂದ 1,500 ಬೆಳಕಿನ ವರ್ಷಗಳ ದೂರದಲ್ಲಿದೆ ಎಂದು ಟೆಲ್ ಅವಿವ್ ವಿವಿ ಸಂಶೋಧಕರು ಹೇಳಿದ್ದಾರೆ. ಬೈನರಿ ಸಿಸ್ಟಮ್ ಅಧ್ಯಯನದಲ್ಲಿ ಭಾಗವಹಿಸಿದ್ದ ಸಂಶೋಧಕರು ಹೊಸದಾಗಿ ಈ ಕಪ್ಪು ಕುಳಿಯನ್ನು ಕಂಡುಹಿಡಿದ್ದಾರೆ ಎಂದು ಅಂತಾರಾಷ್ಟ್ರೀಯ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ದ್ವಿಮಾನ ವ್ಯವಸ್ಥೆಗಳಲ್ಲಿ ಒಂದಾದ ಈ ಗೋಚರ ನಕ್ಷತ್ರವು ಕಾಣದ ತನ್ನ ಒಡನಾಡಿಯನ್ನು ಸುತ್ತುತ್ತಿರುವುದನ್ನು ಕಾಣಬಹುದು. ಕಾಣದ ಒಡನಾಡಿ ಎಂದರೆ ಅದು ಕಪ್ಪು ಕುಳಿಯಾಗಿದೆ. ಕ್ಷೀರಪಥದಲ್ಲಿ ಸುಮಾರು 50 ಶಂಕಿತ ಅಥವಾ ದೃಢಪಡಿಸಿದ ಕಪ್ಪು ಕುಳಿಗಳನ್ನು ಬೈನರಿಗಳು ಕಂಡು ಹಿಡಿದು ಬಹಿರಂಗಪಡಿಸಿವೆ, ಆದರೆ NASA ಪ್ರಕಾರ, ನಮ್ಮ ನಕ್ಷತ್ರಪುಂಜದಲ್ಲಿ 100 ಮಿಲಿಯನ್ ಕಪ್ಪು ಕುಳಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.
ನಕ್ಷತ್ರವು ತನ್ನ ಪರಮಾಣು ದಹನ ಇಂಧನದಿಂದ ಹೊರಹೋಗಿ ಮಹಾಸ್ಫೋಟಗೊಂಡು ಬಳಿಕ ಕಪ್ಪು ಕುಳಿಗಳು ರೂಪುಗೊಳ್ಳುತ್ತವೆ. 'ಆಸ್ಟ್ರೋನಮಿ & ಆಸ್ಟ್ರೋಫಿಸಿಕ್ಸ್' ಜರ್ನಲ್ನಲ್ಲಿ ಬಿಎಚ್3 ಬಗ್ಗೆ ವಿವರಿಸಲಾಗಿದೆ.
ಏನಿದು ಕಪ್ಪುರಂದ್ರ ಅಥವಾ ಕುಳಿ : ಗುರುತ್ವಾಕರ್ಷಣೆಯ ಬಲದಿಂದ ಹಾಗೂ ಆಗ ಉಂಟಾಗುವ ಒತ್ತಡದಿಂದಾಗಿ ಗ್ಯಾಲಕ್ಸಿಗಳ ನಡುವೆ ಉಂಟಾದ ರಂದ್ರವನ್ನು ಕಪ್ಪು ರಂಧ್ರ ಎಂದು ಕರೆಯಲಾಗುತ್ತದೆ. ದೊಡ್ಡ ನಕ್ಷತ್ರಗಳ ಸ್ಫೋಟದ ಸಂದರ್ಭಗಳಲ್ಲಿ ಬಾಹ್ಯಾಕಾಶದಲ್ಲಿ ಇಂತಹ ಕಪ್ಪು ರಂಧ್ರಗಳು ಸೃಷ್ಟಿಯಾಗಬಹುದು ಎಂಬುದು ವಿಜ್ಞಾನಿಗಳ ಅನಿಸಿಕೆ. ಕಪ್ಪುಕುಳಿಯಲ್ಲಿರುವ ಅತ್ಯಂತ ಶಾಖದಿಂದ ಕೂಡಿದ ಅನಿಲದಿಂದಾಗಿ ಇದು ತನ್ನ ಬಳಿ ಇರುವ ಗ್ಯಾಲಕ್ಸಿಗಳನ್ನು ಸೆಳೆದುಕೊಳ್ಳುತ್ತದೆ. ಈ ಕಪ್ಪು ರಂಧ್ರದ ಗುರುತ್ವಾಕರ್ಷಣೆಯ ಶಕ್ತಿಯಿಂದ ಯಾವ ಬೆಳಕು ಸಹ ಪಾರಾಗಲು ಸಾಧ್ಯವೇ ಇಲ್ಲ. ಕಪ್ಪು ರಂದ್ರ ಎಲ್ಲವನ್ನೂ ಹೀರಿಕೊಳ್ಳುವ ಮತ್ತು ಆಪೋಶನ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಇದನ್ನು ಓದಿ: 'ತಂತ್ರಜ್ಞಾನ, ತಂತ್ರಾಂಶಗಳ ಬಳಕೆಯಿಂದ ಬಾಹ್ಯಾಕಾಶ ಅವಶೇಷಗಳ ತೊಂದರೆಗಳು ತಗ್ಗುತ್ತವೆ' - Isro Chief Somanath