ETV Bharat / technology

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಫೋನ್​ 16 ಸರಣಿಯ ಸ್ಮಾರ್ಟ್‌ಫೋನ್‌​, ವಾಚ್​, ಏರ್​ಪೋಡ್ಸ್​: ಬೆಲೆ, ವೈಶಿಷ್ಟ್ಯಗಳು ಹೀಗಿವೆ! - iPhone 16 Launched - IPHONE 16 LAUNCHED

iPhone 16 Series launched: ಪ್ರಸಿದ್ಧ ಟೆಕ್ ದೈತ್ಯ ಕಂಪನಿ ಆ್ಯಪಲ್ ತನ್ನ ವಾರ್ಷಿಕ ಸಮಾರಂಭದಲ್ಲಿ ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳ​ ಬೆಲೆ, ವೈಶಿಷ್ಟ್ಯಗಳ ಕುರಿತು ವಿವರವಾದ ವರದಿ ಇಲ್ಲಿದೆ.

iPhone 16 debuts  iPhone 16 AI technology  iPhone 16 price  iPhone 16 features
ಐಫೋನ್​ 16 ಸೀರಿಸ್ ಬಿಡುಗಡೆ (ANI)
author img

By ETV Bharat Tech Team

Published : Sep 10, 2024, 10:10 AM IST

iPhone 16 Series Launched: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಟೆಕ್ ದೈತ್ಯ ಆ್ಯಪಲ್ ಸಂಸ್ಥೆ ಹಲವು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿತು. 'ಇಟ್ಸ್ ಗ್ಲೋಟೈಮ್' ಹೆಸರಿನಲ್ಲಿ ಆಯೋಜಿಸಲಾದ ಈ ಸಮಾರಂಭದಲ್ಲಿ Apple iPhone 16 ಸರಣಿಯ ಸ್ಮಾರ್ಟ್‌ಫೋನ್‌ಗಳು, Apple Watch ಸರಣಿ 10 ಮತ್ತು AirPods 4 ಅನ್ನು ಬಿಡುಗಡೆಗೊಳಿಸಿದೆ.

ಪ್ರಪಂಚದಾದ್ಯಂತ ಟೆಕ್ ಅಭಿಮಾನಿಗಳು ಈ ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಿದರು. ಕ್ಯಾಲಿಫೋರ್ನಿಯಾದ ಆ್ಯಪಲ್ ಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಿತು. ಕಂಪನಿಯ ಸಿಇಒ ಟಿಮ್ ಕುಕ್ ಹೊಸ ಉತ್ಪನ್ನಗಳ ಬಗ್ಗೆ ವಿವರ ಹಂಚಿಕೊಂಡರು.

iPhone 16 debuts  iPhone 16 AI technology  iPhone 16 price  iPhone 16 features
ಮಾರುಕಟ್ಟೆಗೆ ಬಂತು ಐಫೋನ್​ 16 ಸೀರಿಸ್​ (ANI)

ಟಚ್ ಸೆನ್ಸಿಟಿವ್ ಕ್ಯಾಮೆರಾ, ಆ್ಯಕ್ಷನ್ ಬಟನ್: iPhone 16 ಸರಣಿಯ ಫೋನ್‌ಗಳು ಅನೇಕ ಹೊಸ ಆವಿಷ್ಕಾರಗಳೊಂದಿಗೆ ಬರುತ್ತಿವೆ. ಆ್ಯಪಲ್ ಈ ಹೊಸ ಮಾದರಿಗಳಲ್ಲಿ ಇಂಟಲಿಜೆನ್ಸ್​ ಅನ್ನು ಪ್ರಮುಖ ಆಕರ್ಷಣೆಯನ್ನಾಗಿ ಮಾಡಿದೆ. ಹೊಸ ಟಚ್ ಸೆನ್ಸಿಟಿವ್ ಕ್ಯಾಮೆರಾ ಜೊತೆಗೆ ಆ್ಯಕ್ಷನ್ ಬಟನ್ ನೀಡಲಾಗಿದೆ.

ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳು A18 ಚಿಪ್‌ನೊಂದಿಗೆ ಸಜ್ಜುಗೊಂಡಿವೆ. ನ್ಯೂರಲ್ ಎಂಜಿನ್ ಹೊಂದಿರುವ ಈ ಚಿಪ್ ಎರಡು ಪಟ್ಟು ವೇಗವಾಗಿ ಕೆಲಸ ಮಾಡುತ್ತವೆ. ಆ್ಯಪಲ್ ಶೇ 17ರಷ್ಟು ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಂದಿಗೆ ಅಪ್​ಗ್ರೇಡೆಡ್​ ಮೆಮೊರಿ ಸಬ್​ಸಿಸ್ಟಮ್​ ಹೊಂದಿದೆ ಎಂದು ಕಂಪನಿ ಹೇಳಿದೆ.

ಆ್ಯಪಲ್‌ನ ಕೃತಕ ಬುದ್ಧಿಮತ್ತೆಯ ಸಹಾಯದಿಂದ, ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳನ್ನು ಬಹಳ ಸುಲಭವಾಗಿ ಬಳಸಬಹುದು. ಮತ್ತು ನೂರಾರು ಹೊಸ ಕ್ರಮಗಳನ್ನೂ ತೆಗೆದುಕೊಳ್ಳಬಹುದು. ಆ್ಯಪಲ್ ಇಂಟೆಲಿಜೆನ್ಸ್ ಬೀಟಾ ಆವೃತ್ತಿ ಮುಂದಿನ ತಿಂಗಳು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಲಿದೆ. ನಂತರ ಚೈನೀಸ್, ಫ್ರೆಂಚ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಭಾರತೀಯ ಭಾಷೆಗಳ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

ಹೊಸ ಸರಣಿಯ ಫೋನ್‌ಗಳು ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತದೆ ಎಂದು ಆ್ಯಪಲ್ ಹೇಳಿಕೊಂಡರೂ, ವಿವರಗಳನ್ನು ಬಹಿರಂಗಪಡಿಸಿಲ್ಲ. ಸೆಪ್ಟೆಂಬರ್ 13ರಿಂದ ಮುಂಗಡ ಬುಕಿಂಗ್ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 20ರಿಂದ ಮಾರುಕಟ್ಟೆಯಲ್ಲಿ ಲಭ್ಯ. ಈ ಹೊಸ ಮಾದರಿಗಳಲ್ಲಿ Apple MagSafe ಚಾರ್ಜಿಂಗ್ ವೇಗವನ್ನು 15 ವ್ಯಾಟ್‌ಗಳಿಂದ 25 ವ್ಯಾಟ್‌ಗಳಿಗೆ ಹೆಚ್ಚಿಸಿದೆ. ಭಾರತದಲ್ಲಿ iPhone 15 ಮಾದರಿಗಳಿಗೆ ಹೋಲಿಸಿದರೆ iPhone 16 ಮಾದರಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ.

ಇದನ್ನೂ ಓದಿ: ಮಾರುಕಟ್ಟೆಗೆ ಬರ್ತಿದೆ ಐಫೋನ್​ 16: ಈ ಹಿಂದಿನ ಸೀರೀಸ್​ ಫೋನ್​ಗಳ ಬೆಲೆಯಲ್ಲಿ ಭಾರಿ ಕುಸಿತ! - iPhone Price Drops

iPhone 16, 16 Plus ಬೆಲೆ, ವೈಶಿಷ್ಟ್ಯಗಳು ಒಂದೇ:

  • Apple iPhone 16 ಸರಣಿಯಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಹೊಸ ಸರಣಿಯ ಫೋನ್‌ಗಳು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿವೆ. ಇದು ಗ್ಲಾಸ್ ಬ್ಯಾಕ್ ಫೋನ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ ಎಂದು ಆ್ಯಪಲ್ ತಿಳಿಸಿದೆ.
  • ಐಫೋನ್ 16 ಡಿಸ್​ಪ್ಲೇ 6.1 ಇಂಚುಗಳಷ್ಟು ಉದ್ದವಿದೆ. ಇದನ್ನು ವೆನಿಲ್ಲಾ ರೂಪಾಂತರದೊಂದಿಗೆ ವಿನ್ಯಾಸಗೊಳಿಸಲಾಗಿದೆ. iOS 18ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಬ್ರೈಟ್​ನೆಸ್​ ಅನ್ನು 2000 ನಿಟ್‌ಗಳವರೆಗೆ ಹೆಚ್ಚಿಸಬಹುದು.
  • ಐಫೋನ್ 16 ಪ್ಲಸ್ ಡಿಸ್​ಪ್ಲೇ 6.7 ಇಂಚು ಉದ್ದವಾಗಿದೆ. ಸೂಪರ್ ರೆಟಿನಾ XDR OLED ಡಿಸ್​ಪ್ಲೇ ಹೊಂದಿದೆ. ಹಿಂಭಾಗದಲ್ಲಿ 48 MP ವೈಡ್-ಆ್ಯಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 12 MP ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ನಿಯಂತ್ರಣ ಬಟನ್‌ನೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಳ ಸುಲಭವಾಗಿ ತೆಗೆಯಲು ಸುಧಾರಿತ ವೈಶಿಷ್ಟ್ಯವಿದೆ.
  • ಬೆಲೆಗಳ ವಿವರ: 128 ಜಿಬಿ ಸ್ಟೋರೇಜ್ ಹೊಂದಿರುವ iPhone 16 ಮೂಲ ಮಾದರಿಯ ಬೆಲೆ 79,900 ರೂ. ($799) ಮತ್ತು ಐಫೋನ್ 16 ಪ್ಲಸ್ ರೂ 89,900 ($899)ನಿಂದ ಪ್ರಾರಂಭವಾಗುತ್ತದೆ. ಐಫೋನ್ 16ನಲ್ಲಿ 'AAA ಗೇಮ್ಸ್' ಆಡುವ ಅವಕಾಶ ಒದಗಿಸಲಾಗಿದೆ. ಮೊದಲು ಈ ವೈಶಿಷ್ಟ್ಯ ಪ್ರೊ ಮಾದರಿಗಳಲ್ಲಿ ಮಾತ್ರ ಸಿಗುತ್ತಿತ್ತು.

iPhone 16 Pro, 16 Pro Max ಬೆಲೆ, ವೈಶಿಷ್ಟ್ಯಗಳು:

  • ಐಫೋನ್ 16 ಪ್ರೊ 6.3 ಇಂಚಿನ ಡಿಸ್​ಪ್ಲೇ ಹೊಂದಿದ್ದರೆ, 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್​ಪ್ಲೇ ಹೊಂದಿದೆ. ಎರಡೂ ಮಾದರಿಗಳು ಸುಧಾರಿತ ಕೂಲಿಂಗ್ ಚೇಂಬರ್ ಫೀಚರ್​ ಹೊಂದಿವೆ. ಆ್ಯಪಲ್‌ನ ಇಂಟಲಿಜೆನ್ಸ್​ ಬಳಸುವಾಗ ಸಾಧನಗಳು ಬಿಸಿಯಾಗುವುದನ್ನು ತಡೆಯಲು ಈ ವೈಶಿಷ್ಟ್ಯ ಸಹಾಯ ಮಾಡುತ್ತದೆ ಎಂದು ಕಂಪನಿ ಘೋಷಿಸಿದೆ.
  • A18 Pro ಚಿಪ್ ಅನ್ನು Pro ಮತ್ತು Pro Max ಮಾದರಿಗಳಲ್ಲಿ ಬಳಸಲಾಗಿದೆ. ಚಿಪ್ ಪ್ರೊ ರೆಸ್ ವಿಡಿಯೋ ರೆಕಾರ್ಡಿಂಗ್‌ನಲ್ಲಿ ಸುಧಾರಿತ ಮಾಧ್ಯಮ ಸಾಮರ್ಥ್ಯಗಳನ್ನು ಹೊಂದಿದೆ ಮತ್ತು ವೇಗವಾದ USB 3 ವರ್ಗಾವಣೆ ವೇಗ ಹೊಂದಿದೆ ಎಂದು ಕಂಪನಿ ಹೇಳಿದೆ.
  • ಕ್ಯಾಮೆರಾ: ಹಿಂಭಾಗದಲ್ಲಿ ಎರಡು 48 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಬಳಸಲಾಗಿದೆ. ಒಂದು 48 MP ಫ್ಯೂಷನ್ ಕ್ಯಾಮೆರಾ ಮತ್ತು ಇನ್ನೊಂದು ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ. 12 MP 5X ಟೆಲಿಫೋಟೋ ಮೂಲಕ ಫೋಟೋಗಳನ್ನು ತೆಗೆದುಕೊಳ್ಳಬಹುದು.
  • ಪ್ರೊ ಮಾದರಿಗಳು 4K120 ಗುಣಮಟ್ಟದೊಂದಿಗೆ ವಿಡಿಯೋ ರೆಕಾರ್ಡ್ ಮಾಡಬಹುದು. HDR ರೆಕಾರ್ಡಿಂಗ್ ಅನ್ನು ಕ್ಯಾಮೆರಾ ನಿಯಂತ್ರಣ ವೈಶಿಷ್ಟ್ಯದೊಂದಿಗೆ ಒದಗಿಸಲಾಗಿದೆ.
  • ಬೆಲೆ ವಿವರ: 128 GB ಸ್ಟೋರೇಜ್ ಹೊಂದಿರುವ ಮೂಲ ಮಾದರಿ 16 Pro ಬೆಲೆ ರೂ. 1,19,900 ($999), 256GB ಆಂತರಿಕ ಸ್ಟೋರೇಜ್​ ಹೊಂದಿರುವ Pro 16 Max ಬೆಲೆ ರೂ.1,44,900 ($1199) ಪ್ರಾರಂಭವಾಗುತ್ತವೆ.

Apple Watch Series 10, AirPods 4, AirPods ಮ್ಯಾಕ್ಸ್ ಬೆಲೆ, ವೈಶಿಷ್ಟ್ಯಗಳು:

  • ಆ್ಯಪಲ್ ತನ್ನ ಈವೆಂಟ್‌ನಲ್ಲಿ ವಾಚ್ ಸರಣಿ 10 ಅನ್ನು ಮೊದಲು ಬಿಡುಗಡೆ ಮಾಡಿತು. ಈ ವಾಚ್ ಸರಣಿಯಲ್ಲಿ ಹಲವು ಸುಧಾರಿತ ವೈಶಿಷ್ಟ್ಯಗಳಿವೆ. ಹಿಂದಿನ ವಾಚ್‌ಗಳಿಗೆ ಹೋಲಿಸಿದರೆ ಈ ವಾಚ್‌ಗಳ ಡಿಸ್​ಪ್ಲೇಗಳು ತುಂಬಾ ದೊಡ್ಡದಾಗಿವೆ ಎಂದು ಆ್ಯಪಲ್ ಹೇಳಿದೆ.
  • ಮೊದಲ ಬಾರಿಗೆ ವೈಡ್ ಆ್ಯಂಗಲ್ OLED ಡಿಸ್​ಪ್ಲೇ ನೀಡಲಾಗಿದೆ. ಸರಣಿ 9ಕ್ಕೆ ಹೋಲಿಸಿದರೆ, ಹೊಸ ಮಾದರಿಗಳ ಡಿಸ್​ಪ್ಲೇ ಹೆಚ್ಚು ದೊಡ್ಡದಾಗಿದೆ ಮತ್ತು ತೆಳುವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.
  • ಪಾಲಿಶ್ ಮಾಡಿದ ಟೈಟಾನಿಯಂ ಫಿನಿಶ್‌ನೊಂದಿಗೆ ಅಲ್ಯೂಮಿನಿಯಂನಿಂದ ಹೊಸ ಸರಣಿಯ ಸ್ಮಾರ್ಟ್​ವಾಚ್​ಗಳನ್ನು ಸಿದ್ಧಪಡಿಸಲಾಗಿದೆ.
  • ಇವು S10 ಚಿಪ್‌ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಮೊಟ್ಟಮೊದಲ ಬಾರಿಗೆ ಸ್ಲೀಪ್ ಅಪ್ನಿಯಾ ಪತ್ತೆ ಮಾಡುವ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ನಿದ್ರೆಯ ಸಮಯದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳನ್ನು ಗುರುತಿಸುವ ಉದ್ದೇಶದಿಂದ ಆ್ಯಪಲ್ ಈ ವೈಶಿಷ್ಟ್ಯವನ್ನು ತಂದಿದೆ.
  • ಈ ವಾಚ್​ಗಳು ವೇಗವಾಗಿ ಚಾರ್ಜಿಂಗ್ ಸಾಮರ್ಥ್ಯ ಹೊಂದಿವೆ. ಶೇ 80ರಷ್ಟು ಚಾರ್ಜಿಂಗ್ ಕೇವಲ 30 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಕಂಪನಿ ವಿವರಿಸಿದೆ.
  • ಬೆಲೆಗಳ ವಿವರ: GPSನ ಬೆಲೆ 399 ಡಾಲರ್, GPS + ಸೆಲ್ಯುಲಾರ್ 499 ಡಾಲರ್ ಮತ್ತು Ultra 2ನ ಬೆಲೆ 799 ಡಾಲರ್‌ ಇದೆ.
  • ಏರ್‌ಪ್ಯಾಡ್‌: ಏರ್‌ಪ್ಯಾಡ್ 4ನಲ್ಲಿ 'ಸಿರಿ' ವೈಶಿಷ್ಟ್ಯವನ್ನು ನೀಡಲಾಗಿದೆ. ಹೊಸ ಏರ್‌ಪ್ಯಾಡ್ 30 ಗಂಟೆಗಳ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಟೈಪ್ ಸಿ ಚಾರ್ಜಿಂಗ್ ಒದಗಿಸಲಾಗಿದೆ.
  • ಈ ವಾಚ್​ಗಳು ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್​ ಹೊಂದಿದೆ. ಆ್ಯಪಲ್ ವಾಚ್ ಚಾರ್ಜರ್‌ಗಳು ಮತ್ತು ಇತರ Qi ವೈರ್‌ಲೆಸ್ ಚಾರ್ಜರ್‌ಗಳನ್ನೂ ಸಹ ಬಳಸಬಹುದು.
  • ಬೆಲೆಗಳ ವಿವರ: AirPods 4 ಅನ್ನು $129 ನಿಗದಿಪಡಿಸಲಾಗಿದೆ. ಆದರೆ ಆ್ಯಕ್ಟಿವ್​ ನಾಯ್ಸ್​ ಕ್ಯಾನ್ಸಲೇಷನ್​ ಮಾದರಿಯು $179 ಬೆಲೆಗೆ ಮಾರಾಟಕ್ಕಿದೆ.
  • AirPods Max ಅನ್ನು ಐದು ಹೊಸ ಬಣ್ಣಗಳಲ್ಲಿ ತರಲಾಗಿದೆ. ಈ ಹೆಡ್‌ಫೋನ್‌ಗಳು ಯುಎಸ್‌ಬಿಸಿ ಪ್ರಕಾರದ ಚಾರ್ಜರ್ ಅನ್ನು ಬೆಂಬಲಿಸುತ್ತವೆ.
  • AirPods Max ವಾಚ್​ಗಳು iOS 18ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 599 ಡಾಲರ್ ಇದೆ.

ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟ 70ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯದ ಹುಂಡೈ ಅಲ್ಕಾಜರ್! - Hyundai Alcazar Launched

ETV Bharat Logo

Copyright © 2025 Ushodaya Enterprises Pvt. Ltd., All Rights Reserved.