ETV Bharat / technology

ಭಾರತದಿಂದ 5 ಬಿಲಿಯನ್‌ ಡಾಲರ್​ಗೆ ತಲುಪಿದ ಆಪಲ್‌ನ ಐಫೋನ್ ರಫ್ತು! - iPhone Exports From India - IPHONE EXPORTS FROM INDIA

iPhone Exports From India: ಆಪಲ್‌ನ ರಪ್ತು ಅಂಕಿಅಂಶಗಳಿಗೆ ಹೋಲಿಸಿದರೆ, ಈ ಹಣಕಾಸು ವರ್ಷದ ಮೊದಲ ಐದು ತಿಂಗಳ ರಫ್ತುಗಳು 2022 ರ ಹಣಕಾಸು ವರ್ಷದ ಒಟ್ಟು ರಫ್ತಿಗೆ ಸಮನಾವಾಗಿರುವುದು ಗಮನಾರ್ಹ..

IPHONE EXPORTS RISE  IPHONE 16 LAUNCHED  APPLE COMPANY
ಭಾರತದಿಂದ 5 ಬಿಲಿಯನ್‌ ಡಾಲರ್​ಗೆ ತಲುಪಿದ ಆಪಲ್‌ನ ಐಫೋನ್ ರಫ್ತು (Apple)
author img

By ETV Bharat Tech Team

Published : Sep 11, 2024, 1:58 PM IST

iPhone Exports From India: ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯಿಂದ ನಡೆಸಲ್ಪಡುವ ಆಪಲ್ ಈ ಆರ್ಥಿಕ ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಭಾರತದಿಂದ ಸುಮಾರು $5 ಶತಕೋಟಿಯಷ್ಟು ಐಫೋನ್ ರಫ್ತುಗಳು ಆಗಿವೆ. ಉದ್ಯಮದ ಅಂಕಿಅಂಶಗಳ ಪ್ರಕಾರ, ಇದು FY24 ರ ಮೊದಲ ಐದು ತಿಂಗಳುಗಳಿಗೆ ಹೋಲಿಸಿದರೆ 50 ಪ್ರತಿಶತದಷ್ಟು ಹೆಚ್ಚಳವಾಗಿದೆ. ಉದ್ಯಮದ ವಿಶ್ಲೇಷಕರ ಪ್ರಕಾರ, ಪ್ರಮುಖ ಐಫೋನ್ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳ ಉತ್ಪಾದನೆಯು ಸಹ ದೇಶದಲ್ಲಿ ಪ್ರಾರಂಭವಾಗುತ್ತಿದೆ.

FY 2025 ರ ಮೊದಲ ಐದು ತಿಂಗಳಲ್ಲಿ (ಏಪ್ರಿಲ್ ನಿಂದ ಆಗಸ್ಟ್) ಭಾರತದಿಂದ ಐಫೋನ್ ರಫ್ತು $5 ಬಿಲಿಯನ್ ಮಾರ್ಕ್ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಅಂಕಿ-ಅಂಶ 3.2 ಶತಕೋಟಿ ಡಾಲರ್‌ಗಳಾಗಿದ್ದು, ಈ ವರ್ಷ ಶೇ.54ರಷ್ಟು ಏರಿಕೆಯಾಗಿದೆ. ಕಂಪನಿಯ ಮಾರಾಟಗಾರರು ಈ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಈಗ ಆಪಲ್ ಭಾರತದಲ್ಲಿ ಐಫೋನ್ 16 ಮತ್ತು ಐಫೋನ್ ಮ್ಯಾಕ್ಸ್ ಅನ್ನು ತಯಾರಿಸಲು ನಿರ್ಧರಿಸಿದೆ. ಅದು ದೇಶದಿಂದ ತನ್ನ ರಫ್ತು ಮೌಲ್ಯವನ್ನು ಹೆಚ್ಚಿಸಲು ಸಿದ್ಧವಾಗಿದೆ.

ಆಪಲ್‌ನ ಅಂಕಿಅಂಶಗಳಿಗೆ ಹೋಲಿಸಿದರೆ, ಈ ಹಣಕಾಸು ವರ್ಷದ ಮೊದಲ ಐದು ತಿಂಗಳ ರಫ್ತುಗಳು 2022 ರ ಹಣಕಾಸು ವರ್ಷದ ಒಟ್ಟು ರಫ್ತಿಗೆ ಸಮನಾಗಿರುತ್ತದೆ. Foxconn, Pegatron ಮತ್ತು Wistron (ಈಗ Tata Electronics) ಎಂಬ ಮೂರು ಮಾರಾಟಗಾರರ ಮೂಲಕ ಆಪಲ್ ಸ್ಮಾರ್ಟ್‌ಫೋನ್‌ಗಳಿಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯಡಿಯಲ್ಲಿ ಐಫೋನ್‌ಗಳನ್ನು ತಯಾರಿಸುತ್ತದೆ. ಈ ಮೂರು ಮಾರಾಟಗಾರರು FY2025 ಗಾಗಿ PLI ಯೋಜನೆಯಡಿ $8.9 ಶತಕೋಟಿ ಮೌಲ್ಯದ ರಫ್ತು ಮಾಡುವುದಾಗಿ ಹೇಳಿಕೊಳ್ಳುತ್ತಾರೆ. ಇದು ಯೋಜನೆಯ ನಾಲ್ಕನೇ ವರ್ಷವೂ ಆಗಿದೆ.

ಓದಿ: ಅದು ಫೋಲ್ಡ್​ ಆದಾಗ ನಮಗೆ ತಿಳಿಸಿ: ಆಪಲ್ ಅನ್ನು​ ಕಚ್ಚಿ ತಿಂದ ಸ್ಯಾಮ್​ಸಂಗ್​! - Apple vs Samsung

ETV Bharat Logo

Copyright © 2025 Ushodaya Enterprises Pvt. Ltd., All Rights Reserved.