ನವದೆಹಲಿ: ತನ್ನ ವಿಶಿಷ್ಟ ಫೀಚರ್, ಉತ್ತಮ ಗುಣಮಟ್ಟ, ಬಾಳಿಕೆ ಸೇರಿದಂತೆ ಹಲವು ಕಾರಣಗಳಿಂದ ಈಗಾಗಲೇ ಐಫೋನ್ ಗ್ರಾಹಕರನ್ನು ಸೆಳೆದಿದೆ. ಇನ್ನು ಈ ಫೋನ್ಗಳ ಬಾಳಿಕೆ ಮಟ್ಟದಲ್ಲಿ ಗ್ರಾಹಕರು ಯಾವ ಮಟ್ಟಿಗೆ ನಂಬಬಹುದು ಎಂಬುದನ್ನು ಇದೀಗ ಹೊಸ ಜಾಹೀರಾತಿನ ಮೂಲಕ ಆಪಲ್ ತೋರಿಸಿದೆ. ಭಾರತದಲ್ಲಿ ಈ ಹೊಸ ಪ್ರಚಾರಕ್ಕೆ ಮುಂದಾಗಿರುವ ಆಪಲ್ನ ಈ ಜಾಹೀರಾತು ಸದ್ಯ ಎಲ್ಲ ಗ್ರಾಹಕರನ್ನು ಸೆಳೆದಿದೆ.
ಮೊಬೈಲ್ಗಳ ವೀಕ್ಷಣೆ ವೇಳೆ ಭಾರತದಂತಹ ಇಕ್ಕಟಾದ ತಿರುವಿನ ರಸ್ತೆ, ಗುಂಡಿ, ಬಂಪರ್ ಮೇಲಿನ ಪ್ರಯಾಣ ವೇಳೆ ಐಫೋನ್ ಬಿದ್ದರೂ, ಉರುಳಿಸಿದರೂ, ಎಸೆದರೂ ಕೂಡ ಅದಕ್ಕೆ ಯಾವುದೇ ಹಾನಿಯಾಗದೇ ಸದೃಢ ಬಾಳಿಕೆ ಬರಲಿದೆ ಎಂಬುದನ್ನು ಒಂದು ಆಟೋ ರಿಕ್ಷಾದ ಜಾಹೀರಾತಿನ ಮೂಲಕ ತೋರಿಸಲಾಗಿದೆ. ಈ ಮೂಲಕ ಅದರ ಗುಣಮಟ್ಟವನ್ನು ಪ್ರದರ್ಶಿಸಲಾಗಿದೆ.
ಐಪಿಎಲ್ ಕ್ರಿಕೆಟ್ ಸೀಸನ್ ಮಧ್ಯದಲ್ಲಿ ಈ ಜಾಹೀರಾತು ಬಿಡುಗಡೆಯಾಗಿದೆ. 'ರಿಲಾಕ್ಸ್ ಇದು ಐಫೋನ್' ಎಂಬ ಶೀರ್ಷಿಕೆಯಲ್ಲಿ ಅವರು ತಮ್ಮ ಇಷ್ಟದ ಆಟವನ್ನು ಒಂದು ಕ್ಷಣವೂ ವಿರಾಮವಿಲ್ಲದೇ ಅಥವಾ ಅವರ ಐಫೋನ್ಗೆ ಹಾನಿ ಇಲ್ಲದೇ ಎಲ್ಲಿಯಾದರೂ ಅದರ ಮೋಜು ಸವಿಯಬಹುದು ಎಂಬುದು ಜಾಹೀರಾತಿನ ಮೂಲ ಉದ್ದೇಶ
ಆಪಲ್ನ ಹೊಸ ಪ್ರಚಾರದ ಜಾಹೀತಾರು ಡಿಜಿಟಲ್ ಪ್ರಿ- ರೋಲ್, ಟಿವಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದಾಗಿದೆ. ಕಠಿಣ ಬಂಪ್ಗಳ, ಮೊನಚಾದ ತಿರುವಿನಲ್ಲೂ ಕೂಡ ಎತ್ತಿ ಹಾಕುವ ಆಟೋದ ಪ್ರಯಾಣದಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೇ ಐಫೋನ್ ಬಳಕೆ ಮಾಡಬಹುದು. ಈ ಮೂಲಕ ಕಠಿಣ ಪ್ರಯಾಣದಲ್ಲೂ ಅದು ಹೆಚ್ಚು ಬಳಕೆ ಬರಲಿದ್ದು, ಸದೃಢವಾಗಿದೆ ಎಂದು ತೋರಿಸಿದೆ.
ಐಫೋನ್ 15 ಹಿಂಭಾಗದಲ್ಲಿ ಗ್ಲಾಸ್ನೊಂದಿಗೆ ಕಸ್ಟಮ್ ಡ್ಯುಯಲ್ ಅಯಾನ್ ಎಕ್ಸ್ಚೆಂಜ್ ಪ್ರತಿಕ್ರಿಯೆ ಹೊಂದಿದೆ. ಏರೋಸ್ಪೇಸ್- ಗ್ರೇಡ್ ಅಲ್ಯೂಮಿನಿಯಂ ಅನ್ನು ಹೊಂದುವ ಮೂಲಕ ಅಸಾಧ್ಯ ಬಾಳಿಕೆಯನ್ನು ಇದು ಹೊಂದಿದೆ ಎಂದು ತಿಳಿಸಿದೆ.
ಇತರೆ ಸ್ಮಾರ್ಟ್ಫೋನ್ ಗ್ಲಾಸ್ಗಿಂತ ಹೆಚ್ಚಿನ ಕಠಿಣ ಸೆರಾಮಿಕ್ ಶೀಲ್ಡ್ ಕವರ್ ಹೊಂದಿದ್ದು, ಇದು ನೀರು ಮತ್ತು ಧೂಳಿನ ಪ್ರತಿರೋಧವನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿದೆ. ಇತರೆ ಸ್ಮಾರ್ಟ್ಫೋನ್ಗಿಂತ ಇದು ಹೆಚ್ಚು ಸಮಯ ಬಾಳಿಕೆ ಮೌಲ್ಯವನ್ನು ಹೊಂದಿದೆ. ಇಷ್ಟೇ ಅಲ್ಲದೇ ಇದು ವೇಗ ಮತ್ತು ಸಾಮರ್ಥ್ಯದ ಎ16 ಬಯೋನಿಕ್ ಚಿಪ್ ಹೊಂದಿದ್ದು, ಇದು ಇದರ ಸಾಮರ್ಥ್ಯ ಸಾಬೀತು ಮಾಡಿದೆ. ಡೈನಾಮಿಕ್ ಐಲ್ಯಾಂಡ್, ಕಂಪ್ಯೂಟೇಶನಲ್ ಫೋಟೋಗ್ರಾಫಿ ಇದರ ಸಾಮರ್ಥ್ಯವನ್ನು ಮತ್ತಷ್ಟು ಶಕ್ತಿಯುತಗೊಳಿಸಿದೆ.
ಇದನ್ನೂ ಓದಿ: ಸ್ಪೈವೇರ್ ದಾಳಿ: ಭಾರತ ಸೇರಿದಂತೆ 91 ದೇಶದಲ್ಲಿ ಐಫೋನ್ ಬಳಕೆದಾರರಿಗೆ ಆಪಲ್ ಎಚ್ಚರಿಕೆ ಸಂದೇಶ ರವಾನೆ