ETV Bharat / technology

ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ MG ZS ನ ಹೊಸ ಹೈಬ್ರಿಡ್+ ಕಾರು: ಏನಿದರ ವೈಶಿಷ್ಟ್ಯ? - MG ZS HYBRID PLUS LAUNCHED - MG ZS HYBRID PLUS LAUNCHED

MG ZS Hybrid+: MG ಮೋಟಾರ್ ತನ್ನ ಪ್ರಮುಖ SUV MG ZS ನ ಹೊಸ ಮಾದರಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಮಾದರಿಯನ್ನು MG ZS ಹೈಬ್ರಿಡ್+ ಹೆಸರಿನೊಂದಿಗೆ ಬಿಡುಗಡೆ ಮಾಡಿದೆ. ಮುಂದಿನ ವರ್ಷ ಈ ಮಾದರಿ ಕಾರು ಭಾರತಕ್ಕೂ ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ.

MG ASTOR NEW MODEL  MG ASTOR LAUNCH  MG ZS HYBRID PLUS MODEL CAR  MG ZS HYBRID PLUS FEATURE
MG ZS ನ ಹೊಸ ಹೈಬ್ರಿಡ್+ (MG Motor)
author img

By ETV Bharat Tech Team

Published : Aug 30, 2024, 12:45 PM IST

MG ZS Hybrid+: ಯುಕೆ ಕಾರು ತಯಾರಕ ಎಂಜಿ ಮೋಟಾರ್ ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಎಂಜಿ ಝಡ್‌ಎಸ್‌ನ ಹೊಸ ತಲೆಮಾರಿನ ಮಾದರಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 2025 ರ ಮಾದರಿಯಲ್ಲಿ MG ZS ನ ಬಾಹ್ಯ ಮತ್ತು ಒಳಭಾಗದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.

MG ZS ಅನ್ನು ಜಾಗತಿಕವಾಗಿ ಪರಿಚಯಿಸಲಾಗಿದೆ ಮತ್ತು ಹೈಬ್ರಿಡ್+ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಈ ಮಾದರಿಯ ಎರಡು ಆವೃತ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ, ಒಂದು ಆಲ್ - ಎಲೆಕ್ಟ್ರಿಕ್ ಆವೃತ್ತಿಯ MG ZS EV ಎಂದು ಮಾರಾಟ ಮಾಡಲಾಗುತ್ತದೆ. ಇನ್ನೊಂದು ICE ಮಾದರಿಯನ್ನು MG ಆಸ್ಟರ್ ಎಂದು ಮಾರಾಟ ಮಾಡಲಾಗುತ್ತಿದೆ.

ಬಾಹ್ಯ ವಿನ್ಯಾಸ: ಕಾರಿನ ಹೊರಭಾಗದ ಬಗ್ಗೆ ಮಾತನಾಡುವುದಾದರೆ, ಹೊಸ MG ZS ಹೆಚ್ಚು ಆಕ್ರಮಣಕಾರಿ ಮುಂಭಾಗ ಹೊಂದಿದೆ. ಇದರಲ್ಲಿ ಮರು ವಿನ್ಯಾಸಗೊಳಿಸಲಾದ ದೊಡ್ಡ ಗ್ರಿಲ್, ಅಗಲವಾಗಿ ಮತ್ತು ಉದ್ದವಾಗಿ ವಿನ್ಯಾಸಗೊಳಿಸಲಾದ ಏರ್ ಡ್ಯಾಂಪ್​, ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಜೋಡಿಸುವ ಪೂರ್ಣ - ಅಗಲವಾದ ಲೈಟ್ ಬಾರ್ ಅನ್ನು ಒಳಗೊಂಡಿದೆ. ಇದರಲ್ಲಿ ಸ್ಮೂತ್​ ಆದ LED DRL ಗಳನ್ನು ಒದಗಿಸಲಾಗಿದೆ. MG ಲೋಗೋವನ್ನು ಸಹ ಮರುಸ್ಥಾಪಿಸಲಾಗಿದೆ.

ನಾವು ಸೈಡ್ ಪ್ರೊಫೈಲ್ ನೋಡಿದರೆ, ಇದು ಹಿಂದಿನ ಮಾದರಿಯಂತೆಯೇ ಇರುತ್ತದೆ. ಆದರೂ ಅಲಾಯ್ ವೀಲ್ ಮಾದರಿಯಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದಿದೆ. ಹಿಂಭಾಗದ ಬಂಪರ್ ಮರು ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ. ಟೈಲ್‌ಗೇಟ್‌ನಲ್ಲಿ ಹೊಸ ಬ್ರ್ಯಾಂಡ್ ಲೋಗೋ, ಇಂಟಿಗ್ರೇಟೆಡ್ ಸ್ಟಾಪ್ ಲ್ಯಾಂಪ್‌ನೊಂದಿಗೆ ವಿಸ್ತೃತ ಹಿಂಭಾಗದ ಸ್ಪಾಯ್ಲರ್, ಹಿಂಭಾಗದ ವೈಪರ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಔಟ್‌ಲೆಟ್‌ಗಳನ್ನು ಹೋಲುವ ಸಿಲ್ವರ್ ಫಾಕ್ಸ್ ಮಾದರಿಯನ್ನು ಒಳಗೊಂಡಿವೆ.

ಹೊಸ MG ZS ನ ಒಳಭಾಗ: ಕಾರಿನ ಒಳಾಂಗಣದ ಕುರಿತು ಮಾತನಾಡುವುದಾದರೆ, ಹೊಸ ಡ್ಯಾಶ್‌ಬೋರ್ಡ್ ಲೇಔಟ್‌ನೊಂದಿಗೆ ಬದಲಾವಣೆಗಳು ಇಲ್ಲಿ ಹೆಚ್ಚು ಗೋಚರಿಸುತ್ತವೆ. ಇದರಲ್ಲಿ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಮರುಹೊಂದಿಸಿದ AC ವೆಂಟ್‌ಗಳು, ಹೊಸ ಸ್ಟೀರಿಂಗ್ ವೀಲ್, ಏಳು-ಇಂಚಿನ ಡಿಜಿಟಲ್ ಉಪಕರಣ ಫಲಕ ಮತ್ತು ಹೊಸ ಗೇರ್ ಲಿವರ್‌ನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಅನ್ನು ಕಾಣಬಹುದಾಗಿದೆ.

ಕಾರಿನ ವೈಶಿಷ್ಟ್ಯ: ಇನ್ನು ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ, ಹೊಸ MG ZS ಹೈಬ್ರಿಡ್+ ವಾಹನ ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ADAS ಸೂಟ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಆಟೋ ಹೋಲ್ಡ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, 360-ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್‌ನಂತಹ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಚಾರ್ಜರ್ ಸಹ ಅಳವಡಿಸಲಾಗಿದೆ.

ಎಂಜಿನ್‌ನಲ್ಲಿ ಹೊಸದೇನಿದೆ?: ಇಂಜಿನ್​ ಬಗ್ಗೆ ಮಾತನಾಡುವುದಾದ್ರೆ, MG ZS ಹೈಬ್ರಿಡ್ + 1.5-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. ಇದನ್ನು ವಿದ್ಯುತ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಇವೆರಡೂ ಒಟ್ಟಾಗಿ 192 BHP ಶಕ್ತಿಯನ್ನು ಉತ್ಪಾದಿಸುತ್ತವೆ ಮತ್ತು ಈ ಕಾರಣದಿಂದಾಗಿ ಕಾರು ಕೇವಲ 8.7 ಸೆಕೆಂಡುಗಳಲ್ಲಿ ಗಂಟೆಗೆ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಓದಿ: ಭಾರತಕ್ಕೆ ಲಗ್ಗೆಯಿಟ್ಟ ಆಪಲ್​ ಒಡೆತನದ ಬೀಟ್ಸ್​: ಮೂರು ಆಡಿಯೋ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಕಂಪನಿ - BEATS ENTERED IN INDIAN MARKET

ETV Bharat Logo

Copyright © 2025 Ushodaya Enterprises Pvt. Ltd., All Rights Reserved.