ETV Bharat / technology

Foldable Phone: 6ನೇ ತಲೆಮಾರಿನ ಗ್ಯಾಲಕ್ಸಿ ಫೊಲ್ಡಬಲ್ ಸ್ಮಾರ್ಟ್​ಫೋನ್​ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - SAMSUNG FOLDABLE PHONE PRICE - SAMSUNG FOLDABLE PHONE PRICE

Samsung Galaxy foldables : 6ನೇ ತಲೆಮಾರಿನ ಸ್ಯಾಮ್​ಸಂಗ್​ ಗ್ಯಾಲಕ್ಸಿ ಮಡಚಬಹುದಾದ ಸ್ಮಾರ್ಟ್​ಪೋನ್​ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

6ನೇ ತಲೆಮಾರಿನ ಗ್ಯಾಲಕ್ಸಿ ಫೊಲ್ಡಬಲ್ ಸ್ಮಾರ್ಟ್​ಫೋನ್​ ಬಿಡುಗಡೆ
6ನೇ ತಲೆಮಾರಿನ ಗ್ಯಾಲಕ್ಸಿ ಫೊಲ್ಡಬಲ್ ಸ್ಮಾರ್ಟ್​ಫೋನ್​ ಬಿಡುಗಡೆ (IANS)
author img

By ETV Bharat Karnataka Team

Published : Jul 24, 2024, 5:07 PM IST

ನವದೆಹಲಿ: 6th-gen Samsung Galaxy Mobile: ಸ್ಯಾಮ್​ಸಂಗ್ ಗ್ಯಾಲಕ್ಸಿ 6ನೇ ತಲೆಮಾರಿನ (sixth-generation) ಮಡಚಬಹುದಾದ ಸ್ಮಾರ್ಟ್​ಫೋನ್​ಗಳು ಸೇರಿದಂತೆ ಇತರ ಹೊಸ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಕಂಪನಿ ಬುಧವಾರ ಘೋಷಿಸಿದೆ. ಗ್ಯಾಲಕ್ಸಿ ಝಡ್ ಫೋಲ್ಡ್ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಗ್ಯಾಲಕ್ಸಿ ಕನೆಕ್ಟೆಡ್ ಇಕೋಸಿಸ್ಟಮ್ ಉತ್ಪನ್ನಗಳು ಈಗ ದೇಶಾದ್ಯಂತ ಚಿಲ್ಲರೆ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ.

ಗ್ರಾಹಕರು 24 ತಿಂಗಳ ಅವಧಿಯ ನೋ ಕಾಸ್ಟ್​ ಇಎಂಐ ಯೋಜನೆಯಡಿ ಗ್ಯಾಲಕ್ಸಿ ಝಡ್ ಫ್ಲಿಪ್ 6 ಅನ್ನು ಕೇವಲ 4,250 ರೂ.ಗೆ ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್ 6 ಅನ್ನು ಕೇವಲ 6,542 ರೂ.ಗಳಿಗೆ ಕೊಳ್ಳಬಹುದು ಎಂದು ಕಂಪನಿ ಹೇಳಿದೆ. ಹಿಂದಿನ ತಲೆಮಾರಿನ ಫೋಲ್ಡಬಲ್​ ಸ್ಮಾರ್ಟ್​ಫೋನ್​ಗಳಿಗೆ ಹೋಲಿಸಿದರೆ ಮೊದಲ 24 ಗಂಟೆಗಳಲ್ಲಿ, ಭಾರತದಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಝಡ್ ಫ್ಲಿಪ್ 6 ಗಳು ಶೇ 40ರಷ್ಟು ಹೆಚ್ಚು ಪ್ರಿ-ಬುಕಿಂಗ್ ಪಡೆದುಕೊಂಡಿವೆ ಎಂದು ಕಂಪನಿ ತಿಳಿಸಿದೆ.

ಸದ್ಯ ಕಂಪನಿಯ ನೋಯ್ಡಾ ಕಾರ್ಖಾನೆಯಲ್ಲಿಯೇ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಝಡ್ ಫ್ಲಿಪ್ 6 ಸ್ಮಾರ್ಟ್​ಫೋನ್​ಗಳನ್ನು ತಯಾರಿಸಲಾಗುತ್ತಿರುವುದು ಗಮನಾರ್ಹ. ಹೊಸ ಫೋಲ್ಡಬಲ್ ಗಳು ಅತ್ಯಂತ ತೆಳುವಾದ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯ ಸಾಧನಗಳಾಗಿವೆ ಮತ್ತು ನೇರ ಅಂಚುಗಳೊಂದಿಗೆ ಸಂಪೂರ್ಣವಾಗಿ ಸಿಮೆಟ್ರಿಕಲ್ ವಿನ್ಯಾಸ ಹೊಂದಿವೆ. ಗ್ಯಾಲಕ್ಸಿ ಝಡ್ ಸರಣಿಯು ವರ್ಧಿತ ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಸಹ ಹೊಂದಿದೆ. ಇದು ಅತಿ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯಾಗಿದೆ.

ಗ್ಯಾಲಕ್ಸಿ ಝಡ್ ಫೋಲ್ಡ್ 6 ದೊಡ್ಡ ಸ್ಕ್ರೀನ್​​ನೊಂದಿಗೆ ನೋಟ್ ಅಸಿಸ್ಟ್, ಕಂಪೋಸರ್, ಸ್ಕೆಚ್ ಟು ಇಮೇಜ್, ಇಂಟರ್ ಪ್ರೆಟರ್, ಫೋಟೋ ಅಸಿಸ್ಟ್ ಮತ್ತು ಇನ್ ಸ್ಟಂಟ್ ಸ್ಲೋ-ಮೋ - ಎಐ-ಚಾಲಿತ ವೈಶಿಷ್ಟ್ಯಗಳು ಮತ್ತು ಪರಿಕರಗಳ ಶ್ರೇಣಿಯನ್ನು ಹೊಂದಿದೆ.

What is the price of foldable Samsung mobile?: ಗ್ಯಾಲಕ್ಸಿ ಝಡ್ ಫೋಲ್ಡ್ 6 1,64,999 ರೂ.ಗಳ (12 ಜಿಬಿ + 256 ಜಿಬಿ) ಆರಂಭಿಕ ಬೆಲೆಯಲ್ಲಿ ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್ 6 1,09,999 ರೂ.ಗಳ (12 ಜಿಬಿ + 256 ಜಿಬಿ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಹಾಗೆಯೇ ಗ್ಯಾಲಕ್ಸಿ ವಾಚ್ ಅಲ್ಟ್ರಾ 59,999 ರೂ. ಮತ್ತು 40 ಎಂಎಂ ಮಾಡೆಲ್​ನ ಗ್ಯಾಲಕ್ಸಿ ವಾಚ್ 7 29,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿವೆ.

ಇದನ್ನೂ ಓದಿ : ಮತ್ತಷ್ಟು ಸ್ಮಾರ್ಟ್​ ವೈಶಿಷ್ಟ್ಯಗಳೊಂದಿಗೆ ಮೆಟಾ ಎಐ ಈಗ ಹಿಂದಿಯಲ್ಲೂ ಲಭ್ಯ - Meta AI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.