ETV Bharat / technology

ಎರಡೂವರೆ ಸಾವಿರ ಕೋಟಿ ರೂ. ಫಂಡಿಂಗ್ ಸಂಗ್ರಹಿಸಿದ 27 ಸ್ಟಾರ್ಟ್​ಅಪ್​ಗಳು

ಈ ವಾರದಲ್ಲಿ 27 ಸ್ಟಾರ್ಟ್​ಅಪ್ ಕಂಪನಿಗಳು 2 ಸಾವಿರದ 547 ಕೋಟಿ ರೂಪಾಯಿ ಫಂಡಿಂಗ್ ಸಂಗ್ರಹಿಸಿವೆ.

27 Indian startups raise $308 million in funding this week

author img

By ETV Bharat Karnataka Team

Published : Mar 10, 2024, 12:07 PM IST

ನವದೆಹಲಿ: ಭಾರತದಲ್ಲಿನ ಕನಿಷ್ಠ 27 ಸ್ಟಾರ್ಟ್ಅಪ್​ ಕಂಪನಿಗಳು ಈ ವಾರ ಸುಮಾರು 307.8 ಮಿಲಿಯನ್ ಡಾಲರ್ (ಸುಮಾರು 2 ಸಾವಿರದ 547 ಕೋಟಿ ರೂಪಾಯಿ) ಫಂಡಿಂಗ್ ಸಂಗ್ರಹಿಸಿವೆ. ಇದರಲ್ಲಿ 17 ಆರಂಭಿಕ ಹಂತದ ಮತ್ತು 7 ಬೆಳವಣಿಗೆಯ ಹಂತದ ಕಂಪನಿಗಳು ಸೇರಿವೆ. ಸುಮಾರು 32 ಆರಂಭಿಕ ಮತ್ತು ಬೆಳವಣಿಗೆಯ ಹಂತದ ಸ್ಟಾರ್ಟ್ಅಪ್​ಗಳು ಕಳೆದ ವಾರ 384 ಮಿಲಿಯನ್ ಡಾಲರ್​ಗಿಂತ ಹೆಚ್ಚು ಫಂಡಿಂಗ್ ಸಂಗ್ರಹಿಸಿವೆ ಎಂದು ಸ್ಟಾರ್ಟ್ಅಪ್ ಸುದ್ದಿ ಪೋರ್ಟಲ್ ಎನ್ ಟ್ರಾಕರ್ ಶನಿವಾರ ವರದಿ ಮಾಡಿದೆ.

ಎಂ ಪಾಕೆಟ್ (mPokket), ಎಮಾ (Ema), ಹುಂಚ್ (Hunch) ಮತ್ತು ರೋಜಾನಾ (Rozana) ಸೇರಿದಂತೆ ಹದಿನೇಳು ಆರಂಭಿಕ ಹಂತದ ಸ್ಟಾರ್ಟ್ಅಪ್​ಗಳು ಸುಮಾರು 166.8 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿವೆ. ದೆಹಲಿ-ಎನ್​ಸಿಆರ್ ಮೂಲದ ಸ್ಟಾರ್ಟ್ಅಪ್​ಗಳು 10 ಡೀಲ್​ಗಳೊಂದಿಗೆ ಫಂಡಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು 9 ಡೀಲ್​ಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಸಾಲ ನೀಡುವ ಡಿಜಿಟಲ್ ಪ್ಲಾಟ್​ಫಾರ್ಮ್ ಆಗಿರುವ ಎಂ ಪಾಕೆಟ್ ಬಿಪಿಇಎ ಕ್ರೆಡಿಟ್​ನ ಖಾಸಗಿ ಕ್ರೆಡಿಟ್ ಪ್ಲಾಟ್​ಫಾರ್ಮ್​ನಿಂದ 500 ಕೋಟಿ ರೂ. (ಸುಮಾರು 60 ಮಿಲಿಯನ್ ಡಾಲರ್) ಸಾಲ ನಿಧಿ ಸಂಗ್ರಹಿಸಿದೆ. ತನ್ನ 24 ಮಿಲಿಯನ್ ನೋಂದಾಯಿತ ಗ್ರಾಹಕರಿಂದ ಹೆಚ್ಚುತ್ತಿರುವ ಸಾಲದ ಬೇಡಿಕೆಯನ್ನು ಪೂರೈಸಲು ಈ ಹಣವನ್ನು ಬಳಸಲಾಗುವುದು ಮತ್ತು ಅದೇ ಸಮಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ತನ್ನ ವಿಮಾ ವಲಯದಲ್ಲಿನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ನಿಧಿಯನ್ನು ವಿನಿಯೋಗಿಸಲಾಗುವುದು ಎಂದು ಎಂ ಪಾಕೆಟ್ ಹೇಳಿದೆ.

ಗ್ರಾಮೀಣ ಇ-ಕಾಮರ್ಸ್ ಸ್ಟಾರ್ಟ್ಅಪ್ ಆಗಿರುವ ರೋಜಾನಾ ಇತ್ತೀಚಿನ ಫಂಡಿಂಗ್ ಸುತ್ತಿನಲ್ಲಿ 22.5 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ. ವಿಸಿ ಸಂಸ್ಥೆ ಫೈರ್ ಸೈಡ್ ವೆಂಚರ್ಸ್ ಮತ್ತು ಈಗಾಗಲೇ ಫಂಡಿಂಗ್ ನೀಡಿರುವ ಹೂಡಿಕೆದಾರರ ಭಾಗವಹಿಸುವಿಕೆಯೊಂದಿಗೆ ಹೂಡಿಕೆ ಸಂಸ್ಥೆ ಬರ್ಟೆಲ್ಸ್ ಮನ್ ಇಂಡಿಯಾ ಇನ್ವೆಸ್ಟ್ ಮೆಂಟ್ಸ್ (ಬಿಐಐ) ಈ ಫಂಡಿಂಗ್ ಸುತ್ತನ್ನು ಮುನ್ನಡೆಸಿದೆ.

"ಈ ಫಂಡಿಂಗ್​ನ ನಿಧಿಯಿಂದ ಹೊಸ ಜಿಲ್ಲೆಗಳನ್ನು ತಲುಪಲು ಮತ್ತು ಅಗತ್ಯ ಉತ್ಪನ್ನಗಳ ಮೂಲಕ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸಲು ನಮ್ಮ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ಮೂಲಸೌಕರ್ಯ ನಿರ್ಮಿಸುವುದನ್ನು ಮುಂದುವರಿಸುತ್ತೇವೆ" ಎಂದು ರೋಜಾನಾ ಸಿಇಒ ಮತ್ತು ಸಹ-ಸಂಸ್ಥಾಪಕ ಅಂಕುರ್ ದಹಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನರೇಟಿವ್ ಎಐ ಸೊಲ್ಯೂಷನ್ಸ್ ಪ್ರೊವೈಡರ್ ಕಂಪನಿಯಾಗಿರುವ ಎಮಾ $ 25 ಮಿಲಿಯನ್ ಫಂಡಿಂಗ್ ಪಡೆದುಕೊಂಡಿದ್ದು, ಹೊಸ "ಸಾರ್ವತ್ರಿಕ ಎಐ ಉದ್ಯೋಗಿ" (universal AI employee) ಸಾಧನವನ್ನು ತಯಾರಿಸುವುದಾಗಿ ಘೋಷಿಸಿದೆ. ಭಾರತದಲ್ಲಿ 1.14 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್ಅಪ್​ಗಳು ಇಲ್ಲಿಯವರೆಗೆ 12 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಹಣಕಾಸು ಸಚಿವಾಲಯವು ಇತ್ತೀಚಿನ ಭಾರತೀಯ ಆರ್ಥಿಕತೆಯ ವಿಮರ್ಶಾ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಪ್ರಾಬಲ್ಯದ ದುರುಪಯೋಗ: ಆ್ಯಪಲ್​ಗೆ $2 ಬಿಲಿಯನ್ ಡಾಲರ್ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.