ETV Bharat / technology

ದೇಶಿಯ ಮಾರುಕಟ್ಟೆಗೆ ಎಂಟ್ರಿಕೊಟ್ಟ ರೋಲ್ಸ್ ರಾಯ್ಸ್ ಘೋಸ್ಟ್​ 2​ - ಲುಕ್​ಗೆ ಫಿದಾ, ಬೆಲೆ ಕೇಳಿದರೆ ಶಾಕ್​ - ROLLS ROYCE GHOST

Rolls-Royce Ghost Series: ರೋಲ್ಸ್ ರಾಯ್ಸ್ ಕಾರುಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇದೀಗ ಈ ಬ್ರಾಂಡ್​ನ ಹೊಸ ಮಾದರಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ರೋಲ್ಸ್ ರಾಯ್ಸ್ ಘೋಸ್ಟ್​ನ ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ.

ROLLS ROYCE GHOST SERIES II  ROLLS ROYCE GHOST SERIES II PRICE  ROLLS ROYCE GHOST SERIES II FEATURE  ROLLS ROYCE GHOST SERIES II MODEL
ರೋಲ್ಸ್ ರಾಯ್ಸ್ ಘೋಸ್ಟ್​ 2​ (Photo Credit: Rolls Royce Motor Cars)
author img

By ETV Bharat Tech Team

Published : Dec 30, 2024, 7:18 AM IST

Rolls-Royce Ghost Series: ರೋಲ್ಸ್ ರಾಯ್ಸ್ ಘೋಸ್ಟ್ ಸರಣಿ 2ರ ರಿಫ್ರೆಶ್ ಮಾಡೆಲ್ ಅನ್ನು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರು ಬಿಡುಗಡೆಯಾದ ಕೇವಲ ಎರಡು ತಿಂಗಳ ನಂತರ, ಐಷಾರಾಮಿ ಸೆಡಾನ್‌ನ ಸಣ್ಣ ಮಾದರಿಯು ಸಹ ಭಾರತೀಯ ಮಾರುಕಟ್ಟೆಗೆ ಬಂದಿದೆ. ರೋಲ್ಸ್ ರಾಯ್ಸ್ ಘೋಸ್ಟ್ ಫೇಸ್‌ಲಿಫ್ಟ್ ಸ್ಟ್ಯಾಂಡರ್ಡ್, ಎಕ್ಸ್‌ಟೆಂಡೆಡ್ ಮತ್ತು ಬ್ಲ್ಯಾಕ್ ಬ್ಯಾಡ್ಜ್ ಎಂಬ ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಂದಿದೆ.

ಇದರ ಬೆಲೆ ಎಷ್ಟು ಗೊತ್ತಾ?: ರೋಲ್ಸ್ ರಾಯ್ಸ್ ಘೋಸ್ಟ್ ಫೇಸ್​ಲಿಫ್ಟ್​ನ ಸ್ಟ್ಯಾಂಡರ್ಡ್ ಮಾದರಿಯ ಬೆಲೆ 8.95 ಕೋಟಿ ರೂಪಾಯಿ. ಇದರ ವಿಸ್ತೃತ ರೂಪಾಂತರದ ಬೆಲೆ ರೂ 10.19 ಕೋಟಿ ಮತ್ತು ಬ್ಲ್ಯಾಕ್​ ಬ್ಯಾಡ್ಜ್ ರೂಪಾಂತರದ ಬೆಲೆ ರೂ 10.52 ಕೋಟಿ. ಈ ರೋಲ್ಸ್ ರಾಯ್ಸ್ ಕಾರಿನ ಫೇಸ್‌ಲಿಫ್ಟ್ ಮಾಡೆಲ್‌ಗಾಗಿ ವಾಹನ ತಯಾರಕರು ಬುಕ್ಕಿಂಗ್‌ಗಳನ್ನು ಪ್ರಾರಂಭಿಸಿದ್ದಾರೆ. ಕಂಪನಿಯು 2025 ರ ಮೊದಲ ನಾಲ್ಕು ತಿಂಗಳಲ್ಲಿ ಈ ಕಾರನ್ನು ಡೆಲಿವೆರಿ ಮಾಡಬಹುದಾಗಿದೆ.

ಘೋಸ್ಟ್ ಫೇಸ್‌ಲಿಫ್ಟ್‌ ವಿಶೇಷತೆಗಳು: ರೋಲ್ಸ್ ರಾಯ್ಸ್ ಘೋಸ್ಟ್ ಫೇಸ್‌ಲಿಫ್ಟ್ ಬ್ಲಾಕ್ ವಿನ್ಯಾಸದೊಂದಿಗೆ ತರಲಾಗಿದೆ. ಇದೇ ರೀತಿಯ ವಿನ್ಯಾಸವು ಸರಣಿ 2 ಕಲ್ಲಿನನ್‌ನಲ್ಲಿಯೂ ಕಂಡು ಬರುತ್ತದೆ. ಮುಂಭಾಗದ ಬಂಪರ್ ಕೆಳಗೆ ಸಣ್ಣ ಗ್ರಿಲ್ ಅನ್ನು ಒದಗಿಸಲಾಗಿದೆ. ಅದರ ಸುತ್ತಲಿನ ಎಡ್ಜ್​ಗಳಲ್ಲಿ DRL ಗಳನ್ನು ಅಳವಡಿಸಲಾಗಿದೆ. ಈ ವಾಹನದ ಹಿಂಭಾಗದ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಟೈಲ್‌ಲೈಟ್‌ಗಳೊಂದಿಗೆ ಹೊಸ ಲುಕ್​ ನೀಡಲಾಗಿದೆ. ಈ ವಾಹನದಲ್ಲಿ ಎರಡು ರೀತಿಯ 22 ಇಂಚಿನ ಅಲಾಯ್​ ವ್ಹೀಲ್​ಗಳನ್ನು ಅಳವಡಿಸಲು ಅವಕಾಶವಿದೆ.

ಎಂಜಿನ್​ ಪವರ್​: ರೋಲ್ಸ್ ರಾಯ್ಸ್ ಘೋಸ್ಟ್ ಫೇಸ್‌ಲಿಫ್ಟ್‌ನ ಹೊಸ ಮಾದರಿಯಲ್ಲಿ ವಾಹನ ತಯಾರಕರು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹಿಂದಿನ ಮಾದರಿಯಂತೆ, ಈ ವಾಹನವು 6.75-ಲೀಟರ್, ಟ್ವಿನ್-ಟರ್ಬೊ V12 ಎಂಜಿನ್ ಅನ್ನು ಹೊಂದಿದೆ. ಇದು 8-ಸ್ಪೀಡ್ ಆಟೋಮೆಟಿಕ್​ ಗೇರ್‌ಬಾಕ್ಸ್‌ಗೆ ಸಹ ಜೋಡಿಸಲಾಗಿದೆ. ಘೋಸ್ಟ್ ಫೇಸ್‌ಲಿಫ್ಟ್‌ನ ಪ್ರಮಾಣಿತ ಮತ್ತು ವಿಸ್ತೃತ ಆವೃತ್ತಿಗಳಲ್ಲಿ ಸ್ಥಾಪಿಸಲಾದ ಎಂಜಿನ್ 563 hp ಪವರ್​ ಅನ್ನು ಒದಗಿಸುತ್ತದೆ ಮತ್ತು 850 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯಲ್ಲಿ, ಅದೇ ಎಂಜಿನ್ 592 bhp ಪವರ್ ಮತ್ತು 900 Nm ಟಾರ್ಕ್ ಉತ್ಪಾದಿಸುತ್ತದೆ.

ಓದಿ: ಮಾರಾಟದಲ್ಲಿ ಮಿಂಚುತ್ತಿರುವ ಕಿಯಾ ಸೋನೆಟ್ ಫೇಸ್‌ಲಿಫ್ಟ್: ಕೇವಲ 11 ತಿಂಗಳಲ್ಲಿ 1 ಲಕ್ಷ ಯುನಿಟ್​ ಮಾರಾಟ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.