ETV Bharat / technology

ಸ್ಟನ್ನಿಂಗ್​ ಲುಕ್​ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಾರುತಿ ಸುಜುಕಿ ಡಿಜೈರ್​, ಪ್ರೀ ಬುಕಿಂಗ್​ ಶುರು - 2024 MARUTI DZIRE BOOKING

2024 Maruti Suzuki Dzire: 2024 ಮಾರುತಿ ಸುಜುಕಿ ಡಿಜೈರ್ ಈ ತಿಂಗಳು ಬಿಡುಗಡೆ ಮಾಡಲಾಗುವುದು. ಈ ಹಿನ್ನೆಲೆ ಕಂಪನಿಯು ಪ್ರೀ ಬುಕಿಂಗ್​ ಆರಂಭಿಸಿದೆ. ಇದರ ವೈಶಿಷ್ಟ್ಯಗಳು ಸೇರಿದಂತೆ ಇತರೆ ಮಾಹಿತಿಗಳು ಇಲ್ಲಿವೆ ನೋಡಿವೆ.

2024 MARUTI SUZUKI DZIRE FEATURES  MARUTI DZIRE 2024 SPECIFICATIONS  2024 MARUTI SUZUKI DZIRE LAUNCH  2024 MARUTI SUZUKI DZIRE
ಮಾರುತಿ ಸುಜುಕಿ ಡಿಜೈರ್ (Maruti Suzuki India)
author img

By ETV Bharat Tech Team

Published : Nov 6, 2024, 1:46 PM IST

2024 Maruti Suzuki Dzire: ಮುಂದಿನ ಕೆಲವೇ ದಿನಗಳಲ್ಲಿ ಹೊಚ್ಚ ಹೊಸ ಕಾರೊಂದು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ದೇಶಿಯ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ತನ್ನ ಅಪ್​ಡೇಟ್​ ಮಾರುತಿ ಸುಜುಕಿ ಡಿಜೈರ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಬಿಡುಗಡೆಯ ಮೊದಲು, ಕಂಪನಿಯು ಮಾರುಕಟ್ಟೆಯಲ್ಲಿ ಈ ಕಾಂಪ್ಯಾಕ್ಟ್ ಸೆಡಾನ್‌ಗಾಗಿ ಪ್ರಿ-ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಕಾರು ಖರೀದಿಸಲು ಬಯಸುವವರು ಕೇವಲ ರೂ. 11 ಸಾವಿರ ಆರಂಭಿಕ ಬುಕಿಂಗ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು.

ನಾಲ್ಕನೇ ತಲೆಮಾರಿನ ಮಾರುತಿ ಡಿಜೈರ್ ಅನ್ನು ನವೆಂಬರ್ 11, 2024 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಈ ಕಾರನ್ನು ಅದರ ಹಳೆಯ ಮಾದರಿಯ ಮುಂಭಾಗ ಮತ್ತು ಹಿಂಭಾಗದ ಭಾಗಗಳನ್ನು ಅಪ್​ಡೇಟ್​ ಮಾಡುವ ಮೂಲಕ ವಿನ್ಯಾಸಗೊಳಿಸಲಾಗಿದೆ. ಕಾಂಪ್ಯಾಕ್ಟ್ ಸೆಡಾನ್ ಹೊಸ ಇಂಟೀರಿಯರ್ ಜೊತೆಗೆ ಸೆಗ್ಮೆಂಟ್-ಫಸ್ಟ್ ಸನ್‌ರೂಫ್ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ರಸ್ತೆಗೆ ಕಾಲಿಡಲಿದೆ.

2024 ಮಾರುತಿ ಡಿಜೈರ್ ಪವರ್‌ಟ್ರೇನ್: ಹೊಸ ಮಾರುತಿ ಡಿಜೈರ್ ಸಹ ಮಾರುತಿ ಸ್ವಿಫ್ಟ್ 1.2-ಲೀಟರ್, 3-ಸಿಲಿಂಡರ್ Z-ಸರಣಿ ಪೆಟ್ರೋಲ್ ಎಂಜಿನ್‌ನೊಂದಿಗೆ ರನ್​ ಆಗುತ್ತದೆ. ಈ ಎಂಜಿನ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಒಳಗೊಂಡಿದೆ. ಈ ಎಂಜಿನ್ 80 bhp ಪವರ್ ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಈ ಕಾರಿನ ಸಿಎನ್‌ಜಿ ರೂಪಾಂತರವನ್ನು ನಂತರ ಪರಿಚಯಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಮಾರುತಿ ಸುಜುಕಿ ತನ್ನ ಡಿಜೈರ್ ಬ್ರಾಂಡ್ ಅನ್ನು 2008 ರಲ್ಲಿ ಮೊದಲು ಪ್ರಾರಂಭಿಸಿತು. ಅದರ ನಂತರ ಈ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಬಿಡುಗಡೆಯಾದಾಗಿನಿಂದ ಹೆಚ್ಚು ಮಾರಾಟವಾಗುತ್ತಿರುವ ಕಾಂಪ್ಯಾಕ್ಟ್ ಸೆಡಾನ್ ಇದೀಗ ಹೊಸ ನೋಟ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ಇದರೊಂದಿಗೆ, ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಈ ಹೊಸ ತಲೆಮಾರಿನ ಅಪ್​ಡೇಟ್​​ ಕಾರಿನೊಂದಿಗೆ ತನ್ನ ಮಾರಾಟವನ್ನು ಮುಂದುವರಿಸಲು ಕಂಪನಿಯು ನಿರೀಕ್ಷಿಸುತ್ತಿದೆ. ಮಾರುತಿ ಸುಜುಕಿ 2024 ಮಾರುತಿ ಡಿಜೈರ್‌ಗಾಗಿ ಮುಂಗಡ ಬುಕಿಂಗ್‌ಗಳು ಈಗಾಗಲೇ ಅರೆನಾ ಚೈನ್ ಔಟ್‌ಲೆಟ್‌ಗಳ ಮೂಲಕ ನಡೆಯುತ್ತಿವೆ ಎಂದು ಹೇಳಿದೆ. ಖರೀದಿದಾರರು ಈ ಯಾವುದೇ ಶೋರೂಮ್‌ಗಳಲ್ಲಿ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು ಎಂದು ಅದು ಸೂಚಿಸುತ್ತದೆ.

ಓದಿ: ರಾಯಲ್​ ಎನ್​ಫೀಲ್ಡ್​ ಫಸ್ಟ್​ ಇವಿ ಲುಕ್​ ರಿವೀಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.