ETV Bharat / technology

ಫುಕುಶಿಮಾ ಪರಮಾಣು ದುರಂತಕ್ಕೆ 13 ವರ್ಷ: ಈಗ ಹೇಗಿದೆ ಸ್ಥಾವರದ ಸ್ಥಿತಿ?

ಜಪಾನ್​ನ ಫುಕುಶಿಮಾ ಪರಮಾಣು ದುರಂತ ಸಂಭವಿಸಿ ಇಂದಿಗೆ 13 ವರ್ಷಗಳಾಗಿವೆ.

Japan marks 13 years since massive tsunami disaster

author img

By ETV Bharat Karnataka Team

Published : Mar 11, 2024, 5:09 PM IST

ಟೋಕಿಯೊ, ಜಪಾನ್​: ಇಲ್ಲಿನ ಉತ್ತರ ಕರಾವಳಿಯಲ್ಲಿ ಭೀಕರ ಭೂಕಂಪ ಮತ್ತು ಸುನಾಮಿಯ ದುರಂತ ಸಂಭವಿಸಿ ಇಂದಿಗೆ 13 ವರ್ಷಗಳು ಕಳೆದಿವೆ. ಈ ದುರಂತದಲ್ಲಿ ಸುಮಾರು 20,000 ಜನ ಸಾವಿಗೀಡಾದರು. ಸಂಪೂರ್ಣ ಪಟ್ಟಣಗಳು ಈ ಘಟನೆಯಲ್ಲಿ ನಾಶವಾದವು. ಇದರಿಂದ ಇಡೀ ದೇಶದಲ್ಲಿ ಪರಮಾಣು ವಿಕಿರಣದ ಭೀತಿಯನ್ನು ಸೃಷ್ಟಿಸಿತು. ಈ ದುರಂತ ಸಂಭವಿಸಿ 13 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅಣು ಸ್ಥಾವರದಲ್ಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಈಗ ಏನಾಗುತ್ತಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

13 ವರ್ಷಗಳ ಹಿಂದೆ ಏನಾಗಿತ್ತು?: ಮಾರ್ಚ್ 11, 2011 ರಂದು 9.0 ತೀವ್ರತೆಯ ಭೂಕಂಪ ಸಂಭವಿಸಿ ಉತ್ತರ ಕರಾವಳಿ ಪಟ್ಟಣಗಳಾದ ಇವಾಟೆ, ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳಲ್ಲಿ ಭಾರಿ ಸುನಾಮಿ ಉಂಟಾಗಿತ್ತು. ಕೆಲ ಪ್ರದೇಶಗಳಲ್ಲಿ 15 ಮೀಟರ್ (50 ಅಡಿ) ಎತ್ತರಕ್ಕೆ ಪುಟಿದ ಸುನಾಮಿ ಪರಮಾಣು ಸ್ಥಾವರಕ್ಕೆ ಅಪ್ಪಳಿಸಿ, ಅದರ ವಿದ್ಯುತ್ ಸರಬರಾಜು ಮತ್ತು ಇಂಧನ ತಂಪಾಗಿಸುವ ವ್ಯವಸ್ಥೆಗಳನ್ನು ನಾಶಪಡಿಸಿತು ಮತ್ತು ರಿಯಾಕ್ಟರ್ ಸಂಖ್ಯೆ 1, 2 ಮತ್ತು 3 ಗಳ ನಾಶಕ್ಕೆ ಕಾರಣವಾಯಿತು. ಹೈಡ್ರೋಜನ್ ಸ್ಫೋಟಗಳು ಈ ಪ್ರದೇಶದಲ್ಲಿ ಭಾರಿ ವಿಕಿರಣ ಸೋರಿಕೆ ಮತ್ತು ಮಾಲಿನ್ಯಕ್ಕೆ ಕಾರಣವಾದವು.

ಸುನಾಮಿ ಬರಲಿದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ ಎಂದು ಆಗ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಹೋಲ್ಡಿಂಗ್ಸ್ ಹೇಳಿತ್ತು. ಸುರಕ್ಷತಾ ನಿರ್ಲಕ್ಷ್ಯ, ನಿಯಂತ್ರಕರ ನಿರ್ಲಕ್ಷ್ಯ ಮತ್ತು ಒಳಸಂಚುಗಳ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಎಂದು ಸರ್ಕಾರ ಮತ್ತು ಸ್ವತಂತ್ರ ತನಿಖೆಗಳು ಮತ್ತು ಕೆಲ ನ್ಯಾಯಾಲಯದ ತೀರ್ಪುಗಳು ತಿಳಿಸಿವೆ. ಅಂದಿನಿಂದ ಜಪಾನ್ ಕಠಿಣ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಂಡಿದೆ ಮತ್ತು ಒಂದು ಹಂತದಲ್ಲಿ ಪರಮಾಣು ಶಕ್ತಿಯ ಬಳಕೆ ನಿಲ್ಲಿಸುವ ಹಂತಕ್ಕೆ ಬಂದಿತ್ತು. ಆದರೆ, ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಸರ್ಕಾರವು ಆ ನೀತಿಯನ್ನು ಕೈಬಿಟ್ಟು ವಿದ್ಯುತ್ ಸರಬರಾಜಿನ ಮುಖ್ಯ ಮೂಲವಾಗಿ ಮತ್ತೆ ಪರಮಾಣು ಶಕ್ತಿಯನ್ನು ಬಳಸಲು ಮುಂದಾಗಿದ್ದಾರೆ.

ಆ ಪ್ರದೇಶದ ಜನರ ಪರಿಸ್ಥಿತಿ ಏನಾಯಿತು?: ಫುಕುಶಿಮಾದಾದ್ಯಂತ ಸ್ಥಳಾಂತರಗೊಂಡ 1,60,000 ಕ್ಕೂ ಹೆಚ್ಚು ನಿವಾಸಿಗಳ ಪೈಕಿ ಸುಮಾರು 20,000 ಜನರು ಇನ್ನೂ ಮನೆಗೆ ಮರಳಿಲ್ಲ. ಹೆಚ್ಚು ಹಾನಿಗೊಳಗಾದ ಪಟ್ಟಣ ಮತ್ತು ಫುಕುಶಿಮಾ ಡೈಚಿ ಸ್ಥಾವರದ ಸಹ - ಆತಿಥ್ಯ ಹೊಂದಿರುವ ಫುಟಾಬಾದಲ್ಲಿ, 2022 ರಲ್ಲಿ ಒಂದು ಸಣ್ಣ ಪ್ರದೇಶವನ್ನು ತೆರೆಯಲಾಯಿತು. ಸುಮಾರು 100 ಜನರು ಅಥವಾ ವಿಪತ್ತು ಪೂರ್ವ ಜನಸಂಖ್ಯೆಯ 1.5 ಪ್ರತಿಶತದಷ್ಟು ಜನರು ಮತ್ತೆ ಅಲ್ಲಿ ವಾಸಿಸಲು ಮರಳಿದ್ದಾರೆ.

ಸಂಸ್ಕರಿಸಿದ ವಿಕಿರಣಶೀಲ ನೀರಿನ ಬಿಡುಗಡೆ: ಕಳೆದ ಆಗಸ್ಟ್​ನಲ್ಲಿ ಫುಕುಶಿಮಾ ಡೈಚಿ ಸಂಸ್ಕರಿಸಿದ ಪರಮಾಣು ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲು ಪ್ರಾರಂಭಿಸಿತು ಮತ್ತು ಪ್ರಸ್ತುತ ನಾಲ್ಕನೇ 7,800 ಟನ್ ಸಂಸ್ಕರಿಸಿದ ನೀರನ್ನು ಬಿಡುಗಡೆ ಮಾಡುತ್ತಿದೆ. ಇಲ್ಲಿಯವರೆಗೆ, ದೈನಂದಿನ ಸಮುದ್ರದ ಮಾದರಿ ಫಲಿತಾಂಶಗಳು ಸುರಕ್ಷತಾ ಮಾನದಂಡಗಳನ್ನು ಪೂರೈಸಿವೆ. ಈ ಯೋಜನೆಯು ಸ್ಥಳೀಯ ಮೀನುಗಾರರು ಮತ್ತು ನೆರೆಯ ದೇಶಗಳಿಂದ, ವಿಶೇಷವಾಗಿ ಜಪಾನಿನ ಸಮುದ್ರಾಹಾರ ಆಮದನ್ನು ನಿಷೇಧಿಸಿರುವ ಚೀನಾದಿಂದ ಪ್ರತಿಭಟನೆಗಳನ್ನು ಎದುರಿಸಿದೆ.

ಕರಗಿದ ಇಂಧನ ಹೊರಹಾಕುವ ಸಮಸ್ಯೆ: ಮೂರು ರಿಯಾಕ್ಟರ್​​ಗಳ ವಿಷಯಗಳು ಇನ್ನೂ ಹೆಚ್ಚಾಗಿ ರಹಸ್ಯವಾಗಿಯೇ ಉಳಿದಿವೆ. ಉದಾಹರಣೆಗೆ, ಕರಗಿದ ಇಂಧನದ ಸ್ಥಿತಿಯ ಬಗ್ಗೆ ಅಥವಾ ಅದು ರಿಯಾಕ್ಟರ್ ಗಳಲ್ಲಿ ಅದು ನಿಖರವಾಗಿ ಎಲ್ಲಿದೆ ಎಂಬುದರ ಬಗ್ಗೆ ಹೆಚ್ಚು ತಿಳಿದಿಲ್ಲ. ಒಂದು ಚಮಚದಷ್ಟು ಇಂಧನವನ್ನು ಸಹ ಇನ್ನೂ ತೆಗೆದುಹಾಕಲಾಗಿಲ್ಲ. ಹಾನಿಗೊಳಗಾದ ಮೂರು ರಿಯಾಕ್ಟರ್ ಗಳಲ್ಲಿ ಸುಮಾರು 880 ಟನ್ ಕರಗಿದ ಪರಮಾಣು ಇಂಧನ ಉಳಿದಿದೆ ಮತ್ತು ಅದನ್ನು ತೆಗೆದುಹಾಕಲು 30-40 ವರ್ಷಗಳು ಬೇಕಾಗುತ್ತದೆ ಎಂದು ಜಪಾನಿನ ಅಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ : ಸ್ಯಾಮ್​ಸಂಗ್​ ಎಐ ಸಾಮರ್ಥ್ಯದ ವಾಶರ್-ಡ್ರೈಯರ್ 2ನೇ ತ್ರೈಮಾಸಿಕದಲ್ಲಿ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.