ETV Bharat / state

'ನೀವು ಇನ್ನು ರಾಜಕೀಯ ಶಿಶು, ಪದೇ ಪದೆ ಸಿಎಂ ಬದಲಾವಣೆ ಹೇಳಿಕೆ ನೀಡಿದರೆ ಸರಿ ಇರಲ್ಲ': ಶಾಸಕ‌ ಶಿವಗಂಗಾಗೆ ಕುರುಬ ಸಂಘದ ಎಚ್ಚರಿಕೆ - CM change issue - CM CHANGE ISSUE

''ನೀವು ಇನ್ನು ರಾಜಕೀಯ ಶಿಶು, ಸಿಎಂ ಬದಲಾವಣೆ ಅಭಿಪ್ರಾಯ ಹೈಕಮಾಂಡ್​ಗೆ ತಿಳಿಸಿ. ಆದರೆ, ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿದರೆ ಸರಿ ಇರೋದಿಲ್ಲ'' ಎಂದು ಜಿಲ್ಲಾ ಕುರುಬ ಸಂಘದ ಪದಾಧಿಕಾರಿಗಳು ಶಾಸಕ‌ ಶಿವಗಂಗಾ ಬಸವರಾಜ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

MLA Sivaganga Basavaraj  Kuruba Sangh  Davanagere
'ನೀವು ಇನ್ನು ರಾಜಕೀಯ ಶಿಶು, ಪದೇ ಪದೇ ಸಿಎಂ ಬದಲಾವಣೆ ಹೇಳಿಕೆ ನೀಡಿದರೆ ಸರಿ ಇರಲ್ಲ': ಕುರುಬ ಸಂಘ ಶಾಸಕ‌ ಶಿವಗಂಗಾ ಬಸವರಾಜ್ ಎಚ್ಚರಿಕೆ (ETV Bharat)
author img

By ETV Bharat Karnataka Team

Published : Jul 1, 2024, 4:05 PM IST

ಕುರುಬ ಸಂಘದಿಂದ ಶಾಸಕ‌ ಶಿವಗಂಗಾ ಬಸವರಾಜ್ ಎಚ್ಚರಿಕೆ (ETV Bharat)

ದಾವಣಗೆರೆ: ''ನೀವು ಇನ್ನು ರಾಜಕೀಯ ಶಿಶು, ಒಂದು ವರ್ಷದಲ್ಲಿ ಕ್ಷೇತ್ರದಲ್ಲಿ ಏನ್ ಅಭಿವೃದ್ಧಿ ಮಾಡಿದ್ದೀರಿ, ನಿಮಗೆ ಧೈರ್ಯ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷೇತರನಾಗಿ ನಿಂತು ಗೆದ್ದು ತೋರಿಸಿ. ಆದರೆ, ಸಿಎಂ ಬದಲಾವಣೆ ಅಭಿಪ್ರಾಯ ಹೈಕಮಾಂಡ್​​ಗೆ ತಿಳಿಸಿ, ಪದೇ ಪದೆ ಸಿಎಂ ಬದಲಾವಣೆ ಹೇಳಿಕೆ ನೀಡಿದರೆ ಸರಿ ಇರುವುದಿಲ್ಲ'' ಎಂದು ಚನ್ನಗಿರಿ ಶಾಸಕ‌ ಶಿವಗಂಗಾ ಬಸವರಾಜ್​ಗೆ ಜಿಲ್ಲಾ ಕುರುಬ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ''ಡಿಕೆ ಶಿವಕುಮಾರ್​ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೇಳಿಕೆ ನೀಡಿದ್ದೀರಿ, ಈ ರೀತಿ ಬಹಿರಂಗ ಹೇಳಿಕೆಯಿಂದ ಸಿಎಂ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ, ನಿಮ್ಮ ಅಭಿಪ್ರಾಯ ಪಕ್ಷದಲ್ಲಿ ಆಂತರಿಕವಾಗಿ ಹಂಚಿಕೊಳ್ಳಬೇಕು, ನಿಮ್ಮ ಅಭಿಪ್ರಾಯ ಹೈ ಕಮಾಂಡ್​ಗೆ ತಿಳಿಸಿ, ಸಿಎಂ ಬದಲಾವಣೆ ಮಾಡಲಿ, ಅದನ್ನ ಬಿಟ್ಟು ಅನಾವಶ್ಯಕ ಹೇಳಿಕೆ ನೀಡಬಾರದು'' ಎಂದು ಕಿಡಿಕಾರಿದರು.

''ನಿಮ್ಮ ಕ್ಷೇತ್ರದಲ್ಲೇ ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ. ಹುಟ್ಟುಹಬ್ಬದ ದಿನ ಎಲ್ಲ ಅಧಿಕಾರಿಗಳನ್ನು ಕರೆದುಕೊಂಡು ರೆಸಾರ್ಟ್​ನಲ್ಲಿ ಆಚರಿಸಿಕೊಂಡಿದ್ದೀರಿ. ಒಂದೂವರೆ ವರ್ಷ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಅಂತಾ ನಮಗೆ ಗೊತ್ತಿದೆ. ಸಿಎಂ ಬದಲಾವಣೆ ಮಾಡಿ ಅನ್ನೋ ಮಟ್ಟಕ್ಕೆ ನೀವು ಬೆಳೆದಿಲ್ಲ. ಇದೇ ರೀತಿ ಹೇಳಿಕೆ ಕೊಟ್ಟರೆ ನಿಮ್ಮ ಕ್ಷೇತ್ರದಲ್ಲೇ ಪ್ರತಿಭಟನೆ ಮಾಡಲಾಗುತ್ತೆ. ಕಾಂಗ್ರೆಸ್​ನಿಂದ ಗೆಲವು ಸಾಧಿಸಿದ್ದೀರಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ವೈಯಕ್ತಿಕವಾಗಿ ಗೆದ್ದು ಬನ್ನಿ. ಸಿಎಂ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡಿದರೆ ನಿಮ್ಮ ಮನೆ ಮುಂದೆ ಬಂದು ಇಡೀ ಅಹಿಂದಾ ಮತ್ತು ಕುರುಬ ಸಮಾಜದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರನ್ನು ಅ ಸ್ಥಾನದಿಂದ ಕೆಳಗೆ ಇಳಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ. ರೀತಿಯ ದುಸ್ಸಾಹಸಕ್ಕೆ ಕೈ ಹಾಕಬಾರದು'' ಎಂದು ಅವರು ಗರಂ ಆದರು.

ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ: ''ಸಿಎಂ ಸಿದ್ದರಾಮಯ್ಯ ಬದಲಾವಣೆ ಮಾಡಬೇಕೆಂದು ಹೇಳುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ಆದರೆ, ನೀವು ಪದೇ ಪದೆ ಸಿಎಂ ಬದಲಾವಣೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದೀರಿ , ಹೀಗೆ ಮುಂದುವರೆದರೆ ನಿಮ್ಮ ನಿವಾಸದ ಮುಂದೆ ಇಡೀ ದಾವಣಗೆರೆ ಜಿಲ್ಲಾ ಕುರುಬ ಸಮುದಾಯದವರು ಪ್ರತಿಭಟನೆ ನಡೆಸಬೇಕಾಗುತ್ತದೆ'' ಎಂದು ಜಿಪಂ ಮಾಜಿ ಸದಸ್ಯ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿಎಂ-ಡಿಸಿಎಂ ಹುದ್ದೆ ಜಟಾಪಟಿಗೆ ತೆರೆ ಎಳೆಯಲು ಹೈಕಮಾಂಡ್ ತಾಕೀತು: ಸಂಪುಟ ಪುನಾರಚನೆಗೆ ಸೂಚನೆ? - Congress High Command

ETV Bharat Logo

Copyright © 2024 Ushodaya Enterprises Pvt. Ltd., All Rights Reserved.