ETV Bharat / state

ಮುಡಾ ಹಣ ಅಭಿವೃದ್ದಿಗೆ ಮಾತ್ರ ಬಳಕೆಯಾಗುತ್ತಿದೆ, ಇದರಲ್ಲಿ ತಪ್ಪೇನು? : ಯತೀಂದ್ರ ಸಿದ್ದರಾಮಯ್ಯ - Yatindra Siddaramaiah

ವಿಧಾನಪರಿಷತ್​ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಡಾ ಹಣದ ಕುರಿತು ಮಾತನಾಡಿದ್ದಾರೆ. ಮುಡಾ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಮುಡಾ ಹಣ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ.

yatindra-siddaramaiah
ವಿಧಾನಪರಿಷತ್​ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Sep 21, 2024, 7:15 PM IST

ಮೈಸೂರು : ನಮ್ಮ ತಂದೆ ಮೇಲೆ ಮಾಡುತ್ತಿರುವ ಆರೋಪಗಳೆಲ್ಲಾ ಬೋಗಸ್‌. ಅವರು ಸುಮ್ಮನೆ ಆರೋಪ ಮಾಡುತ್ತಿರುವ ಎಲ್ಲರಿಗೂ ಉತ್ತರ ಕೊಟ್ಟು, ರಾಜೀನಾಮೆ ಕೊಡಲು ಸಾ‍ಧ್ಯವಿಲ್ಲ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಅರಮನೆಯ ಬಳಿ ಮಾ‍ಧ್ಯಮಗಳ ಜತೆ ಮಾತನಾಡಿದ ಅವರು, ಮುಡಾ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ದಿಗೆ ಮಾತ್ರ ಮುಡಾ ಹಣ ಬಳಕೆಯಾಗುತ್ತಿದೆ. ಇದರಲ್ಲಿ ತಪ್ಪೇನು?. ಜನರ ಹಣ ಇರುವುದು ಮುಡಾ ವ್ಯಾಪ್ತಿಯ ಪ್ರದೇಶಗಳ ಅಭಿವೃದಿಗೆ ಮಾತ್ರ. ಆದ್ದರಿಂದ ಮುಡಾ ವ್ಯಾಪ್ತಿಗೆ ಮಾತ್ರ ಬಳಸಲಾಗುತ್ತಿದೆ. ಎಲ್ಲ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇತ್ತೀಚಿಗೆ ನಮ್ಮ ತಂದೆ ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳು ಬೋಗಸ್‌ ಎಂದರು.

ವಿಧಾನಪರಿಷತ್​ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ (ETV Bharat)

ಸರ್ಕಾರದ ಮೇಲೆ ಆರೋಪ ಮಾಡಲು ಹಾಗೂ ಮಾತನಾಡಲು ಯಾವ ವಿಷಯಗಳೂ ಸಿಗುತ್ತಿಲ್ಲ. ಜನರ ಖಾತೆಗಳಿಗೆ ಗ್ಯಾರಂಟಿ ಯೋಜನೆ ಮೂಲಕ ಹಣ ಹಾಕುತ್ತಿರುವ ಸರ್ಕಾರ ನಮ್ಮದು. ಇಂತಹ ಯೋಜನೆಗಳನ್ನ ಸಹಿಸಲು ಆಗದವರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಹಾಗೂ ನಮ್ಮ ತಂದೆಯ ರಾಜೀನಾಮೆ ಕೇಳುತ್ತಿದ್ದಾರೆ. ಎಲ್ಲ ಆರೋಪಗಳಿಗೂ ರಾಜೀನಾಮೆ ಕೊಡುತ್ತಾ ಹೋದರೆ ಇದರಲ್ಲಿ ಅರ್ಥ ಏನು? ಆದ್ದರಿಂದ ನಮ್ಮ ಸಿದ್ದರಾಮಯ್ಯ ವಿರುದ್ದ ಮಾಡುತ್ತಿರುವ ಎಲ್ಲಾ ಆರೋಪಗಳು ಬೋಗಸ್‌ ಎಂದ ಅವರು, ಮುನಿರತ್ನ ಪ್ರಕರಣದ ಬಗ್ಗೆ ಅಷ್ಟಾಗಿ ಗೊತ್ತಿಲ್ಲವೆಂದರು.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ಹೆಚ್​ಡಿಕೆ ಗಂಭೀರ ಆರೋಪ: ಯಾರ ಸೈಟ್​​ನಲ್ಲಿ​ ಮನೆ ಕಟ್ಟಿದ್ದೀರಾ ಎಂದು ಸಿಎಂಗೆ ಪ್ರಶ್ನೆ - h d kumaraswamy reaction on cm

ETV Bharat Logo

Copyright © 2024 Ushodaya Enterprises Pvt. Ltd., All Rights Reserved.