ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಬಳಿ ಸಿಡಿಲು ಬಡಿದು ಕುರಿಗಾಹಿಯೊಬ್ಬ ಹಾಗೂ ಏಳು ಕುರಿಗಳು ಸಾವಿಗೀಡಾಗಿರುವ ಘಟನೆ ನಡೆದಿದೆ. ವಿಭೂತಿಹಳ್ಳಿ ಗ್ರಾಮದ ಗೋವಿಂದಪ್ಪ (22) ಮೃತ ಕುರಿಗಾಹಿ.
ಗ್ರಾಮದ ಮಹ್ಮದ್ ಕಾಶಿಮ್ ಅವರ ಹೊಲದಲ್ಲಿ ವಾಸ್ತವ್ಯ ಹೂಡಿದ್ದ ಕುರಿ ಹಟ್ಟಿಯಲ್ಲಿ ಮೃತ ಕುರಿಗಾಹಿ ಮಲಗಿದ್ದನು. ಈ ವೇಳೆ, ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ. ಕುರಿಗಾಯಿ ಗೋವಿಂದಪ್ಪನಿಗೆ ಸೋಮವಾರ ಬೆಳಗಿನ ಜಾವ ಸಿಡಿಲು ಬಡಿದು ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಟ್ಟಿಯಲ್ಲಿದ್ದ 17 ಕುರಿಗಳು ಸಿಡಿಲು ಬಡಿದು ಸಾವುನ್ನಪ್ಪಿವೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಭೂತಿಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾದ ಯುವಕ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ. ಯುವಕನು ಮೃತಪಟ್ಟಿದ್ದರಿಂದ ಆ ಕುಟುಂಬ ಬೀದಿಗೆ ಬಂದಿದೆ. ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಹಾಗೂ ಪ್ರತಿ ಕುರಿಗೆ 25 ಸಾವಿರ ರೂ ಪರಿಹಾರ ಒದಗಿಸಬೇಕೆಂದು ಗ್ರಾಮದ ಮುಖಂಡ ಪರ್ವತ ರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸೋಮವಾರ ಬೆಳಗಿನ ಜಾವ ಮಳೆ ಬರುತ್ತಿದ್ದ ವೇಳೆ ಸಿಡಿಲು ಬಡಿದು ಗೋವಿಂದ ಮೃತಪಟ್ಟಿದ್ದು, ಜತೆಗೆ ಕುರಿಗಳು ಸಾವುನ್ನಪ್ಪಿದ್ದು, ಇನ್ನುಳಿದ ಕುರಿಗಳಿಗೆ ಗಾಯಗಳಾಗಿವೆ.
ಇದನ್ನೂಓದಿ:ಶಿವಮೊಗ್ಗ: ಜಮೀನು ವಿವಾದ, ಕುಡಗೋಲಿನಿಂದ ಹಲ್ಲೆ ಮಾಡಿ ಯುವಕನ ಕೊಲೆ - ಓರ್ವನ ಬಂಧನ - young man Murder