ಬೆಳಗಾವಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮೀ ಹಣವನ್ನು ಜನರು ನಾನಾ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಈಗ ಬಡ ರೈತ ಕುಟುಂಬವೊಂದು ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಎಂದು ಗೃಹಲಕ್ಷ್ಮೀ ಹಣ ಕೂಡಿಟ್ಟು ಎತ್ತು ಖರೀದಿಸಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತವಗ ಗ್ರಾಮದ ಬಸವ್ವ ಶಿವಪ್ಪ ಬುಳ್ಳಿ ದಂಪತಿ ಎತ್ತು ಖರೀದಿಸಿದ್ದಾರೆ. 22 ಸಾವಿರ ರೂ. ಹಣದಿಂದ ಒಂದು ಎತ್ತನ್ನು ಖರೀದಿಸಿದ್ದಾರೆ. ಈ ಹಿಂದೆ ಇವರ ಮನೆಯಲ್ಲಿ ಒಂದೇ ಎತ್ತು ಇತ್ತು. ಇದರಿಂದ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಿತ್ತು. ಮತ್ತೊಂದು ಎತ್ತು ಖರೀದಿಸಬೇಕು ಎಂದರೆ ಹಣದ ಅಭಾವವಿತ್ತು. ಹಾಗಾಗಿ, 11 ತಿಂಗಳ ಗೃಹಲಕ್ಷ್ಮೀ ಹಣವನ್ನು ಸೇರಿಸಿದ ಬಸವ್ವ ಒಂದು ಎತ್ತು ಖರೀದಿಸಿದ್ದಾರೆ.
ಬಸವ್ವ ಹಾಗೂ ಶಿವಪ್ಪ ದಂಪತಿ ವಯೋವೃದ್ಧರಾಗಿದ್ದು, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಬಸವ್ವ ಅವರ ಮನೆಗೆ ಗೋಕಾಕ್ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಾಂತೇಶ ಕಡಾಡಿ ಭೇಟಿ ನೀಡಿದರು.
ಇದನ್ನೂ ಓದಿ: ಹೊಸ ಬೈಕ್ ಖರೀದಿಗೆ ನೆರವಾದ ತಾಯಿ, ಸೊಸೆಯ ಗೃಹಲಕ್ಷ್ಮಿ ಯೋಜನೆ ಹಣ
ಬಸವ್ವ ಬುಳ್ಳಿ ಮಾತನಾಡಿದ್ದು, ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹಲಕ್ಷ್ಮೀ ಯೋಜನೆ ನಿಜವಾಗಲೂ ನಮ್ಮ ಬಾಳಿಗೆ ಬೆಳಕಾಗಿದೆ. ಒಂಟಿ ಎತ್ತಿನಿಂದ ಕೃಷಿ ಮಾಡುತ್ತಿದ್ದೆವು. ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟು, ಈಗ ಮತ್ತೊಂದು ಎತ್ತನ್ನು ಖರೀದಿಸಿದ್ದೇವೆ. ಇದರಿಂದ ತುಂಬಾ ಅನುಕೂಲ ಆಗಿದೆ. ಮುಖ್ಯಮಂತ್ರಿಗಳಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ'' ಎಂದು ಹೇಳಿದರು.
ಇದನ್ನೂ ಓದಿ: 'ಗೃಹಲಕ್ಷ್ಮಿ' ತಂದ ಸೌಭಾಗ್ಯ; ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟ ಅತ್ತೆ - A FANCY STORE
ಇದನ್ನೂ ಓದಿ: ಬೆಳಗಾವಿ: ಗೃಹಲಕ್ಷ್ಮಿ ಹಣ, ಗೌರವ ಧನದಿಂದ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ಮಹಿಳೆ