ETV Bharat / state

Watch: ಚಿಕ್ಕಮಗಳೂರು ನಗರ ಪ್ರದೇಶಕ್ಕೆ ಒಂಟಿ ಸಲಗದ ದಾಳಿ: ಜಾನುವಾರುಗಳನ್ನು ಅಟ್ಟಾಡಿಸಿದ ಕಾಡಾನೆ - WILD ELEPHANT ATTACK

ಚಿಕ್ಕಮಗಳೂರು ನಗರದ ಕೆಲವೆಡೆ ಒಂಟಿ ಸಲಗ ದಾಳಿ ನಡೆಸಿದೆ.

author img

By ETV Bharat Karnataka Team

Published : May 10, 2024, 7:01 PM IST

Updated : May 10, 2024, 7:57 PM IST

wild-elephant
ಚಿಕ್ಕಮಗಳೂರು ನಗರ ಪ್ರದೇಶಕ್ಕೆ ಒಂಟಿ ಸಲಗ ದಾಳಿ (ETV Bharat)
ಚಿಕ್ಕಮಗಳೂರು ನಗರ ಪ್ರದೇಶಕ್ಕೆ ಒಂಟಿ ಸಲಗದ ದಾಳಿ (ETV Bharat)

ಚಿಕ್ಕಮಗಳೂರು : ಇಷ್ಟು ದಿನಗಳ ಕಾಲ ಮಲೆನಾಡು ಭಾಗ ಕಾಫಿ ತೋಟ ಹಾಗೂ ಕಾಡಂಚಿನ ತೋಟಗಳಿಗೆ ಭೇಟಿ ನೀಡುತ್ತಿದ್ದ ಕಾಡಾನೆಗಳು ಈಗ ನಗರ ಪ್ರದೇಶಗಳಿಗೆ ನುಗ್ಗಲು ಪ್ರಾರಂಭ ಮಾಡಿವೆ. ಈ ಘಟನೆಯಿಂದ ಸಾರ್ವಜನಿಕರು ಭಯಭೀತರಾಗಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಚಿಕ್ಕಮಗಳೂರು ನಗರದಲ್ಲಿ ಕಾಣಿಸಿಕೊಂಡ ಕಾಡಾನೆ ನೋಡಿ ಸಾರ್ವಜನಿಕರು ಗಾಬರಿಯಾಗಿದ್ದಾರೆ. ನಗರದ ಜಯನಗರ ಬಡಾವಣೆಯಲ್ಲಿ ಒಂಟಿ ಸಲಗ ಯಾವುದೇ ಭಯವಿಲ್ಲದೇ ಸಂಚಾರ ನಡೆಸಿದ್ದು, ನಗರದಲ್ಲಿ ಇಡೀ ರಾತ್ರಿ ಒಂಟಿ ಸಲಗ ಬಿಂದಾಸ್​ ಆಗಿ ಓಡಾಟ ನಡೆಸಿದೆ. ಜಯನಗರ ಬಡಾವಣೆ ನಿವಾಸಿಗಳಲ್ಲಿ ಕಾಡಾನೆ ಆತಂಕ ಒಂದು ಕಡೆ ಮನೆ ಮಾಡಿದರೆ, ಮೂರು ಮನೆ- ತೇಗೂರು ಗ್ರಾಮದ ಮಧ್ಯೆ ಒಂಟಿ ಸಲಗ ಪ್ರವೇಶ ಮಾಡಿ ಅಲ್ಲಿಯೂ ದಾಂಧಲೆ ಎಬ್ಬಿಸಿದೆ.

ಹಳ್ಳ ಹಾಗೂ ಗದ್ದೆ ಸಾಲಿನಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗ ನೋಡಿ ರಸ್ತೆಯಲ್ಲಿ ಸಂಚಾರ ಮಾಡಲು ಸಾರ್ವಜನಿಕರು ಭಯಪಡುತ್ತಿದ್ದಾರೆ. ಕೋಟೆ, ಕೈಗಾರಿಕಾ ಪ್ರದೇಶ, ಮೂರು ಮನೆ, ತೇಗೂರು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಸ್ಥಳೀಯರಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ.

ತೇಗೂರು, ಮೂರು ಮನೆ ಹಳ್ಳಿ ಗ್ರಾಮಗಳಲ್ಲಿ ಕಾಡಾನೆ ದಾಂಧಲೆ ಮಾಡಿದ್ದು, ಗ್ರಾಮದ ಜಾನುವಾರುಗಳನ್ನು ಒಂಟಿ ಸಲಗ ಅಟ್ಟಾಡಿಸಿದೆ. ಗ್ರಾಮದ ಮನೆಗಳ ಸುತ್ತಮುತ್ತವೇ ಆನೆ ಓಡಾಡಿದೆ. ಹೀಗಾಗಿ ಗ್ರಾಮಸ್ಥರು ಕಿರುಚಾಟ ನಡೆಸಿದ್ದಾರೆ.

ಗ್ರಾಮದ ಶ್ವಾನಗಳನ್ನು ಓಡಿಸಿಕೊಂಡು ಬಂದ ಸಲಗದ ಪುಂಡಾಟಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದು, ಗ್ರಾಮಸ್ಥರ ಕಿರುಚಾಟಕ್ಕೆ ಒಂಟಿ ಸಲಗ ಗಾಬರಿಗೊಂಡಿದೆ. ನಗರದ ಹೊರ ವಲಯದ ಗ್ರಾಮಗಳಿಗೆ ಆನೆ ಪ್ರವೇಶ ಮಾಡುತ್ತಿದ್ದು, ಯಾವ ಕ್ಷಣದಲ್ಲಿ ಯಾರ ಮೇಲೆ ದಾಳಿ ಮಾಡುತ್ತದೆ ಎಂಬ ಆತಂಕದಲ್ಲೇ ಜನರು ದಿನ ಕಳೆಯುವಂತಾಗಿದೆ.

ಇದನ್ನೂ ಓದಿ : ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಮಧ್ಯ ಬಂದು ನಿಂತ ಒಂಟಿಸಲಗ; ಟ್ರಾಫಿಕ್ ಜಾಮ್ - TUSKER ON ROAD

Last Updated : May 10, 2024, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.