ETV Bharat / state

ಬನ್ನೇರುಘಟ್ಟಕ್ಕೆ ಪ್ರಾಣಿಗಳನ್ನು ತರುತ್ತಿದ್ದ ವಾಹನ ಅಪಘಾತ: ಬಿಳಿ ಹುಲಿ, ಮೊಸಳೆಗಳು ಸೇಫ್

ಬನ್ನೇರುಘಟ್ಟಕ್ಕೆ ಕಾಡುಪ್ರಾಣಿಗಳನ್ನು ಕರೆದುಕೊಂಡು ಬರುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ.

ಮೊಸಳೆಗಳ ರಕ್ಷಣೆ
ಮೊಸಳೆಗಳ ರಕ್ಷಣೆ (ETV BHARAT)
author img

By ETV Bharat Karnataka Team

Published : Oct 17, 2024, 3:16 PM IST

ನಿರ್ಮಲ್(ತೆಲಂಗಾಣ): ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಮೃಗಾಲಯಕ್ಕೆ ಅಪರೂಪದ ಕಾಡುಪ್ರಾಣಿಗಳನ್ನು ತೆಗೆದುಕೊಂಡು ಬರುತ್ತಿದ್ದ ವಾಹನ ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ. ಆದರೆ ಇದರಲ್ಲಿದ್ದ ಪ್ರಾಣಿಗಳು ಸುರಕ್ಷಿತವಾಗಿವೆ ಎಂದು ವರದಿಯಾಗಿದೆ. ಅಪರೂಪದ ಪ್ರಭೇದಗಳಾದ ಬಿಳಿ ಹುಲಿ ಮತ್ತು ಘರಿಯಲ್ ಮೊಸಳೆಗಳು ಸೇರಿದಂತೆ ಕಾಡು ಪ್ರಾಣಿಗಳನ್ನು ಸಾಗಿಸುತ್ತಿದ್ದ ವಾಹನವು ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ.

ಬಿಹಾರದ ಪಾಟ್ನಾದ ಸಂಜಯ್ ಗಾಂಧಿ ರಾಷ್ಟ್ರೀಯ ಮೃಗಾಲಯದಿಂದ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಮೃಗಾಲಯಕ್ಕೆ ಎರಡು ವಾಹನಗಳಲ್ಲಿ ಈ ಕಾಡು ಪ್ರಾಣಿಗಳನ್ನು ಸಾಗಿಸಲಾಗುತ್ತಿತ್ತು.

ಬಿಳಿ ಹುಲಿ
ಬಿಳಿ ಹುಲಿ (ETV BHARAT)

ನಿರ್ಮಲ್ ಜಿಲ್ಲೆಯ ಮಮದಾ ಮಂಡಲದ ಮೊಂಡಿಗುಟ್ಟ ಗ್ರಾಮದ ಬಳಿ ಬುಧವಾರ ವಾಹನವು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದ ಎಂಟು ಮೊಸಳೆಗಳ ಪೈಕಿ ಎರಡನ್ನು ತಕ್ಷಣ ರಕ್ಷಿಸಲಾಯಿತು ಮತ್ತು ಸ್ಥಳೀಯ ಅರಣ್ಯ ಅಧಿಕಾರಿಗಳು ಯಾವುದೇ ಪ್ರಾಣಿಗಳು ತಪ್ಪಿಸಿಕೊಳ್ಳದಂತೆ ತ್ವರಿತ ಕ್ರಮಗಳನ್ನು ಕೈಗೊಂಡರು. ಅದೃಷ್ಟವಶಾತ್, ಅಪರೂಪದ ಬಿಳಿ ಹುಲಿ ಸೇರಿದಂತೆ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ.

ಪ್ರಾಣಿಗಳು ಸುರಕ್ಷಿತವಾಗಿ ತಮ್ಮ ಪ್ರಯಾಣವನ್ನು ಮುಂದುವರಿಸಲು ಅಧಿಕಾರಿಗಳು ಪರ್ಯಾಯ ವಾಹನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಲ್ಲಿನ ಅರಣ್ಯ ಅಧಿಕಾರಿಗಳ ಜಾಗರೂಕತೆ ಮತ್ತು ತಕ್ಷಣದ ಕಾರ್ಯಾಚರಣೆಯಿಂದ ಯಾವುದೇ ಹೆಚ್ಚಿನ ಅನಾಹುತವಾಗುವುದು ತಪ್ಪಿತು.

ಇದನ್ನೂ ಓದಿ : ಎಚ್ಚರ.. ಎಚ್ಚರ..: ನೀರಿನ ಬಿಕ್ಕಟ್ಟಿನಿಂದ ಜಾಗತಿಕ ಆಹಾರ ಉತ್ಪಾದನೆ ಮೇಲೆ ಭಾರಿ ಅಪಾಯ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.