ETV Bharat / state

ಹೋಟೆಲ್​, ರೆಸ್ಟೋರೆಂಟ್ ಆಸ್ಪತ್ರೆಗಳಿಗೆ ತಟ್ಟುತ್ತಿದೆ ನೀರಿನ ಅಭಾವದ ಬಿಸಿ - Water tanker

ಬೆಂಗಳೂರು ನಗರದ ಹಲವು ಭಾಗಗಳಲ್ಲಿ ನೀರಿನ ಕೊರತೆ ಕಂಡು ಬಂದಿದೆ.

Bangalore
ಬೆಂಗಳೂರು
author img

By ETV Bharat Karnataka Team

Published : Mar 15, 2024, 8:03 PM IST

ಬೆಂಗಳೂರು : ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮದ ಮೇಲೆ ನೀರಿನ ಅಭಾವದ ಬಿಸಿ ತಟ್ಟಿದ್ದು, ಮಾಲೀಕರಿಗೆ ನೀರು ಖರೀದಿಸುವುದೇ ದೊಡ್ಡ ತಲೆನೋವಾಗಿದೆ. ಇನ್ನೊಂದೆಡೆ ಆಸ್ಪತ್ರೆಗಳಲ್ಲೂ ಕೂಡ ನೀರಿನ ಅಭಾವ ಕಾಣುತ್ತಿದೆ. ನೀರಿನ ಟ್ಯಾಂಕರ್ ಬುಕ್ ಮಾಡಿದರೆ ಎರಡು ಮೂರು ದಿನಗಳವರೆಗೆ ಕಾಯುವ ಪರಿಸ್ಥಿತಿ ಎದುರಾಗಿದೆ. ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆೆಯುಂಟಾಗಿದ್ದು, ನಿತ್ಯದ ವ್ಯಾಪಾರದ ಜತೆಗೆ ನೀರಿನ ಅವಶ್ಯಕತೆಯ ಕಡೆಗೂ ಗಮನಹರಿಸುವುದು ಹೋಟೆಲ್​ ಮಾಲೀಕರಿಗೆ ಸಮಸ್ಯೆೆಯಾಗಿದೆ.

ಈಗಿರುವ ಬೋರ್‌ವೆಲ್‌ಗಳು ಸಂಪೂರ್ಣ ಬರಿದಾಗಿದ್ದು, ರಿಪೇರಿ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ನೀರು ಸಿಗುವುದೇ ಅನುಮಾನವಾಗಿದೆ. ಹೀಗಾಗಿ ಹೊಸ ಬೋರ್​ವೆಲ್‌ಗಳನ್ನು ತೆಗೆಯಲು ಹೋಟೆಲ್​ ಹಾಗೂ ರೆಸ್ಟೋರೆಂಟ್ ಮಾಲೀಕರು ಜಲ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹೋಟೆಲ್​ಗಳಲ್ಲಿ ನೀರನ್ನು ಹಿತ - ಮಿತವಾಗಿ ಬಳಸಲು, ಬಳಸಿ ಬಿಸಾಡುವಂತಹ ಪ್ಲೇಟ್ ಹಾಗೂ ಕಪ್‌ಗಳನ್ನು ಬಳಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಈ ರೀತಿಯ ಪ್ಲೇಟ್‌ಗಳನ್ನು ಬಳಸಲಾಗುತ್ತಿತ್ತು. ಇದೀಗ ನೀರಿನ ಕೊರತೆ ಹಿನ್ನೆೆಲೆ ಮತ್ತೆೆ ಬಳಸಿ ಬಿಸಾಡುವಂತಹ ವಸ್ತುಗಳನ್ನು ಹೋಟೆಲ್‌ಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕುಡಿಯುವ ನೀರನ್ನು ಉಳಿಸಲು ಪ್ಯಾಕೇಜ್ ವಾಟರ್ ಬಾಟೆಲ್‌ಗಳನ್ನು ಹೆಚ್ಚಾಗಿ ನೀಡಲಾಗುತ್ತಿದೆ. ಗ್ರಾಹಕರು ಬಂದ ತಕ್ಷಣ ಗಾಜಿನ ಅಥವಾ ಸ್ಟೀಲ್ ಲೋಟದಲ್ಲಿ ನೀರು ಕೊಡುವುದನ್ನು ನಿಲ್ಲಿಸಲಾಗಿದೆ.

ಹೋಟೆಲ್​ಗಳಲ್ಲಿ ಪಾತ್ರೆೆ ತೊಳೆಯಲು ಬಳಸಿದ ನೀರನ್ನು ಎಸೆಯದೇ ಗಿಡಗಳಿಗೆ ಹಾಕಲಾಗುತ್ತಿದೆ. ಹೀಗೆ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡು ನೀರು ಉಳಿಸಲು ನಗರದ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

ಈ ಕುರಿತು ಈಟಿವಿ ಭಾರತದ ಜೊತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ. ಸಿ ರಾವ್ ಮಾತನಾಡಿ, ''ಶೇಕಡಾ 20ರಷ್ಟು ನೀರನ್ನು ಉಳಿಸಲು ಸಾಕಷ್ಟು ಯೋಜನೆಗಳನ್ನು ನಗರದ ಹೋಟೆಲ್​ಗಳು ಹಮ್ಮಿಕೊಂಡಿವೆ. ನೀರು ಪೋಲಾಗುವುದನ್ನು ನಿಲ್ಲಿಸಲು ಸಹ ಹೇಳಿದ್ದೇವೆ. ನೀರಿನ ಸರಬರಾಜು ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ನೀರನ್ನು ಕೊಡಲು ಪ್ರಾರಂಭಿಸಿದ್ದು, ಅದರ ಸಾಧಕ - ಬಾಧಕಗಳನ್ನು ವಿಶ್ಲೇಷಿಸಿ ಮುಂದಿನ ಯೋಜನೆಯನ್ನು ರೂಪಿಸಲಿದ್ದೇವೆ'' ಎಂದಿದ್ದಾರೆ.

ಆಸ್ಪತ್ರೆಗಳಲ್ಲಿ ನೀರಿನ ಬವಣೆ : ''ಬೆಂಗಳೂರಿನಲ್ಲಿ ನೀರಿನ ಭವಣೆ ಆಸ್ಪತ್ರೆಗಳನ್ನೂ ಬಿಟ್ಟಿಲ್ಲ. ಇದೇ ರೀತಿಯಲ್ಲಿ ಫೋರ್ಟಿಸ್‌ ಆಸ್ಪತ್ರೆಗಳಲ್ಲಿಯೂ ನೀರಿನ ಸಮಸ್ಯೆ ತಲೆದೂರಿದೆ. ಮೊದಲು ಮೂರು ಮೂಲಗಳಿಂದ ನೀರನ್ನು ಬಳಕೆ ಮಾಡಲಾಗುತ್ತಿತ್ತು. ಬಿಡಬ್ಲ್ಯೂಎಸ್‌ಎಸ್‌ಬಿ, ಬೋರ್‌ವೆಲ್‌ ಹಾಗೂ ಟ್ಯಾಂಕರ್ಸ್‌ ತರಿಸುತ್ತಿದ್ದೆವು. ಆದರೆ, ಆಸ್ಪತ್ರೆಯ ಬೋರ್‌ವೆಲ್‌ಗಳು ಸಂಪೂರ್ಣ ಒಣಗಿವೆ. ಅದರಿಂದ ನೀರು ಸಿಗುತ್ತಿಲ್ಲ.

ಬಿಡಬ್ಲ್ಯೂಎಸ್‌ಎಸ್‌ಬಿ ನೀರು ಬಿಡುವುದು ಅತಿ ಕಡಿಮೆ ಪ್ರಮಾಣದಲ್ಲಿ ಆಗಿದೆ. ಹೀಗಾಗಿ ನಾವು ಟ್ಯಾಂಕರ್‌ಗಳ ಮೊರೆ ಹೋಗಿದ್ದೇವೆ. ಆದರೆ, ಅವರಲ್ಲಿಯೂ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿರುವುದಾಗಿ ವಾರ್ನಿಂಗ್‌ ನೀಡಿದ್ದಾರೆ. ಒಂದು ವೇಳೆ, ಟ್ಯಾಂಕರ್‌ ನೀರು ಸರಬರಾಜು ನಿಂತರೆ ಆಸ್ಪತ್ರೆಗೆ ಸಾಕಷ್ಟು ಸಮಸ್ಯೆ ಆಗಲಿದೆ. ಸರ್ಕಾರ ಈ ಬಗ್ಗೆ ಮೊದಲೇ ಗಮನಹರಿಸುವುದು ಉತ್ತಮ.

ಬೆಂಗಳೂರಿನಾದ್ಯಂತ ಈ ಸಮಸ್ಯೆ ಇರುವುದರಿಂದ ಈಗಲೇ ಪರಿಹಾರ ಕಂಡುಕೊಳ್ಳಬೇಕು. ಹಾಗೆಯೇ, ಪ್ರತಿಯೊಬ್ಬರು ಸಹ ನೀರಿನ ಬಳಕೆಯನ್ನು ಮಿತಿಗೊಳಿಸುವ ಮೂಲಕ ಭವಿಷ್ಯದ ಗಂಡಾಂತರವನ್ನು ತಡೆಯಬೇಕು'' ಎಂದು ಫೋರ್ಟಿಸ್‌ ಆಸ್ಪತ್ರೆಯ ಡೆಪ್ಯೂಟಿ ಜನರಲ್‌ ಆಫ್ ಅಡ್ಮಿನಿಸ್ಟ್ರೇಷನ್‌ ಪ್ರವೀಣ್‌ ವಾಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಈಜುಕೊಳಗಳಿಗೆ ಕಾವೇರಿ ನೀರು ಬಳಕೆ ನಿಷೇಧಿಸಿ ಬೆಂಗಳೂರು ಜಲಮಂಡಳಿ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.