ETV Bharat / state

ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆ: ಜನರ ಆತಂಕ ದೂರ ಮಾಡಿದ ಕಾರವಾರ ಅರಣ್ಯಾಧಿಕಾರಿ - VULTURE

ಕಾರವಾರದ ಕೋಡಿಬಾಗ ನದಿವಾಡಾದಲ್ಲಿ ಕಾಣಿಸಿಕೊಂಡ ರಣಹದ್ದು ಸಂಶೋಧನೆಗೆ ಒಳಪಟ್ಟಿದೆ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜನರ ಆತಂಕವನ್ನು ದೂರ ಮಾಡಿದ್ದಾರೆ.

ರಣಹದ್ದು
ರಣಹದ್ದು (ETV Bharat)
author img

By ETV Bharat Karnataka Team

Published : Nov 10, 2024, 7:58 PM IST

ಕಾರವಾರ (ಉತ್ತರ ಕನ್ನಡ): ಬೆನ್ನ ಮೇಲೆ ಜಿಪಿಎಸ್ ಟ್ರ್ಯಾಕರ್​ ಮತ್ತು ಕಾಲುಗಳಲ್ಲಿ ಟ್ಯಾಗ್​ ಹೊಂದಿದ್ದ ರಣಹದ್ದು ನಗರದ ಕೋಡಿಬಾಗ ನದಿವಾಡಾದಲ್ಲಿ ಕಾಣಿಸಿಕೊಂಡಿದೆ.

ರಣಹದ್ದಿನ ಎರಡೂ ಕಾಲುಗಳಿಗೆ ಪ್ರತ್ಯೇಕ ಬಣ್ಣದಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆ ಬರೆದಿರುವ ಟ್ಯಾಗ್​ ಕಟ್ಟಲಾಗಿದೆ. ಜೊತೆಗೆ ಬೆನ್ನ ಮೇಲೆ ಜಿಪಿಎಸ್ ಟ್ರ್ಯಾಕರ್​ ಇದೆ. ಹೀಗಾಗಿ ಸ್ಥಳೀಯರು ರಣಹದ್ದು ಬೇಹುಗಾರಿಕೆಗಾಗಿ ಶತ್ರು ದೇಶದಿಂದ ಬಂದಿರಬಹುದು ಎಂದು ಆತಂಕಗೊಂಡಿದ್ದರು. ಅಲ್ಲದೇ ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಇದ್ದು, ಈ ರಣಹದ್ದು ಕಾಣಿಸಿಕೊಂಡಿದ್ದರಿಂದ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.

ರಣಹದ್ದಿನ ಬೆನ್ನ ಮೇಲಿರುವ ಜಿಪಿಎಸ್ ಟ್ರ್ಯಾಕರ್​ನಲ್ಲಿ ಮಹಾರಾಷ್ಟ್ರ ಅರಣ್ಯ ಇಲಾಖೆಯ ಹೆಸರು ಇದೆ. ಈ ರಣಹದ್ದು ಸಂಶೋಧನೆಗೆ ಒಳಪಟ್ಟಿದೆ. ಚಳಿಗಾಲ ಹಿನ್ನೆಲೆ ವಲಸೆ ಬಂದಿದೆ ಎಂಬುದು ಅರಣ್ಯಾಧಿಕಾರಿಗಳ ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ.

ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದು (ETV bharat)

ಈ ಕುರಿತು ಡಿಎಫ್ಒ ರವಿಶಂಕರ್ ಮಾತನಾಡಿ, "ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಂಬೆ ನ್ಯಾಚ್ಯುರಲ್ ಹಿಸ್ಟರಿ ಆಫ್ ಸೊಸೈಟಿಯಿಂದ ಸಂಶೋಧನೆ ನಡೆಯುತ್ತಿದ್ದು, 5 ರಣಹದ್ದಿಗೆ ಟ್ಯಾಗಿಂಗ್ ಮಾಡಿ ಸಂತಾನೋತ್ಪತ್ತಿ ಬಳಿಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ಇಲ್ಲಿಗೆ ಬಂದಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್​ನ ಆನೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.