ETV Bharat / state

ಮಹಿಳೆಯರಿಗೆ ಉಡಿತುಂಬಿ ಮತಯಾಚನೆ, ಕಾಂಗ್ರೆಸ್​ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪತ್ನಿಯಿಂದ ಪ್ರಚಾರ - Anand Swamy Gaddadevarmata

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷದಿಂದ ಅಭ್ಯರ್ಥಿಗಳ ಹೆಸರುಗಳು ಪ್ರಕಟವಾಗಿದ್ದು, ಕಾಂಗ್ರೆಸ್​ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪತ್ನಿ ಮತಯಾಚನೆ ಆರಂಭಿಸಿದ್ದಾರೆ.

haveri
ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ
author img

By ETV Bharat Karnataka Team

Published : Mar 15, 2024, 11:49 AM IST

Updated : Mar 15, 2024, 12:23 PM IST

ಆನಂದಸ್ವಾಮಿ ಗಡ್ಡದೇವರಮಠ ಪತ್ನಿ ಹೇಳಿಕೆ

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿವೆ. ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದೇವರಮಠ ಸ್ಪರ್ಧಿಸುತ್ತಿದ್ದಾರೆ. ಇತ್ತ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ. ಚುನಾವಣಾ ನೀತಿ ಸಂಹಿತೆ ಪ್ರಕಟವಾಗುವ ಮುನ್ನವೇ ಅಭ್ಯರ್ಥಿಗಳು ಮತ ಭೇಟೆಗೆ ಸಿದ್ಧತೆ ನಡೆಸಿದ್ದಾರೆ.

ಈ ಮಧ್ಯೆ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪತ್ನಿ ದೀಪಾ ಧಾರ್ಮಿಕ ಕಾರ್ಯಕ್ರಮದ ಮೂಲಕ ತಮ್ಮ ಪತಿ ಪರ ಮತಯಾಚನೆ ಮಾಡಿದ್ದಾರೆ. ಹಾವೇರಿಯ ಹುಕ್ಕೇರಿಮಠದಲ್ಲಿ ಆಯೋಜಿಸಲಾಗಿದ್ದ ಲಲಿತ ಸಹಸ್ರನಾಮ ಪೂಜಾ ಕಾರ್ಯಕ್ರಮದಲ್ಲಿ ದೀಪಾ ಗಡ್ಡದದೇವರಮಠ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿಷಿಣ ಕುಂಕುಮ ಹಚ್ಚಿ ಉಡಿ ತುಂಬಿದರು. ಜೊತೆಗೆ ತಮ್ಮ ಪತಿ ಆನಂದಸ್ವಾಮಿ ಗಡ್ಡದೇವರಮಠ ಕಾಂಗ್ರೆಸ್​ನಿಂದ ಸ್ಪರ್ಧಿಸುತ್ತಿದ್ದು ತಾವೆಲ್ಲ ಅವರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

haveri
ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಬಳಿಕ ದೀಪಾ ಗಡ್ಡದದೇವರಮಠ ಅವರಿಗೆ ಮಹಿಳೆಯರು ಸಹ ಉಡಿ ತುಂಬಿದರು. ಅರಿಷಿಣ ಕುಂಕುಮ ಹಚ್ಚಿ ದೀಪಾ ಆಸೆಗಳು ಈಡೇರಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದೀಪಾ ಗಡ್ಡದದೇವರಮಠ, 'ಚುನಾವಣೆ ಟಿಕೆಟ್ ಪ್ರಕಟಿಸುವ ಮುನ್ನ ತಮ್ಮ ಲಿಂಗಯ್ಯ ಟ್ರಸ್ಟ್ ಹಲವು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಹಾವೇರಿ ಜಿಲ್ಲೆ ಸೇರಿದಂತೆ ಲೋಕಸಭೆ ಕ್ಷೇತ್ರದ ವಿವಿಧೆಡೆ ಲಿಂಗಯ್ಯ ಟ್ರಸ್ಟ್​ ಹಲವು ಪೂಜಾ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಾವೇರಿಯ ಹುಕ್ಕೇರಿಮಠದಲ್ಲಿ ಲಲಿತ ಸಹಸ್ರಾನಾಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಉಡಿ ತುಂಬಿದ್ದು ಹೆಚ್ಚು ಸಂತಸವಾಯಿತು' ಎಂದು ತಿಳಿಸಿದರು.

haveri
ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ತಮ್ಮ ಪತಿಗೆ ಕಾಂಗ್ರೆಸ್​ ಟಿಕೆಟ್​ ನೀಡಿರುವ ಕುರಿತಂತೆ ಮಾತನಾಡಿದ ಅವರು, 'ನಮ್ಮ ಮಾವನವರು ಮಾಡಿದ ಕಾರ್ಯಗಳಿಂದ ತಮ್ಮ ಪತಿಗೆ ಟಿಕೆಟ್ ದೂರೆತಿದೆ. ನಮ್ಮ ಪತಿ ಕಳೆದ ಎರಡು ದಶಕಗಳಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ದುಡಿದಿದ್ದಾರೆ. ನಾವು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಪೂಜೆ ಸಲ್ಲಿಸಿದ ಪರಿಣಾಮ ಅವರಿಗೆ ಟಿಕೆಟ್ ದೊರೆತಿರಬಹುದು. ತಮ್ಮ ಪತಿ ಪರವಾಗಿ ತಾವು ಹಾವೇರಿ ಲೋಕಸಭಾ ಕ್ಷೇತ್ರದೆಲ್ಲೆಡೆ ಓಡಾಡಿ ಮತಯಾಚನೆ ಮಾಡುವುದಾಗಿ ತಿಳಿಸಿದರು.

ಪತಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ ದೀಪಾ, ತಮ್ಮ ಪತಿ ಆನಂದಸ್ವಾಮಿ ಗಡ್ಡದೇವರಮಠ ಜಯ ನಿಶ್ಚಿತ ಎಂಬ ಭರವಸೆ ನೀಡಿದರು.

ಇದನ್ನೂ ಓದಿ: ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಎದುರು ಕಾಂಗ್ರೆಸ್​ನಿಂದ ಯಾರಿಗೆ ಟಿಕೆಟ್​ ?

Last Updated : Mar 15, 2024, 12:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.