ETV Bharat / state

ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪತ್ತೆ ಕುರಿತಂತೆ ಮಾಹಿತಿ ಹಂಚಿಕೊಂಡ ಎಸ್​ಪಿ - Vijayapura Crime News

ವಿಜಯಪುರ ಜಿಲ್ಲಾ ವ್ಯಾಪ್ತಿಯ ಖೇಳ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪತ್ತೆ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ಇಂದು ಎಸ್ಪಿ ರಿಷಿಕೇಶ್‌ ಸೋನವಾಣೆ ಮಾಧ್ಯಮಗೋಷ್ಠಿ ಕರೆದಿದ್ದರು.

Vijayapura SP  cases registered  police stations  Vijayapura
ಎಸ್ಪಿ ರಿಷಿಕೇಶ್‌ ಸೋನವಾಣೆ ಹೇಳಿಕೆ (ಕೃಪೆ: ETV Bharat)
author img

By ETV Bharat Karnataka Team

Published : May 22, 2024, 8:17 PM IST

ಎಸ್ಪಿ ರಿಷಿಕೇಶ್‌ ಸೋನವಾಣೆ ಹೇಳಿಕೆ (ಕೃಪೆ: ETV Bharat)

ವಿಜಯಪುರ: ಜಿಲ್ಲಾ ವ್ಯಾಪ್ತಿಯ ಖೇಳ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪತ್ತೆ ಕುರಿತಂತೆ ಎಸ್ಪಿ ರಿಷಿಕೇಶ್‌ ಸೋನವಾಣೆ ಮಾಹಿತಿ ಹಂಚಿಕೊಂಡರು.

30 ಲಕ್ಷ ಹಣ ರಿಕವರಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಸೆನ್‌ ಪೊಲೀಸ್‌ ಠಾಣೆಯಲ್ಲಿ ವಿಜಯಪುರದ ನಿವಾಸಿ ಸಾಫ್ಟವೇರ್‌ ಇಂಜಿನಿಯರ್‌ ಮಹಿಳೆಯೊಬ್ಬರಿಗೆ ಉದ್ಯೋಗ ವಂಚನೆ ಮಾಡಿರುವ ಪ್ರಕರಣ ದಾಖಲಾಗಿತ್ತು. ಆನ್‌ಲೈನ್‌ ಮೂಲಕ ನಿಮಗೆ ಕಮಿಷನ್‌ ಸಿಗುತ್ತದೆ.. ಕೆಲವು ಟಾಸ್ಕ್‌ ಕೊಡ್ತೀವಿ, ಗ್ರೂಪ್‌ ಟಾಸ್ಕ್‌ ಕೊಡ್ತೀವಿ ಇದಕ್ಕೆ ನಿಮಗೆ ನಲವತ್ತು ಪರ್ಸೆಂಟ್‌ ಕಮೀಷನ್‌ ಸಿಗುತ್ತೆ ಅಂತ ಹೇಳಿ ಅವರಿಗೆ ಕೆಲವು ಟಾಸ್ಕ್‌ ಮಾಡಲು ಹೇಳುತ್ತಾರೆ. ಅವರ ಕಡೆಯಿಂದ ಅವರ ನಂಬಿಕೆ ಗಳಿಸಿ, ಸುಮಾರು 30 ಲಕ್ಷ 75 ಸಾವಿರ ಹಣ ವಂಚನೆ ಮಾಡಲಾಗಿರುವ ಕುರಿತಂತೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಆ ಮಹಿಳೆ ವಂಚಿಸಿದ್ದ ಎಲ್ಲ ಹಣವನ್ನ ಫ್ರೀಜ್‌ ಮಾಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅದನ್ನ ನ್ಯಾಯಾಲಯದ ನಿರ್ದೇಶನಗಳನ್ನ ಪಾಲಿಸಿ ಅವರಿಗೆ ವಾಪಸ್‌ ಕೊಡಮಾಡಲಾಗುವುದು. ಈ ಪ್ರಕರಣದಲ್ಲಿ ಇನ್ನೂ ಆರೋಪಿ ಪತ್ತೆ ಕಾರ್ಯ ಚಾಲ್ತಿಯಲ್ಲಿದೆ ಎಂದು ಎಸ್ಪಿ ರಿಷಿಕೇಶ್‌ ಸೋನವಾಣೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಡಿಜಿಟಲ್‌ ಅರೆಸ್ಟ್‌, 68 ಲಕ್ಷ ರೂ. ವಂಚನೆ : ವಿಜಯಪುರ ನಗರದ ವೈದ್ಯರೊಬ್ಬರಿಗೆ ಡಿಜಿಟಲ್‌ ಅರೆಸ್ಟ್‌ ಎಂದು ಕರೆಯಲ್ಪಡುವ ಆನ್‌ಲೈನ್‌ ವಂಚನೆ ಪ್ರಕರಣ ನಡೆದಿತ್ತು. ಆ ವೈದ್ಯರಿಗೆ ಮೋಸ ಮಾಡುವ ಉದ್ದೇಶದಿಂದ ಫೆಡೆಕ್ಸ್‌ ಕೋರಿಯರ್‌ ಮೂಲಕ ನಿಷೇಧಿತ ಮಾದಕ ವಸ್ತುಗಳನ್ನ ಕಳಿಸುತ್ತಿದ್ದಾರೆ. ನಾವು ಮುಂಬೈ ಕ್ರೈಂ ಬ್ರ್ಯಾಂಚ್​ನಿಂದ ಮಾತನಾಡುತ್ತಿದ್ದೇವೆ ಎಂದು ಹೇಳಿ, ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿ ಅವರ ಕಡೆಯಿಂದ ಸುಮಾರು 54 ಲಕ್ಷ ಹಣವನ್ನು ಲಪಟಾಯಿಸಿದ್ದರು. ಈ ಕುರಿತು ಸೆನ್‌ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಇದಲ್ಲದೇ ಇನ್ನೊಂದು ಪ್ರಕರಣದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿ ಹದಿನಾಲ್ಕು ಲಕ್ಷ ಎಪ್ಪತ್ತೇಳು ಲಕ್ಷದಷ್ಟು ವಂಚನೆಯ ಇನ್ನೊಂದು ಪ್ರಕರಣ ದಾಖಲಾಗಿತ್ತು. ಈ ಎರಡೂ ಪ್ರಕರಣದಲ್ಲಿ ತನಿಖೆ ವೇಳೆ ರಾಜಸ್ಥಾನ ಮೂಲದ ಕಾಮನ್‌ ಆರೋಪಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ರಾಜೀವ್‌ ವಾಲಿಯಾ, ರಾಕೇಶ ಕುಮಾರ್‌ ಟೇಲರ್‌, ಕರಣ್‌ ಯಾದವ್‌, ಸುರೇಂದ್ರ ಸಿಂಗ್‌ ಸೇರಿದಂತೆ ಈ ನಾಲ್ಕು ಜನರಿಗೆ ರಾಜಸ್ಥಾನದಿಂದ ನಾವು ದಸ್ತಗಿರಿ ಮಾಡಿಕೊಂಡು ಬಂದಿದ್ದೇವೆ. ಇವರ ಹತ್ತಿರ ಎರಡೂ ಪ್ರಕರಣ ಸೇರಿ 68 ಲಕ್ಷದಷ್ಟು ಹಣ ವಂಚನೆಯಾಗಿತ್ತು. ಇದರಲ್ಲಿ ಸುಮಾರು 40 ಲಕ್ಷದಷ್ಟು ಹಣವನ್ನ ನಾವು ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ಪ್ರಕರಣ ಸಹ ಇನ್ನೂ ತನಿಖೆಯಲ್ಲಿದೆ. ಇದರ ಜೊತೆಗೆ ಇನ್ನೂ ಕೆಲವು ಆರೋಪಿಗಳಿದ್ದಾರೆ. ಆ ಆರೋಪಿಗಳು ಸಹ ರಾಜಸ್ಥಾನ ಮೂಲದವರಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ರಿಷಿಕೇಶ ಸೋನವಾಣೆ ಮಾಹಿತಿ ನೀಡಿದರು.

ಡಾಟ್‌ ಎಪಿಕೆ ಫೈಲ್​ ಅಂದ್ರೇನು?: ವಿಜಯಪುರ ಸೆನ್‌ ಪೊಲೀಸ್‌ ಠಾಣೆಯಲ್ಲಿ ಸೇರಿದಂತೆ ಇನ್ನಿತರ ಠಾಣೆಗಳಲ್ಲಿ ದಾಖಲಾಗಿರುವ ದೂರಿನ ಪ್ರಕರಣಗಳ ಅನ್ವಯ ಡಾಟ್‌ ಎಪಿಕೆ ಫೈಲ್‌ ಶೇರ್‌ ಆಗುತ್ತೆ. ಡಾಟ್‌ ಎಪಿಕೆ ಅಂದರೆ ಅಪ್ಲಿಕೇಶನ್‌ ಫೈಲ್‌. ಅದನ್ನ ನಿಮ್ಮ ಮೊಬೈಲಿನಲ್ಲಿ ಇನ್‌ಸ್ಟಾಲ್‌ ಮಾಡಿದಲ್ಲಿ ನಿಮ್ಮ ಮೊಬೈಲ್​​ಗೆ ರಿಪೋಟ್‌ ಆಕ್ಸೆಸ್‌ ಕೊಡಮಾಡುವಂತಹ ವಂಚನೆಯಿದು. ಸೋ ಅಂತಹ ಲಿಂಕ್‌ ನಿಮ್ಮ ವಾಟ್ಸ್​ಆ್ಯಪ್​ ಸೇರಿದಂತೆ ನಿಮಗೆ ಇನ್ನಿತರ ರೂಪದಲ್ಲಿ ಬರುತ್ತದೆ. ಅದನ್ನ ನೀವು ಇನ್‌ಸ್ಟಾಲ್‌ ಮಾಡಿಕೊಂಡಲ್ಲಿ ನಿಮ್ಮ ಮೊಬೈಲಿನ ರಿಮೋಟ್‌ ಆಕ್ಸೆಸ್‌ ಬೇರೆಯವರಿಗೆ ಸಿಕ್ಕಿ ಬಿಡುತ್ತೆ. ಆಗ ನೀವು ಬ್ಯಾಂಕಿಂಗ್‌ ವ್ಯವಹಾರ ಮಾಡುವಾಗ ನಿಮ್ಮ ಮೊಬೈಲಿಗೆ ಬರುವ ಒಟಿಪಿ ಸಹ ಆ ಎದುರಿನ ವಂಚಕ ವ್ಯಕ್ತಿಗೆ ಶೇರ್‌ ಆಗಿರುತ್ತೆ. ಈ ರೀತಿ ಸಹ ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದಾವೆ. ನಿಮ್ಮ ಮಾಧ್ಯಮಗಳ ಮೂಲಕ ನಾನು ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ ಯಾವುದೇ ರೀತಿಯ ನಿಮಗೆ ಅಪರಿಚಿತ ವ್ಯಕ್ತಿಗಳು ಕಳುಹಿಸಿರುವ ಎಪಿಕೆ ಫೈಲ್‌ ಮತ್ತು ಲಿಂಕ್‌ಗಳನ್ನ ಇನ್‌ಸ್ಟಾಲ್‌ ಮಾಡಲು ಅಥವಾ ಕ್ಲಿಕ್‌ ಮಾಡಲು ಹೋಗಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಎಪಿಕೆ ಲಿಂಕ್‌ ಇನ್‌ಸ್ಟಾಲ್‌ ಮಾಡುವುದಿರಬಹುದು, ಟೆಲಿ ಮಾರ್ಕೆಟಿಂಗ್‌ ಇರಬಹುದು ಅಥವಾ ವಾಟ್ಸ್ಆ್ಯಪ್​ ಟ್ಸಾಪ್‌ ಫೇಸ್​ಬುಕ್‌ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗೃತೆ ವಹಿಸಬೇಕು. ಅಂತಹವುಗಳನ್ನ ಕಡೆಗಣಿಸಬೇಕು. ಇಲ್ಲವಾದಲ್ಲಿ ಅನುಮಾನ ಬಂದಲ್ಲಿ ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿ ಸಹಾಯ ಪಡೆಯಬಹುದು. ಬ್ಯಾಂಕ್‌ ರಿಲೇಟೆಡ್‌ ಏನಾದರೂ ಕೇಳಿದಲ್ಲಿ ನಿಮ್ಮ ಬ್ಯಾಂಕ್‌ ಅಕೌಂಟ್‌ ಇರುವ ಕಡೆ ನೇರವಾಗಿ ಹೋಗಿ ವಿಚಾರಿಸಬೇಕು ಎಂದು ಅವರು ಮಾಹಿತಿ ನೀಡಿದರು.

50 ಮೊಬೈಲ್​ಗಳು ರಿಕವರಿ: ವಿಜಯಪುರ ಸೆನ್‌ ಪೊಲೀಸ್‌ ಠಾಣೆಯಲ್ಲಿ ಫೆಬ್ರವರಿಯಿಂದ ಇದುವರೆಗೂ ಒಟ್ಟು ಸಿಈಐಆರ್‌ ಪೋರ್ಟಲ್‌ ಮೂಲಕ ದಾಖಲಾದ ದೂರಿನನ್ವಯ 50 ಮೊಬೈಲ್‌ಗಳನ್ನ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮಾಹಿತಿ ನೀಡಿದರು. ಇವೆಲ್ಲಾ ಕಳೆದು ಹೋದ ಅಥವಾ ಕಳ್ಳತನ ಮಾಡಲಾದ ಮೊಬೈಲ್‌ಗಳಾಗಿವೆ. ಯಾವಾಗ ಮೊಬೈಲ್‌ ಟ್ರೇಸ್‌ ಆಗುತ್ತೆ ಆ ಸಂದರ್ಭ ಅಂತಹವುಗಳನ್ನ ರಿಕವರಿ ಮಾಡಿ ಕರೆಯಿಸಿ ಪ್ರೊಸಿಜರ್‌ ಫಾಲೋ ಮಾಡಿ ವಾಪಸ್‌ ಕೊಡಲಾಗುತ್ತೆ ಎಂದರು.

660 ಗ್ಯಾಂಬ್ಲಿಂಗ್‌ ಮತ್ತು ಮಟಕಾ ಪ್ರಕರಣ: ಕಳೆದ ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸರಿಸುಮಾರು 660 ಗ್ಯಾಂಬ್ಲಿಂಗ್‌ ಮತ್ತು ಮಟಕಾ ಪ್ರಕರಣಗಳನ್ನ ವಿಜಯಪುರ ಜಿಲ್ಲೆಯಲ್ಲಿ ದಾಖಲು ಮಾಡಲಾಗಿದೆ ಎಂದು ಎಸ್ಪಿ ರಿಷಿಕೇಶ್‌ಸೋನವಾಣೆ ಮಾಹಿತಿ ನೀಡಿದ್ದಾರೆ. ಈಗ ಇದು ಮುಂದುವರೆದು ಪ್ರಸಕ್ತ ಸಾಲಿನ ನಾಲ್ಕು ತಿಂಗಳಲ್ಲಿ ಇನ್ನೂ ಇನ್ನೂರಾ ಇಪ್ಪತ್ತು ಪ್ರಕರಣಗಳನ್ನ ಕಳೆದ ಸಾಲಿಗೆ ಹೋಲಿಸಿದರೆ ಆನ್‌ ಅಂಡ್​ ಆವರೇಜ್‌ ಅದೇ ಲೆಕ್ಕದಲ್ಲಿ ಮಾಡಿದ್ದೇವೆ. ಇನ್ನೂ ಹೆಚ್ಚಿನ ಪ್ರಕರಣ ಪತ್ತೆ ಹಚ್ಚಿ ದಾಖಲಿಸಲು ಜಿಲ್ಲೆಯ ಎಲ್ಲಾ ಠಾಣೆಯ ಅಧಿಕಾರಿಗಳಿಗೆ ನಿರ್ದೇಶನವನ್ನ ನೀಡಲಾಗಿದೆ. ನಮಗೆ ಮಾಹಿತಿ ದೊರಕುತ್ತಿದ್ದಂತೆ ನಾವು ಕ್ರಮ ಜರುಗಿಸಿ ಪ್ರಕರಣ ದಾಖಲಿಸುತ್ತಿದ್ದೇವೆ. ಸಾರ್ವಜನಿಕರಲ್ಲಿ ಮಾಹಿತಿ ಇದ್ದಲ್ಲಿ ನಮಗೆ ನೀಡಿದಲ್ಲಿ ಆ ನಿಟ್ಟಿನಲ್ಲಿ ಸಹ ಕ್ರಮ ಜರುಗಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.