ETV Bharat / state

'I CAME FROM DUST': ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭಾವುಕ ನುಡಿ - Chalavadi Narayanaswamy

ವಿಧಾನ ಪರಿಷತ್​ನಲ್ಲಿ ಬುಧವಾರದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸದನದಲ್ಲಿ ನೂತನ ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿ ಪ್ರಸ್ತಾವದಂತೆ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಿರುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದರು.

ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ (ETV Bharat)
author img

By ETV Bharat Karnataka Team

Published : Jul 24, 2024, 4:16 PM IST

ಬೆಂಗಳೂರು: ನನ್ನ ದಾರಿ ಸುಲಭ ಇರಲಿಲ್ಲ, ಬಹುದೂರ ಕ್ರಮಿಸಿ ಬಂದವನು ನಾನು. ರಾಜಕೀಯಕ್ಕೆ ಕಾಲಿಟ್ಟಾಗ ನನ್ನ ಹಿಂದೆ ಮುಂದೆ ಯಾರೂ ಇರಲಿಲ್ಲ. ಕೂಲಿ ಮಾಡುವ ಕುಟುಂಬದಿಂದ ಬಂದವನು ನಾನು, ಐ ಕೇಮ್ ಫ್ರಂ ಡಸ್ಟ್(I came from dust) ಎಂದು ವಿಧಾನ ಪರಿಷತ್ ನೂತನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭಾವುಕರಾದರು. ಈ ಸ್ಥಾನದ ಘನತೆ ಎತ್ತಿ ಹಿಡಿಯುವ ಎಲ್ಲ ಕೆಲಸ ನಾನು ಮಾಡುತ್ತೇನೆ ಎನ್ನುವ ಭರವಸೆಯನ್ನು ಸದನಕ್ಕೆ ನೀಡಿದರು.

ವಿಧಾನ ಪರಿಷತ್​ನ ಬುಧವಾರದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸದನದಲ್ಲಿ ನೂತನ ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿ ಪ್ರಸ್ತಾವದಂತೆ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಿರುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದರು. ಮೊದಲಿಗರಾಗಿ ಸಭಾಪತಿಗಳೇ ಛಲವಾದಿ ನಾರಾಯಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಕೋರಿದರು. ಪಕ್ಷಾತೀತವಾಗಿ 21 ಸದಸ್ಯರು ಮಾತನಾಡಿ ನೂತನ ವಿರೋಧ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

ಅಧಿಕೃತವಾಗಿ ವಿರೋಧ ಪಕ್ಷದ ನಾಯಕ‌ನ ಸ್ಥಾನ ಅಲಂಕರಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿಪಕ್ಷ ನಾಯಕನಾಗಿ ನನ್ನನ್ನು ನಮ್ಮ ಪಕ್ಷ ನೇಮಕ ಮಾಡಿದೆ, ನಿಮ್ಮಂತ ಮುತ್ಸದ್ಧಿಗಳ ಕಾಲದಲ್ಲಿ ನನಗೆ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜಕೀಯದಲ್ಲಿ ನಾನು ಇಂದು ಈ ಸ್ಥಾನಕ್ಕೆ ಬಂದಿದ್ದೇನೆ. ಆದರೆ ನನ್ನ ದಾರಿ ಸುಲಭ ಇರಲಿಲ್ಲ, ಬಹುದೂರ ಕ್ರಮಿಸಿ ಬಂದವನು ನಾನು, ಅಂಬೇಡ್ಕರ್ ಅವರ ದಾರಿಯಲ್ಲಿ ಹೆಜ್ಜೆ ಹಾಕಿ ಬಂದವನು ನಾನು. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಹಲವರಿಗೆ ಸಹಾಯ ಮಾಡಬಹುದು ಎಂಬ ನಿರೀಕ್ಷೆ ಇತ್ತು, ಹಾಗಾಗಿ ರಾಜಕೀಯಕ್ಕೆ ಬಂದೆ. ಕಾಂಗ್ರೆಸ್​​ನಲ್ಲಿ ಇರುವವರು ಯಾರೂ ನನ್ನ ವಿರೋಧಿಗಳಲ್ಲ, ಶತ್ರುಗಳಲ್ಲ. ಅವರೆಲ್ಲರನ್ನೂ ನಾನು ಗೌರವದಿಂದ ಕಾಣುತ್ತೇನೆ ಎಂದರು.

ವೈಯಕ್ತಿಕ ಯಾವುದೂ ಇಲ್ಲ, ಪ್ರಜಾಪ್ರಭುತ್ವದ ಅಡಿಯಲ್ಲೇ ಕೆಲಸ ಮಾಡಬೇಕು. ನಿಮ್ಮ ಕೆಲಸದಲ್ಲಿ ಸರ್ಕಾರದ ಕೆಲಸಲ್ಲಿ ನ್ಯೂನತೆಗಳನ್ನು ಕಂಡರೆ ನಾನು ಎತ್ತಿ ತೋರಿಸುತ್ತೇನೆ. ಅದಕ್ಕೆ ವೈಯಕ್ತಿಕವಾಗಿ ಯಾರೂ ಭಾವಿಸಬೇಡಿ. ಯಾವುದೇ ಪಕ್ಷದ ಸಿದ್ಧಾಂತಗಳ ಬಗ್ಗೆ ಈಗ ಮಾತನಾಡುವುದು ಬೇಡ. ನನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನಂತ ಸ್ಥಳದಲ್ಲಿ ಹುಟ್ಟಿದವನು, ಸಮುದಾಯದಲ್ಲಿ ಹುಟ್ಟಿದವನು ತುಂಬಾ ಶ್ರಮಪಟ್ಟರೆ ಈ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತದೆ. ನಾನು ಈ ಸ್ಥಾನಕ್ಕೆ ಬರಲು ನನ್ನ ಪಕ್ಷವೇ ಕಾರಣ. ಮೋದಿ, ಅಮಿತ್ ಶಾ, ಬಿ.ಎಲ್. ಸಂತೋಷ್, ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಸಿ ಟಿ ರವಿ, ರವಿಕುಮಾರ್ ಎಲ್ಲರೂ ಇದಕ್ಕೆ ಕಾರಣರು ಎಂದು ಸ್ಮರಿಸಿದರು.

ಸಿ ಟಿ ರವಿ, ರವಿಕುಮಾರ್ ಮತ್ತು ನಾನು ಸೇರಿ ನಮ್ಮ ಮೂವರ ಹೆಸರನ್ನು ರಾಷ್ಟ್ರೀಯ ನಾಯಕರು ತೆಗೆದುಕೊಂಡಿದ್ದರು. ಆದರೆ ಆಯ್ಕೆ ನನ್ನದಾಗಿದೆ. ಈ ಸ್ಥಾನದ ಘನತೆ ಎತ್ತಿ ಹಿಡಿಯುವ ಎಲ್ಲ ಕೆಲಸವನ್ನು ನಾನು ಮಾಡುತ್ತೇನೆ. ನಾನು ಏನೇ ಸಾಧನೆ ಮಾಡಿದರು ಅದಕ್ಕೆ ಬಿಜೆಪಿ - ಜೆಡಿಎಸ್​ನ ಅಣ್ಣ ತಮ್ಮಂದಿರೇ ಕಾರಣ ಆಗುತ್ತಾರೆ. ಸರ್ಕಾರದಲ್ಲಿ ನ್ಯೂನತೆಗಳಾದಾಗ, ತಪ್ಪುಗಳಾದಾಗ ಎಚ್ಚರಿಸುವ ಕೆಲಸ ಮಾಡುತ್ತೇನೆ ಎಂದರು.

ರಾಜಕೀಯ ಗುರು ಬಂಗಾರಪ್ಪ ಸ್ಮರಣೆ: ನಾನು ಈ ಸದನದ ಮೂಲಕ ಬಂಗಾರಪ್ಪನವರಿಗೆ ಗೌರವ ಸಲ್ಲಿಸುತ್ತೇನೆ. ಬಂಗಾರಪ್ಪನವರನ್ನೇ ನನ್ನ ಗುರು ಎನ್ನುತ್ತೇನೆ, ಗೌರವ ಕೊಡುತ್ತೇನೆ. ಕಾಂಪ್ರಮೈಸ್ ಮಾಡಿಕೊಂಡು ಪಕ್ಕದ ಸೀಟಲ್ಲಿ ಕೂರಬೇಡ. ಹೋರಾಟ ಮಾಡು ಎಂದು ಬಂಗಾರಪ್ಪ ಹೇಳುತ್ತಿದ್ದರು. ಅದರಂತೆ ತಳ ಸಮುದಾಯದ ಜನರಿಗೆ ವಂಚನೆ, ಮೋಸ, ಅನ್ಯಾಯ ಆದರೆ ನಾನು ಹೋರಾಟ ಮಾಡುತ್ತೇನೆ. ವೈಯಕ್ತಿಕವಾಗಿ ನಾನು ಯಾರನ್ನೂ ವಿರೋಧಿಸುವುದಿಲ್ಲ. ಪ್ರತಿಪಕ್ಷವಾಗಿ ನಾನು ಈ ಸ್ಥಾನಕ್ಕೆ ಗೌರವ ತರಬೇಕು. ಅನೇಕ‌ ಮುತ್ಸದ್ಧಿಗಳು ಈ ಸ್ಥಾನದಲ್ಲಿ ಬಂದು ಹೋಗಿದ್ದಾರೆ. ಅವರ ಘನತೆಗೆ ಗೌರವ ಸಿಗಬೇಕು ಎನ್ನುವಂತೆ ನಡೆದುಕೊಳ್ಳಲಿದ್ದೇನೆ ಎಂದರು.

ಇದನ್ನೂ ಓದಿ: ಮುಡಾ ಚರ್ಚೆಗೆ ಬಿಜೆಪಿ ನಿಲುವಳಿ ಸೂಚನೆ ಮಂಡನೆ: ಚರ್ಚೆಗೆ ಅನುಮತಿ ನಿರಾಕರಿಸಿದ ಸಭಾಪತಿ ರೂಲಿಂಗ್ - BJP submitted adjournment motion

ETV Bharat Logo

Copyright © 2024 Ushodaya Enterprises Pvt. Ltd., All Rights Reserved.