ETV Bharat / state

ಹೈಕೋರ್ಟ್‌ ಪೀಠದ ಮುಂದೆ ಗಾಯ ಮಾಡಿಕೊಂಡ ವ್ಯಕ್ತಿ, ಆಸ್ಪತ್ರೆಗೆ ದಾಖಲು - High Court

ಅನಾಮಧೇಯ ವ್ಯಕ್ತಿಯೊಬ್ಬರು ನ್ಯಾಯಪೀಠದೆದುರು ರೇಜರ್‌ನಿಂದ ಗಾಯ ಮಾಡಿಕೊಂಡ ಘಟನೆ ಕರ್ನಾಟಕ ಹೈಕೋರ್ಟ್‌ ಹಾಲ್‌ನಲ್ಲಿ ಇಂದು ನಡೆಯಿತು.

UNKNOWN TRIED TO INJURE HIMSELF O  CHIEF JUSTICE  COURT HALL  BENGALURU
ಹೈಕೋರ್ಟ್‌ ಪೀಠದ ಮುಂದೆ ಕೈಗೆ ಗಾಯ ಮಾಡಿಕೊಂಡ ವ್ಯಕ್ತಿ
author img

By ETV Bharat Karnataka Team

Published : Apr 3, 2024, 3:42 PM IST

Updated : Apr 3, 2024, 3:56 PM IST

ಬೆಂಗಳೂರು: ನ್ಯಾಯಮೂರ್ತಿಗಳು ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಯೊಬ್ಬರು ರೇಜರ್‌ನಿಂದ ಗಾಯ ಮಾಡಿಕೊಂಡ ಘಟನೆ ಹೈಕೋರ್ಟ್‌ನ ಹಾಲ್‌ ಸಂಖ್ಯೆ 1ರಲ್ಲಿ ಇಂದು ನಡೆದಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಎಚ್.ಬಿ.ಪ್ರಭಾಕರ್ ಶಾಸ್ತ್ರಿ ಅವರಿದ್ದ ಪೀಠ ಪ್ರಕರಣವೊಂದರ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ವ್ಯಕ್ತಿ ಗಾಯ ಮಾಡಿಕೊಂಡರು. ಇದನ್ನು ಗಮನಿಸಿದ ನ್ಯಾಯಪೀಠ, ಕೂಡಲೇ ವ್ಯಕ್ತಿಯನ್ನು ವೈದ್ಯರ ಬಳಿಗೆ ಕರೆದೊಯ್ಯಲು ಪೊಲೀಸರಿಗೆ ಸೂಚಿಸಿತು. ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರು.

ಇದೇ ವೇಳೆ ನ್ಯಾಯಮೂರ್ತಿಗಳು ಸ್ಥಳದಲ್ಲಿದ್ದ ವಕೀಲರಿಗೆ, ರೇಜರ್ ಮುಟ್ಟಬೇಡಿ. ಸ್ಥಳದ ಪಂಚನಾಮೆ ನಡೆಸಬೇಕಾಗುತ್ತದೆ. ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರನ್ನು ಬರ ಹೇಳಿ ಎಂದರು.

ಸಾಕಷ್ಟು ಭದ್ರತೆ ಇದ್ದರೂ ಆ ವ್ಯಕ್ತಿ ಹೇಗೆ ಕೋರ್ಟ್‌ ಹಾಲ್‌ ಒಳಗೆ ನುಸುಳಿದರು ಎಂಬುದು ತಿಳಿದುಬರಬೇಕಿದೆ. ಹೈಕೋರ್ಟ್​​ ಭದ್ರತೆಗೆ ನಿಯೋಜಿಸಿರುವ ಪೊಲೀಸರು ಎಲ್ಲಿ ಹೋಗಿದ್ದಾರೆ ಎಂದು ನ್ಯಾ.ಎಚ್.ಬಿ.ಪ್ರಭಾಕರ್ ಶಾಸ್ತ್ರಿ ಪ್ರಶ್ನಿಸಿದರು.

"ಆತ ನೀಡಿದ ಕಡತವನ್ನು ನೀವೇಕೆ ಪಡೆದುಕೊಂಡಿರಿ?, ಅದನ್ನು ಪಡೆದ ಬಳಿಕ ಕೆಳಗಿಟ್ಟಿದ್ದೀರಿ. ಹೀಗಾಗಿ, ನಿಮ್ಮ ಬೆರಳಚ್ಚನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಕೋರ್ಟ್ ಅಧಿಕಾರಿ ಯಾವುದೇ ದಾಖಲೆಯನ್ನು ಸ್ವೀಕರಿಸುವಂತಿಲ್ಲ. ವಕೀಲರು ಕಡತ ನೀಡಿದ್ದರೆ ನೋಡಬಹುದಿತ್ತು. ಆದರೆ, ಅದನ್ನು ವ್ಯಕ್ತಿಯೊಬ್ಬರು ನೀಡಿದ್ದಾರೆ" ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಮೂಲದ ವ್ಯಕ್ತಿ: ಗಾಯಾಳು ವ್ಯಕ್ತಿಯನ್ನು ಮೈಸೂರು ಮೂಲದ ಶ್ರೀನಿವಾಸ್ (51) ಎಂದು ಗುರುತಿಸಲಾಗಿದೆ. ಸದ್ಯ ಆತನನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬರಬೇಕಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಅನರ್ಹತೆ ಕೋರಿರುವ ಅರ್ಜಿಯಲ್ಲಿ ದೋಷ: ಸಿಎಂ ಪರ ವಕೀಲರಿಂದ ಆಕ್ಷೇಪ - CM Siddaramaiah

Last Updated : Apr 3, 2024, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.