ETV Bharat / state

ರಾಜ್ಯದ 14 ಮಹತ್ವದ ಯೋಜನೆ ತ್ವರಿತಗತಿಯಲ್ಲಿ ಕೈಗೊಳ್ಳಬೇಕು : ಕೇಂದ್ರ ಸಚಿವ ವಿ. ಸೋಮಣ್ಣ - Union Minister V Somanna - UNION MINISTER V SOMANNA

ರಾಜ್ಯದ 14 ಮಹತ್ವದ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿದರು. ಇದೇ ರಾಜ್ಯದಲ್ಲಿ ಆಗಬೇಕಾಗಿರುವ ರೈಲ್ವೆ ಯೋಜನೆ ಮತ್ತು ಬಾಕಿ ಉಳಿದಿರುವ ಕಾಮಗಾರಿಗೆ ಭೂಸ್ವಾಧೀನಕ್ಕೆ ವೇಗ ನೀಡಬೇಕು. ಮುಂಬರುವ ವರ್ಷಗಳಲ್ಲಿ ಈ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

union-minister-v-somanna
ಕೇಂದ್ರ ಸಚಿವ ವಿ. ಸೋಮಣ್ಣ (ETV Bharat)
author img

By ETV Bharat Karnataka Team

Published : Jun 17, 2024, 11:00 PM IST

ಬೆಂಗಳೂರು : 9 ಹೊಸ ಸಾಲಿನ ಯೋಜನೆಗಳು ಮತ್ತು 5 ದ್ವಿಪಥಿಕರಣಗೊಳಿಸುವ ಯೋಜನೆಗಳು ಸೇರಿದಂತೆ 14 ಮಹತ್ವದ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಈ ಯೋಜನೆಗಳು ಒಟ್ಟು 1264 ಕಿಲೋಮೀಟರ್ ಹೊಸ ಮಾರ್ಗ ಮತ್ತು 707 ಕಿಲೋಮೀಟರ್ ದ್ವಿಪಥಿಕರಣಗೊಳಿಸುವಿಕೆಯನ್ನು ಒಳಗೊಂಡಿದೆ. ಸದ್ಯ 289 ಕಿಲೋಮೀಟರ್ ಹೊಸ ಮಾರ್ಗ ಮತ್ತು 502 ಕಿಲೋಮೀಟರ್ ಡಬ್ಲಿಂಗ್ ಲೈನ್ ಈಗಾಗಲೇ ಯಶಸ್ವಿಯಾಗಿ ಕಾರ್ಯಾರಂಭಗೊಂಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಕರ್ನಾಟಕ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಟ್ಗಿ - ಕೂಡಗಿ - ಗದಗ, ಯಶವಂತಪುರ - ಚನ್ನಸಂದ್ರ, ಬೈಯಪ್ಪನಹಳ್ಳಿ - ಹೊಸೂರು, ಬೆಂಗಳೂರು - ವೈಟ್‌ಫೀಲ್ಡ್, ಹೊಸಪೇಟೆ - ಹುಬ್ಬಳ್ಳಿ - ಲೋಂಡಾ - ತಿನೈಘಾಟ್ - ವಾಸ್ಕೋ ಡ ಗಾಮಾ ಸೇರಿದಂತೆ 9 ಒಂಬತ್ತು ಹೊಸ ಸಾಲಿನ ಯೋಜನೆಗಳಿವೆ.

ಇನ್ನು ತುಮಕೂರು - ಕಲ್ಯಾಣದುರ್ಗ ಮೂಲಕ ರಾಯದುರ್ಗ, ತುಮಕೂರು - ಚಿತ್ರದುರ್ಗ - ದಾವಣಗೆರೆ, ಗಿಣಿಗೇರಾ-ರಾಯಚೂರು, ಬಾಗಲಕೋಟೆ-ಕುಡಚಿ, ಗದಗ - ವಾಡಿ, ಕಡೂರು - ಚಿಕ್ಕಮಗಳೂರು, ಶಿವಮೊಗ್ಗ ಶಿಕಾರಿಪುರ - ರಾಣೆಬೆನ್ನೂರು, ಬೆಳಗಾವಿ - ಕಿತ್ತೂರು ಮಾರ್ಗವಾಗಿ ಧಾರವಾಡ, ಹಾಸನ - ಬೇಲೂರು ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸಲು ರೈಲ್ವೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮತ್ತು ಕೆ- ರೈಡ್ ಸೇರಿದಂತೆ ವಿವಿಧ ಮಧ್ಯಸ್ಥಗಾರರ ನಡುವಿನ ಸಹಯೋಗದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

union-minister-v-somanna
ಕೇಂದ್ರ ಸಚಿವ ವಿ. ಸೋಮಣ್ಣ (ETV Bharat)

ಬಾಕಿ ಉಳಿದಿರುವ ಕಾಮಗಾರಿಗೆ ಭೂಸ್ವಾಧೀನಕ್ಕೆ ವೇಗ ನೀಡಬೇಕು. ಮುಂಬರುವ ವರ್ಷಗಳಲ್ಲಿ ಎಲ್ಲಾ ಬಾಕಿ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಬೇಕು. ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರೈಲುಗಳ ವೇಗವನ್ನು ಹೆಚ್ಚಿಸಲು ಎಲ್ಲಾ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕುವ ಸರ್ಕಾರದ ಯೋಜನೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಬೆಂಗಳೂರು ಸುತ್ತಮುತ್ತಲಿನ ಲೆವೆಲ್ ಕ್ರಾಸಿಂಗ್​ಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಮುಖ್ಯ ಆಡಳಿತಾಧಿಕಾರಿ ರಾಮಗೋಪಾಲ್ ಮತ್ತು ಇತರ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಪ್ರಧಾನಿ ಮೋದಿ ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ: ವಿ.ಸೋಮಣ್ಣ - V Somanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.