ETV Bharat / state

ಹುಬ್ಬಳ್ಳಿ: ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು - Two Youths Drowned - TWO YOUTHS DROWNED

ಈಜಲು ಹೋಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು (Etv Bharat)
author img

By ETV Bharat Karnataka Team

Published : May 5, 2024, 12:45 PM IST

ಹುಬ್ಬಳ್ಳಿ: ಕೆರೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ದೇವರಗುಡಿಹಾಳ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ. ಗದಗದ ದೀಪಕ್​ ರೋಣದ(21) ಮತ್ತು ವಿದ್ಯಾನಗರ ಲೋಕಪ್ಪನಹಕ್ಕಲ ನಿವಾಸಿ ಮೈಲಾರಿ (24) ಮೃತರು.

ಏಳು ಮಂದಿ ಸ್ನೇಹಿತರು ದೇವರಗುಡಿಹಾಳ ಕರೆಗೆ ಈಜಲು ತೆರಳಿದ್ದರು. ಮೊದಲು ನವೀನ್​ ಮೇಲಗೊಪ್ಪ, ಮುಜಾಮಿಲ್, ಅಕ್ಷಯ್​, ರಜತ್, ಇಸಾಕ್ ಕೆರೆಗಿಳಿದು ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಆದರೆ ದೀಪಕ್ ಮತ್ತು ಮೈಲಾರಿ ಈಜುತ್ತಾ ಕೆರೆ ಮಧ್ಯೆ ಹೋಗಿ ವಾಪಸ್ ಬರುವಾಗ ಮುಳುಗಿದ್ದಾರೆ. ತಕ್ಷಣ ದಡಕ್ಕೆ ಬಂದಿದ್ದ ಸ್ನೇಹಿತರು ಅವರಿಗೆ ಹಗ್ಗ ನೀಡಲು ಮುಂದಾದರೂ ಪ್ರಯೋಜನವಾಗಿಲ್ಲ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹಾಗು ಸ್ಥಳೀಯರು ಇಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ನಿನ್ನೆ ಬೆಳಗ್ಗೆ 9 ಗಂಟೆಗೆ ಓರ್ವನ ಮೃತದೇಹ ಹಾಗು 11 ಗಂಟೆಯ ವೇಳೆಗೆ ಮತ್ತೊಬ್ಬನ ಮೃತದೇಹಗಳು ದೊರೆತಿವೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು - ಕೊಡಗಿನಲ್ಲಿ ಸಿಡಿಲು ಸಹಿತ ಧಾರಾಕಾರ ಮಳೆ: ಇಬ್ಬರ ಸಾವು, ಹಲವು ಅವಾಂತರ ಸೃಷ್ಟಿ - Heavy Rainfall

ETV Bharat Logo

Copyright © 2024 Ushodaya Enterprises Pvt. Ltd., All Rights Reserved.