ETV Bharat / state

ಪ್ರಯಾಣಿಕನಿಗೆ ಚಾಕು ತೋರಿಸಿ ಸುಲಿಗೆ: ಆಟೋ ಚಾಲಕ ಸೇರಿ ಇಬ್ಬರ ಬಂಧನ - Two arrested

author img

By ETV Bharat Karnataka Team

Published : 2 hours ago

ವಕೀಲ ರಾಮಕೃಷ್ಣ ಅವರು ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Accused and Auto
ಆರೋಪಿಗಳು ಹಾಗೂ ಆಟೋ (ETV Bharat)

ಬೆಂಗಳೂರು: ರಾತ್ರಿ ವೇಳೆ ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆಟೋ ಚಾಲಕ ಸೇರಿ ಇಬ್ಬರನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕ ಶಿವಕುಮಾರ್ ಹಾಗೂ ಮಂಟೇಪ್ಪ ಬಂಧಿತರು. ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ದೂರುದಾರ ರಾಮಕೃಷ್ಣ ಎಂಬುವವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.

"ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಶಿವಕುಮಾರ್ ನಂದಿನಿ ಲೇಔಟ್ ನಿವಾಸಿಯಾಗಿದ್ದು, ವ್ಯಕ್ತಿಯೊಬ್ಬರಿಂದ ಆಟೋ ಬಾಡಿಗೆ ಪಡೆದು ಜೀವನ ನಡೆಸುತ್ತಿದ್ದ. ಹೆಚ್ಚಿನ ಹಣ ಸಂಪಾದನೆ ಮಾಡಲು ವಾಮಮಾರ್ಗ ತುಳಿದ ಚಾಲಕನಿಗೆ ಸಹಚರ ಮಂಟೇಪ್ಪ ಸಾಥ್ ನೀಡಿದ್ದ. ಸೆ.19ರಂದು ದೂರುದಾರ ರಾಮಕೃಷ್ಣ ಅವರು ಹೊರ ಜಿಲ್ಲೆಯಲ್ಲಿ ಕೇಸೊಂದನ್ನು ಮುಗಿಸಿ ವಾಪಸ್ ನಗರಕ್ಕೆ ಬಂದು ನವರಂಗ್ ಚಿತ್ರಮಂದಿರ ಬಳಿ ಆರೋಪಿಯ ಆಟೋ ಹತ್ತಿದ್ದರು" ಎಂದು ಪೊಲೀಸರು ತಿಳಿಸಿದರು.

"ಮಾರ್ಗಮಧ್ಯೆ ಮತ್ತೊಬ್ಬ ಆರೋಪಿ ಮಂಟೇಪ್ಪ ಆಟೋ ಹತ್ತಿದ್ದ. ಇದನ್ನು ಪ್ರಶ್ನಿಸಿದಾಗ ಏಕಾಏಕಿ ಚಾಕು ತೆಗೆದು ವಕೀಲನ ಕುತ್ತಿಗೆಗೆ ಇಟ್ಟಿದ್ದ. ಮಧ್ಯರಾತ್ರಿ ಆದ ಕಾರಣ ಯಾರು ಇರದ ರಸ್ತೆಗಳಲ್ಲಿ ಆಟೋವನ್ನು ಸುತ್ತಾಡಿಸಿ ಸುಲಿಗೆಗೆ ಮುಂದಾಗಿದ್ದಾರೆ. ಕೊನೆಗೆ ಕ್ಯೂಟೀಸ್ ಆಸ್ಪತ್ರೆ ಬಳಿ ಬಂದು ವಕೀಲರ ಬಳಿ ಇದ್ದ 900 ರೂಪಾಯಿ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ಪೊಲೀಸರಿಗೆ ಹೇಳಿದರೆ ಜೈಲಿಗೆ ಹೋಗಿ ವಾಪಸ್​​ ಬಂದು ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದರು" ಎಂದು ಹೇಳಿದರು.

ಈ ವೇಳೆ ಅಸ್ಪಷ್ಟವಾಗಿ ಆಟೋದ ಕೆಲ ನಂಬರ್​ಗಳನ್ನು ನೋಟ್ ಮಾಡಿದ್ದ ವಕೀಲ ಅದನ್ನ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಅಲರ್ಟ್ ಆದ ಪೊಲೀಸರು ರಾತ್ರೋರಾತ್ರಿ ಆ ನಂಬರ್​ಗಳನ್ನು ನೋಟ್ ಮಾಡಿ ಆಟೋದ ಗುರುತಿನ ಮಾಹಿತಿ ಪಡೆದು ಆಟೋ ಸ್ಟ್ಯಾಂಡ್​ಗಳಲ್ಲಿ ವಿಚಾರಣೆ ನಡೆಸಿದ್ದಾರೆ. ನಂತರ ಕೆಲ ಆಟೋ ನಂಬರ್​ಗಳನ್ನು ಕಲೆ ಹಾಕಿದ ಹಿನ್ನೆಲೆ ಆಟೋ ಮಾಲೀಕರನ್ನು ಸಂಪರ್ಕಿಸಿದಾಗ ನಂದಿನಿ ಲೇಔಟ್ ವಿಳಾಸ ತೋರಿಸಿದೆ. ಅಲ್ಲಿ ವಿಚಾರಿಸಿದಾಗ ಆ ಆಟೋ ಶಿವಕುಮಾರ್ ಎಂಬಾತನಿಗೆ ಬಾಡಿಗೆ ನೀಡಲಾಗಿತ್ತು. ಈ ನಂಬರ್​ನ್ನು ಟ್ರ್ಯಾಕ್ ಮಾಡಿದಾಗ ಮತ್ತೊಂದು ಕೃತ್ಯಕ್ಕೆ ಸ್ಕೆಚ್ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಆಟೋವನ್ನು ಬೆನ್ನಟ್ಟಿ ಆರೋಪಿಗಳನ್ನು ವಿಚಾರಿಸಿದಾಗ ಅಸಲಿ ಸಂಗತಿ ಹೊರ ಬಿದ್ದಿದೆ.

ದೂರು ದಾಖಲಾದ ಎರಡೇ ಗಂಟೆಗಳಲ್ಲಿ ಈ ಪ್ರಕರಣ ಬಯಲಿಗೆ ಬಂದಿದೆ. ಇನ್ನು ಎರಡು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಗಾಂಜಾ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಟಾರ್​​ ಫುಟ್ಬಾಲರ್​ ಬಂಧನ; ₹6 ಕೋಟಿ ಮೌಲ್ಯದ ಮಾಲು ವಶ - Star Footballer Arrested

ETV Bharat Logo

Copyright © 2024 Ushodaya Enterprises Pvt. Ltd., All Rights Reserved.