ಬಂಟ್ವಾಳ: ಬಾವಿಗೆ ರಿಂಗ್ ಹಾಕುವಾಗ ಆಮ್ಲಜನಕದ ಕೊರತೆ ಉಂಟಾಗಿ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆಯಿತು. ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ನಿವಾಸಿಗಳಾದ ಇಬ್ಬು ಯಾನೆ ಇಬ್ರಾಹಿಂ ಮತ್ತು ಮಲಾರ್ ನಿವಾಸಿ ಆಲಿ ಸಾವನ್ನಪ್ಪಿದವರು.
ಅಳಕೆ ಸಮೀಪ ಪಡಿಬಾಗಿಲಿನಲ್ಲಿ ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಓರ್ವ ಕಾರ್ಮಿಕ ಬಾವಿಗಿಳಿದಿದ್ದರು. ಕೆಳಗಿಳಿದವರು ಮೇಲೇರಲಾರದೆ ಒದ್ದಾಟ ನಡೆಸುತ್ತಿರುವುದನ್ನು ಕಂಡ ಮತ್ತೊಬ್ಬರು ಅವರ ಸಹಾಯಕ್ಕೆ ಕೆಳಗಿಳಿದಿದ್ದರು. ಕೆಳಗಿಳಿದ ಇಬ್ಬರಿಗೂ ಆಮ್ಲಜನಕದ ಕೊರತೆ ಉಂಟಾಗಿದೆ. ಇಬ್ಬರೂ ಹೊರಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ನಂತರ ಸ್ಥಳೀಯರ ಸಹಾಯದಿಂದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರ ನೇತೃತ್ವದ ತಂಡ ಇಬ್ಬರ ಶವಗಳನ್ನು ಮೇಲಕ್ಕೆತ್ತಿದರು. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇಬ್ರಾಹಿಂ ಕಳೆದ 20 ವರ್ಷದಿಂದ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ರಾಯಚೂರು: ಹನುಮಾನ್ ಜಯಂತಿಗೆ ನೀರು ತರುವಾಗ ಬೊಲೆರೋ ಹರಿದು ಮೂವರು ಸಾವು - Raichur accident