ETV Bharat / state

ನೆಲಮಂಗಲ: ವಿಷಾನಿಲ ಸೇವಿಸಿ ಇಬ್ಬರು ಸಾವು; ಕಾರ್ಖಾನೆ ಮಾಲೀಕ ಸೇರಿ ಮೂವರ ಬಂಧನ

ಒಳಚರಂಡಿ ಸಂಸ್ಕರಣಾ ಘಟಕದೊಳಗೆ ಇಳಿದ ಇಬ್ಬರು ಕಾರ್ಮಿಕರು ವಿಷಾನಿಲ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ.

Death of workers due to poisoning
ಮೃತ ಕಾರ್ಮಿಕರು (ETV Bharat)
author img

By ETV Bharat Karnataka Team

Published : Nov 5, 2024, 11:17 AM IST

ನೆಲಮಂಗಲ: ಕಾರ್ಖಾನೆಯೊಂದರ ಒಳಚರಂಡಿ ಸಂಸ್ಕರಣಾ ಘಟಕ(STP) ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ವಿಷಾನಿಲ ಸೇವನೆಯಿಂದ ಮೃತಪಟ್ಟ ಘಟನೆ ತಾಲೂಕಿನ ದಾಬಸ್‌ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಮಧುಗಿರಿಯ ಲಿಂಗರಾಜು (26), ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ನವೀನ್ (26) ಮೃತ ಕಾರ್ಮಿಕರು.

ಕಾರ್ಖಾನೆಯ ಸುರಕ್ಷತಾ ನಿಯಮಗಳ ಉಲ್ಲಂಘನೆ, ಯಾವುದೇ ಸುರಕ್ಷತೆಗಳನ್ನು ಕಾರ್ಮಿಕರಿಗೆ ನೀಡದೇ ನಿರ್ಲಕ್ಷ್ಯತೆ ವಹಿಸಿದ ಕಾರ್ಖಾನೆ ಮಾಲೀಕ ಮಯೂರ್ ಎಂಬವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 31ರ ಸಂಜೆ 6:30ರ ವೇಳೆಗೆ ಈ ದುರಂತ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತ ಯುವಕರು ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದು, ಎಸ್​ಟಿಪಿ ಪ್ಲಾಂಟ್ ಅಪರೇಟರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿಯು ಕಾರ್ಖಾನೆಯ ಕೊಳಚೆ ನೀರು ಸಂಸ್ಕರಣಾ ಘಟಕ ಸ್ವಚ್ಛಗೊಳಿಸುವ ಹೊರ ಗುತ್ತಿಗೆ ಪಡೆದಿದ್ದು, ಅ.31ರಂದು ನವೀನ್ ಮತ್ತು ಲಿಂಗರಾಜು ಘಟಕ ಸ್ವಚ್ಛಗೊಳಿಸುವ ಕೆಲಸಕ್ಕೆ ತೆರಳಿದ್ದರು. ಅಂದು ಇಬ್ಬರು ಸಂಸ್ಕರಣಾ ಘಟಕದ ತೊಟ್ಟಿಗೆ ಇಳಿದಿದ್ದು, ಅದರೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲ ಸೇವೆಯಿಂದ ಮೂರ್ಛೆ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ತೊಟ್ಟಿಯಲ್ಲಿ ವಿಷಾನಿಲ ಸಂಗ್ರಹವಾಗಿರುತ್ತದೆ ಎಂಬ ಮಾಹಿತಿ ತಿಳಿದಿದ್ದರೂ ಕಾರ್ಖಾನೆಯವರು ಯಾವುದೇ ಸುರಕ್ಷತಾ ಉಪಕರಣಗಳನ್ನು ನೀಡದೇ ಕಾರ್ಮಿಕರನ್ನು ಇಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

''ಕಾರ್ಖಾನೆಯು ಒಳಚರಂಡಿ ಸಂಸ್ಕರಣಾ ಘಟಕವನ್ನು ನಿರ್ವಹಿಸಲು ನಿಗದಿತ ಮಾನದಂಡಗಳನ್ನಾಗಲಿ ಅಥವಾ ಅದನ್ನು ಸ್ವಚ್ಛಗೊಳಿಸಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನನ್ನಾಗಲಿ ಅನುಸರಿಸದೇ ಇರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಖಾನೆ ಮಾಲೀಕ ಮಯೂರ್, ಖಾಸಗಿ ಕಂಪನಿ ಮಾಲೀಕ ರಮೇಶ್ ಹಾಗೂ ಸೈಟ್ ಉಸ್ತುವಾರಿ ಸಂತೋಷ್ ಎಂಬುವರನ್ನು ಬಂಧಿಸಲಾಗಿದೆ" ಎಂದು ಗ್ರಾಮಾಂತರ ಎಸ್​ಪಿ ಸಿ.ಕೆ.ಬಾಬಾ ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಸಾವು - wild elephant attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.