ಚಾಮರಾಜನಗರ: ಆಹಾರವೆಂದು ಭಾವಿಸಿ ಸಿಡಿಮದ್ದು ಜಗಿದು ಎರಡು ಹಸುಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು.
ಇವು ಕೌದಳ್ಳಿ ಗ್ರಾಮದ ಅಕ್ಕಮ್ಮ ಎಂಬವರಿಗೆ ಸೇರಿದ ಹಸುಗಳಾಗಿವೆ. ಕಿಡಿಗೇಡಿಗಳು ಅಕ್ರಮವಾಗಿ ಇಟ್ಟಿದ್ದ ಸಿಡಿಮದ್ದಿನಿಂದಾಗಿ ಹಸುಗಳ ಮುಖ ಛಿದ್ರವಾಗಿದೆ.
ಬೆಳಗ್ಗೆ ಎಂದಿನಂತೆ ಜಮೀನಿನ ಸಮೀಪ ಮೇವು ಅರಸಿ ತೆರಳಿದ್ದ ರಾಸುಗಳು ಸಿಡಿಮದ್ದಿಗೆ ಬಾಯಿ ಹಾಕುತ್ತಿದ್ದಂತೆ ಸ್ಫೋಟಗೊಂಡಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ರಾಮಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕುಕ್ಕರ್ ಸ್ಫೋಟ: ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ 8 ಜನರಿಗೆ ಗಾಯ - Cooker Blast